ಪ್ರೀತಿಯ ನಾಯಿಯನ್ನು ಕಳೆದುಕೊಂಡ ನಟಿ, ಶ್ರಾದ್ಧದ ಫೋಟೋ ಜೊತೆ 'ಕ್ಷಮಿಸಿ..' ಎಂದು ಪೋಸ್ಟ್‌!

Published : Jun 28, 2024, 04:13 PM IST

Priyanka Thimmesh Dog Death ನಟಿ ಪ್ರಿಯಾಂಕಾ ತಿಮ್ಮೇಶ್‌ ಬೇಸರದಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಪ್ರೀತಿಯ ನಾಯಿ ಇತ್ತೀಚೆಗೆ ಸಾವು ಕಂಡಿದೆ. ಇದನ್ನು ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

PREV
111
ಪ್ರೀತಿಯ ನಾಯಿಯನ್ನು ಕಳೆದುಕೊಂಡ ನಟಿ, ಶ್ರಾದ್ಧದ ಫೋಟೋ ಜೊತೆ 'ಕ್ಷಮಿಸಿ..' ಎಂದು ಪೋಸ್ಟ್‌!

ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಹಾಗೂ ನಟಿ ಪ್ರಿಯಾಂಕಾ ತಿಮ್ಮೇಶ್‌ ಭಾರೀ ಬೇಸರದಲ್ಲಿದ್ದಾರೆ. ತಮ್ಮ ಜೀವಕ್ಕೆ ಅತ್ಯಾಪ್ತರಾಗಿದ್ದವರನ್ನು ಕಳೆದುಕೊಂಡು ಬೇಸರದಲ್ಲಿ ಅವರಿದ್ದಾರೆ.

211

ಬಿಗ್‌ಬಾಸ್‌ ಸೀಸನ್‌ 8ಕ್ಕೆ ವೈಲ್ಡ್‌ಕಾರ್ಡ್‌ ಎಂಟ್ರಿ ಪಡೆದುಕೊಂಡಿದ್ದ ಪ್ರಿಯಾಂಕಾ ತಿಮ್ಮೇಶ್‌, ಹಲವು ವಾರಗಳ ಕಾಲ ಪ್ರೇಕ್ಷಕರನ್ನು ರಂಜಿಸಿ ವಾಪಸಾಗಿದ್ದರು.

311

ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಆಕೆ ತಮ್ಮ ಪ್ರೀತಿಯ ನಾಯಿ ಸತ್ತು ಹೋಗಿರುವುದನ್ನು ತಿಳಿಸಿದ್ದಾರೆ.

411

ಅದರೊಂದಿಗೆ ತಮ್ಮ ಸೋಶಿಯಲ್‌ ಮೀಡಿಯಾ ಡಿಪಿಯಲ್ಲೂ ತಮ್ಮ ನೆಚ್ಚಿನ ನಾಯಿಯ ಚಿತ್ರವನ್ನು ಪ್ರಿಯಾಂಕಾ ತಿಮ್ಮೇಶ್‌ ಹಾಕಿಕೊಂಡಿದ್ದಾರೆ. 

511

ಐದು ದಿನಗಳ ಹಿಂದೆ ತಮ್ಮ ಪ್ರೀತಿಯ ನಾಯಿಯ ಶ್ರಾದ್ಧವನ್ನೂ ಕೂಡ ಅವರು ನಡೆಸಿದ್ದಾರೆ. ಇದರ ಫೋಟೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

611

'ನನ್ನ ಕ್ಷಮಿಸಿ ಬಿಡು ಕಂದಮ್ಮ..' ಎಂದು ಬರೆದುಕೊಂಡು ನಾಯಿಯ ಚಿತ್ರಕ್ಕೆ ಫೋಟೋಗೆ ಹೂವಿನ ಹಾರ ಹಾಗೂ ಫೋಟೋ ಎದುರು ದೀಪ ಹಚ್ಚಿರುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

711

ಆದರೆ, ಅವರ ಪ್ರೀತಿಯ ನಾಯಿಗೆ ಏನಾಗಿತ್ತು ಅನ್ನೋದರ ಮಾಹಿತಿಯನ್ನು ಅವರು ಎಲ್ಲಿಯೂ ನೀಡಿಲ್ಲ. ಕಾಮೆಂಟ್‌ ಬಾಕ್ಸ್‌ನಲ್ಲಿ ಹೆಚ್ಚಿನವರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

811

ಸಾಕಷ್ಟು ಮಂದಿ ಈ ಬಗ್ಗೆ ಪ್ರಶ್ನೆ ಮಾಡಿದ್ದು, ನಾಯಿಗೆ ಏನಾಗಿತ್ತು ಎಂದು ಹೇಳಿದ್ದಾರೆ. ಆದರೆ, ಪ್ರಿಯಾಂಕಾ ತಿಮ್ಮೇಶ್‌ ಯಾವುದಕ್ಕೂ ಉತ್ತರ ನೀಡಿಲ್ಲ.

911

'ಕೆಲವು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಪಡೆಯಲು ಕೆಲವು ಭಾವನಾತ್ಮಕ ದೃಶ್ಯಗಳ ಮೂಲಕ ಪ್ರೇಕ್ಷಕರ ಲಾಭವನ್ನು ಪಡೆದುಕೊಳ್ಳುವುದು ಎಂದು ಇದನ್ನು ಕರೆಯಲಾಗುತ್ತದೆ..' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರ.ೆ

1011

ಪ್ರೀತಿಯಿಂದ' ಎಂಬ ಧಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಈಕೆ ಇದೀಗ ನಟ ಕೋಮಲ್ ಕುಮಾರ್ ಅವರ ಜೊತೆಗೆ 'ಕುಟೀರ' ಎಂಬ ಹೊಸ ಸಿನಿಮಾಗೆ ಒಪ್ಪಿಕೊಂಡಿದ್ದಾರೆ. 

1111

ಇತ್ತೀಚೆಗೆ ಈ ಹೊಸ ಸಿನಿಮಾ ಸೆಟ್ಟೇರಿದ್ದು, ಪ್ರಿಯಾಂಕಾ ತಿಮ್ಮೇಶ್‌ ಇದರ ಶೂಟಿಂಗ್‌ನಲ್ಲಿ ಬ್ಯೂಸಿ ಇದ್ದಾರೆ. ಈ ಸಿನಿಮಾದಲ್ಲಿ ಇವರು ಆಂಗ್ಲೋ ಇಂಡಿಯನ್‌ ಪಾತ್ರದಲ್ಲಿ ನಟಿಸಿದ್ದಾರೆ.

Read more Photos on
click me!

Recommended Stories