ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಅವಳಿ ಗಂಡು ಮಕ್ಕಳು ಇಂದು ಒಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
211
ಮಕ್ಕಳ ಫೋಟೋಶೂಟ್‌ಗಳನ್ನು ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಮೂಲ್ಯ ಅಪ್ಲೋಡ್ ಮಾಡಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಕಾಮೆಂಟ್‌ನಲ್ಲಿ ವಿಶ್ ಮಾಡಿದ್ದಾರೆ.
311
'Happy 1st year to my Sonshines. ಅಥರ್ವ್ ಆಧವ್ ನೀವಿಬ್ಬರೂ ನನ್ನ ಹೃದಯದಲ್ಲಿ ದೊಡ್ಡ ಜಾಗ ಪಡೆದುಕೊಂಡಿದ್ದೀರಿ. ನಿಮ್ಮಿಬ್ಬರಿಂದ ನನ್ನ ಲೈಫ್ ಬ್ಯೂಟಿಫುಲ್ ಮತ್ತು ಸಂತೋಷದಿಂದ ತುಂಬಿದೆ. ಮೈನ್ ಫಾರ್‌ಎವರ್' ಎಂದು ಬರೆದುಕೊಂಡಿದ್ದಾರೆ.
411
ಮಕ್ಕಳ ಹುಟ್ಟುಹಬ್ಬದ ಪ್ರಯುಕ್ತು ನಾಗಮಂಗಲದಲ್ಲಿರುವ ಶ್ರೀ ಆದಿಚುಂಚನಗಿರಿ ಮಠಕ್ಕೆ ತೆರಳಿ, ಶ್ರೀ ಕಾಲಭೈರವೇಶ್ವರ ದೇವರಿಗೆ ಅಮೂಲ್ಯ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
511
ಪರಮಪೂಜ್ಯ ಡಾ| ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತ್ತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ| ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯಲಾಯಿತು' ಎಂದು ಜಗದೀಶ್ ಬರೆದುಕೊಂಡಿದ್ದಾರೆ.
611
ಫೋಟೋಗಳು ತುಂಬಾ ಕ್ಯೂಟ್ ಆಗಿದೆ, ಹ್ಯಾಪಿ ಬರ್ತಡೇ ಅವಳಿ ಮಕ್ಕಳೇ, ಒಬ್ಬ ನೋಡಲು ಅಪ್ಪ ಮತ್ತೊಬ್ಬ ನೋಡಲು ಅಮ್ಮನಂತೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
711
2022ರ ಕೃಷ್ಣ ಜನ್ಮಾಷ್ಟಮಿದಿನ ಮೊದಲ ಸಲ ಮಕ್ಕಳ ಫೋಟೋ ರಿವೀಲ್ ಮಾಡಿದ್ದರು. ಮಗು ಮಾತ್ರವಲ್ಲ ಅಮ್ಮ ಕೂಡ ಕ್ಯೂಟ್ ಆಗಿದ್ದಾರೆ ಎನ್ನುತ್ತಿದ್ದರು ಅಭಿಮಾನಿಗಳು.
811
ಪ್ರತಿ ಹಬ್ಬ ಮತ್ತು ಸ್ಪೆಷಲ್ ದಿನ ಅಮೂಲ್ಯ ಮಕ್ಕಳಿಗೆ ಫೋಟೋಶೂಟ್ ಮಾಡಿಸುತ್ತಾರೆ. ಅದರಲ್ಲಿ ಪಾಪ್ ಕಾರ್ನ್ ಡಬ್ಬದಲ್ಲಿ ಕುಳಿತುಕೊಂಡಿರುವುದು, ರಾಘವೇಂದ್ರ ಸ್ವಾಮಿಗಳ ರೀತಿ ವಸ್ತ್ರ ಧರಿಸಿರುವುದು ತುಬಂಬಾ ಹೈ ಲೈಟ್ ಆಗಿದೆ.
911
ಅಮೂಲ್ಯ ಯಾವುದೇ ಪೋಸ್ಟ್ ಹಾಕಿದರೂ ಮಕ್ಕಳ ಬಗ್ಗೆ ಅಭಿಮಾನಿಗಳು ವಿಚಾರಿಸಿಕೊಳ್ಳುತ್ತಾರೆ. ಹೀಗಾಗಿ ಇಂದು ಅವರ ಹೆಸರಿನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ.
1011
ಅವಳು ಮಕ್ಕಳು ಆಗಷ್ಟೇ ಹುಟ್ಟಿದ ಪೋಟೊ ಅಪ್ಲೋಡ್ ಮಾಡಿ 'ಪ್ರಪಂಚಕ್ಕೆ ನಾನು ಇಂದು ಕಾಲಿಟ್ಟು ಒಂದು ವರ್ಷ. ಅಪ್ಪ ಅಮ್ಮನ ಜೊತೆ ಕ್ಲಿಕ್ ಮಾಡಿಕೊಂಡಿರುವ ಮೊದಲ ಫೋಟೋ' ಎಂದು ಕ್ಯಾಪ್ಶನ್ ನೀಡಲಾಗಿದೆ.
1111
ಅಥರ್ವ್ ಆಧವ್ ಹೆಸರಿನಲ್ಲಿ ಅಕೌಂಟ್ ತೆರೆದು ನಾಲ್ಕು ಗಂಟೆಗಳಲ್ಲಿ 600 ಫಾಲೋವರ್ಸ್ ಆಗಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮಕ್ಕಳ ಫೋಟೋ ಅಪ್ಲೋಡ್ ಮಾಡುವುದು ಆದರೆ ಅಮೂಲ್ಯ ಅಕೌಂಟ್ ಕ್ರಿಯೇಟ್ ಮಾಡಿರುವುದಕ್ಕೆ ಆಶ್ಚರ್ಯ ಪಟ್ಟಿದ್ದಾರೆ.