‘ನಾನು ಎರಡನೇ ಮದುವೆ ಆಗುತ್ತಿದ್ದೇನೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದು ಶುದ್ಧ ಸುಳ್ಳು’ ಎಂದು ನಟಿ ಪ್ರೇಮಾ ಸ್ಪಷ್ಟನೆ ನೀಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ತನ್ನ ಮದುವೆಯ ಬಗ್ಗೆ ಬಂದ ವರದಿಗಳನ್ನು ಉಲ್ಲೇಖಿಸಿ, ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಎರಡನೇ ಮದುವೆ ಆಗುತ್ತಿಲ್ಲ. ಇಂಥಾ ಸುದ್ದಿಗಳನ್ನು ನಂಬದಿರಿ ಎಂದು ಹೇಳಿದ್ದಾರೆ.
ಈ ಹಿಂದೆಯೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪ್ರೇಮಾ ತನ್ನ ಎರಡನೇ ಮದುವೆಯ ಸುದ್ದಿಯನ್ನು ತಳ್ಳಿ ಹಾಕಿದ್ದರು.
ನಾನು ಎರಡನೇ ಮದುವೆ ಆಗಿಲ್ಲ, ತನಗೆ ಮಕ್ಕಳೂ ಇಲ್ಲ ಎಂದಿದ್ದರು. ಇದೀಗ ಇವರ ತಂದೆ ತೀರಿಕೊಂಡ ಬಳಿಕ ಮದುವೆಗೆ ಕುಟುಂಬಸ್ಥರು ಒತ್ತಡ ಹಾಕುತ್ತಿದ್ದರು ಎನ್ನಲಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರೇಮಾ ಎರಡನೇ ಮದುವೆ ಮುಂದಾಗಿದ್ದರು ಎಂಬ ವದಂತಿ ಹಬ್ಬಿತ್ತು.