ವಿಷ್ಣು ದಾದಾಗೆ ರಮ್ಯಾ ವಿಶ್; 5 ಫೇವರೆಟ್‌ ಸಾಂಗ್ಸ್ ಯಾವುದು ಗೊತ್ತಾ?

First Published | Sep 19, 2020, 12:42 PM IST

ಸಾಹಸ ಸಿಂಹ  ಡಾ.ವಿಷ್ಣುವರ್ಧನ್ ಅವರ 70ನೇ ಹುಟ್ಟುಹಬ್ಬಕ್ಕೆ ಶುಭಕೋರಿದ ಮೋಹಕ ತಾರೆ ರಮ್ಯಾ ತಮ್ಮ ನೆಚ್ಚಿನ ಟಾಪ್‌ 5 ಹಾಡುಗಳ ಲಿಸ್ಟ್ ಶೇರ್ ಮಾಡಿದ್ದಾರೆ.
 

ದಶಕಗಳ ಕಾಲ ಸಿನಿ ಪ್ರೇಮಿಗಳ ಪ್ರೀತಿಗೆ ಪಾತ್ರರಾಗಿರುವ ನಟ ವಿಷ್ಣುವರ್ಧನ್ 70ನೇ ಜನ್ಮ ದಿನದ ಸವಿನೆಪು.
ವಿಷ್ಣುವರ್ಧನ್‌ ಅವರನ್ನು ಅಪ್ಪಾಜಿ ಎಂದೇ ಕರೆಯುವ ರಮ್ಯಾ.
Tap to resize

ದಾದಾ ಹುಟ್ಟುಹಬ್ಬದ ಪ್ರಯುಕ್ತ ಅವರ ಚಿತ್ರದ ಫೇವರೆಟ್ ಸಾಂಗ್‌ ಲಿಸ್ಟ್‌ ಶೇರ್ ಮಾಡಿಕೊಂಡಿದ್ದಾರೆ.
'ಅರಸು ಚಿತ್ರ 100 ದಿನ ಪೂರೈಸಿದ ಪ್ರಯುಕ್ತ ಅವರಿಂದ ಪ್ರಶಸ್ತಿ ಪಡೆದುಕೊಂಡೆ. ಅದ್ಭುತ ಕ್ಷಣಗಳು,' ಎಂದು ಬರೆದುಕೊಂಡಿದ್ದಾರೆ.
ನೂರೊಂದು ನೆನಪು ಹಾಡು (ನನ್ನ ತಾಯಿ ನೆಚ್ಚಿನ ಸಾಂಗ್).
ಬಾರೆ ಸಂತೆಗೆ ಹೋಗೋಣಾ ಬಾ (ಚಿಕ್ಕ ವಯಸ್ಸಿನಿಂದಲೂ ನಾನು ಈ ಸಾಂಗ್ ಎಂಜಾಯ್ ಮಾಡುತ್ತಿದೆ).
ಪ್ರೀತಿಯ ನನ್ನ ಉಸಿರು (ಈಗಲೂ ಡ್ಯಾನ್ಸ್ ಮಾಡಲು ಆಯ್ಕೆ ಮಾಡಿಕೊಳ್ಳುವ ಸಾಂಗ್.)
ಚೆಲುವೆ ನೀನು ನಕ್ಕರೆ ( ನಾನು ಥಿಯೇಟರ್‌ನಲ್ಲಿ ವೀಕ್ಷಿಸಿದ ಅವರ ಮೊದಲ ಸಿನಿಮಾ)
ಪ್ರೇಮ ಚಂದ್ರಮಾ (ಲೆಕ್ಕವಿಲ್ಲದ್ದಷ್ಟು ಸಲ ಇದನ್ನು ಉದಯ ಟಿವಿಯಲ್ಲಿ ನೋಡಿದ್ದೀನಿ )

Latest Videos

click me!