ಸುದೀಪ್‌- ಇಂದ್ರಜಿತ್‌ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ!

First Published | Sep 18, 2020, 1:07 PM IST

ನಟ ಸುದೀಪ್‌ ಅವರ ಹೆಸರಿನಲ್ಲಿ ಮತ್ತೊಂದು ಸಿನಿಮಾ ಕೇಳಿ ಬರುತ್ತಿದೆ. ಈ ಬಾರಿ ಕನ್ನಡದ್ದೇ ಸಿನಿಮಾ ಎಂಬುದು ವಿಶೇಷ. ಅಂದಹಾಗೆ ಇದು ಇಂದ್ರಜಿತ್‌ ನಿರ್ದೇಶನದ ಚಿತ್ರದ ವಿಚಾರ.

ಅಚ್ಚರಿಯಾದರೂ ಇದು ನಿಜ. ಕಿಚ್ಚ ಸುದೀಪ್‌ ಅವರಿಗೆ ಇಂದ್ರಜಿತ್‌ ಲಂಕೇಶ್‌ ಅವರು ಸಿನಿಮಾ ಮಾಡುತ್ತಾರೆ.
ಅವರ ಹುಟ್ಟು ಹಬ್ಬದಂದು ಈ ಬಗ್ಗೆ ಒಂದು ಪಕ್ಕಾ ಮಾತುಕತೆ ಆಗಿದೆ.
Tap to resize

ಮುಂಗಡವಾಗಿಯೂ ಹಣ ಒಂದಿಷ್ಟುಸಂಭಾವನೆ ಕೊಟ್ಟಿದ್ದು, ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುವುದು ನಿಜ ಎನ್ನುತ್ತಿದೆ ಗಾಂಧಿನಗರ.
ಇತ್ತೀಚೆಗೆ ಸುದೀಪ್‌ ಹುಟ್ಟುಹಬ್ಬದ ಅಂಗವಾಗಿ ಜತೆಯಾಗಿ ಇಬ್ಬರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲದೆ ಅವರಿಬ್ಬರು ಆತ್ಮೀಯ ಸ್ನೇಹಿತರು ಕೂಡ.
ಹೀಗಾಗಿ ಸುದೀಪ್‌ ಜತೆ ಸಿನಿಮಾ ಮಾಡಬೇಕೆಂದು ಕಳೆದ ಎಂಟು ತಿಂಗಳಿನಿಂದ ಪ್ಲಾನ್‌ ಮಾಡಿಕೊಳ್ಳುತ್ತಿದ್ದಾರೆ ಇಂದ್ರಜಿತ್‌ ಲಂಕೇಶ್‌.
ಮೊನ್ನೆ ನಡೆದ ಸುದೀಪ್‌ ಹುಟ್ಟುಹಬ್ಬದಂದು ಇದಕ್ಕೊಂದು ರೂಪುರೇಷ ಸಿಕ್ಕಿದೆ ಎನ್ನಲಾಗುತ್ತಿದೆ.
ಫ್ಯಾಂಟಮ್‌’, ‘ಕೋಟಿಗೊಬ್ಬ 3’ ಚಿತ್ರಗಳ ನಂತರ ಇಂದ್ರಜಿತ್‌ ಜತೆಗೆ ಸಿನಿಮಾ ಮಾಡುವ ಸಾಧ್ಯತೆಗಳು ಇವೆ ಎಂಬುದು ಈಗಿನ ಸುದ್ದಿ. ಆದರೆ, ಈ ಬಗ್ಗೆ ಇಬ್ಬರು ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.

Latest Videos

click me!