ಸ್ಯಾಂಡಲ್ ವುಡ್ ನಟಿ ಅಮೂಲ್ಯಾ ಅವಳಿ ಮಕ್ಕಳಿಗೆ ಹುಟ್ಟುಹಬ್ಬದ ಸಂಭ್ರಮ. ಅಮೂಲ್ಯಾ ಮತ್ತು ಜಗದೀಶ್ ದಂಪತಿ ಮುದ್ದು ಮಕ್ಕಳ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಅಮೂಲ್ಯಾ ಮುದ್ದು ಮಕ್ಕಳಾದ ಅಥರ್ವ್ ಮತ್ತು ಆಧವ್ ಸುಂದರ ಫೋಟೋಗಳನ್ನು ಶೇರ್ ಮಾಡಿ ಹೃದಯಸ್ಪರ್ಶಿ ಸಾಲನ್ನು ಹಂಚಿಕೊಂಡಿದ್ದಾರೆ.
27
ಅಂದಹಾಗೆ ಮಕ್ಕಳ ಮೊದಲ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅಮೂಲ್ಯಾ ಮತ್ತು ಜಗದೀಶ್ ದಂಪತಿ ಮದುವೆಯಾದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೌದು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಸ್ವಾಮಿ ಅವರ ಆಶೀರ್ವಾದ ಪಡೆದಿದ್ದಾರೆ.
37
ಅಮೂಲ್ಯಾ ಮತ್ತು ಜಗದೀಶ್ ಇಬ್ಬರೂ 2017ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ಆದಿಚುಂಚನಗಿರಿಯಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಅಮೂಲ್ಯಾ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದರು ಜಗದೀಶ್. ಮದುವೆಯಾಗಿ 5 ವರ್ಷಗಳ ಬಳಿಕ ಮುದ್ದಾದ ಮಕ್ಕಳನ್ನು ಸ್ವಾಗತಿಸಿದರು.
47
ನಟಿ ಅಮೂಲ್ಯಾ ಮಾರ್ಚ್ 1, 2022ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ನಾಲ್ಕು ತಿಂಗಳ ಬಳಿಕ ಮಕ್ಕಳ ಕ್ಯೂಟ್ ಕೈಗಳ ಪೋಟೋವನ್ನು ರಿವೀಲ್ ಮಾಡಿದ್ದರು. ಅಮೂಲ್ಯಾ ಕ್ಯೂಟ್ ಮಕ್ಕಳು ಹೇಗಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಬಳಿಕ 6 ತಿಂಗಳಿಗೆ ಮಕ್ಕಳ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದರು.
57
ಇದೀಗ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಥರ್ವ್ ಮತ್ತು ಆಧವ್ ಇಬ್ಬರ ಫೋಟೋಗಳನ್ನು ಜಗದೀಶ್ ಹಂಚಿಕೊಂಡಿದ್ದಾರೆ.
67
'ಇಂದು ನಮ್ಮ ಮಕ್ಕಳಾದ ಅಥರ್ವ್ - ಆಧವ್ ಅವರ ಮೊದಲ ವರ್ಷದ ಜನ್ಮದಿನದ ಅಂಗವಾಗಿ ನಾಗಮಂಗಲದಲ್ಲಿರುವ ಶ್ರೀ ಆದಿಚುಂಚನಗಿರಿ ಮಠಕ್ಕೆ ತೆರಳಿ, ಶ್ರೀ ಕಾಲಭೈರವೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆಯಲಾಯಿತು. ಪರಮಪೂಜ್ಯ ಡಾ| ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು' ಎಂದು ಹೇಳಿದ್ದಾರೆ.
77
'ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ| ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯಲಾಯಿತು. ಬಳಿಕ, ಮಠದ ಶಾಲಾ ಮಕ್ಕಳಿಗೆ ಸಿಹಿ ಹಂಚಿ, ಮಕ್ಕಳ ಜನ್ಮದಿನವನ್ನು ಆಚರಿಸಲಾಯಿತು' ಎಂದರು.