ಜಿಮ್​ನಲ್ಲಿ ಬೆವರು ಹರಿಸಿದ ನಟಿ ಮೇಘಾ ಶೆಟ್ಟಿ: ನಿಮ್ಮನ್ನ ನೋಡ್ತಿದ್ರೆ ಒಂಥರಾ ಕಿಕ್ ಎಂದ ಫ್ಯಾನ್ಸ್‌!

First Published Apr 14, 2024, 9:23 PM IST

ಕಿರುತೆರೆ ನಟಿ ಮೇಘಾ ಶೆಟ್ಟಿ ಈಗ ಸ್ಯಾಂಡಲ್‌ವುಡ್‌ನಲ್ಲಿ ಕೂಡ ಗುರ್ತಿಸಿಕೊಂಡಿದ್ದು, ಇದೀಗ ಜಿಮ್‌ನಲ್ಲಿ ವರ್ಕೌಟ್ ಮಾಡಿ ಕ್ಯಾಮರಾಗೆ ಮಸ್ತ್ ಪೋಸ್ ಕೊಟ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
 

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ಆಗಿ ಮೋಡಿ ಮಾಡಿದ ಚೆಲುವೆ ಮೇಘಾ ಶೆಟ್ಟಿ. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಆಕೆಯ 3 ಸಿನಿಮಾಗಳು ತೆರೆಕಂಡಿದೆ. ಇನ್ನು 3 ಸಿನಿಮಾಗಳು ಅವರ ಕೈಯಲ್ಲಿವೆ.

ಮೇಘಾ ತನ್ನ ನಟನೆಯಿಂದಲೇ ಅಲ್ಲ ಸೌಂದರ್ಯದಿಂದಲೂ ಅಭಿಮಾನಿಗಳ ಮನಗೆಲ್ಲುತ್ತಾರೆ. ಅಲ್ಲದೇ ಮೇಘಾ ಜಿಮ್‌ನಲ್ಲಿ ಪ್ರತಿದಿನ ಕಸರತ್ತು ಮಾಡುತ್ತಾರೆ. ಇನ್ನು ಆಗಾಗ್ಗೆ ಜಿಮ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ.

ಸದ್ಯ ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಶಾರ್ಟ್ಸ್‌ ತೊಟ್ಟು ಜಿಮ್‌ನಲ್ಲಿ ವರ್ಕೌಟ್ ಮಾಡಿದ್ದಾರೆ. ಬಿಡುವಿನ ವೇಳೆ ಫೋನ್ ತೆಗೆದು ಒಂದಷ್ಟು ಮಿರರ್ ಸೆಲ್ಫಿ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಸದ್ಯ ಶೆಟ್ರ ಪೋಸ್ಟ್‌ಗೆ ಸಾಕಷ್ಟು ಲೈಕ್ಸ್, ಕಾಮೆಂಟ್ಸ್ ಬಂದಿದೆ.

ಅಭಿಮಾನಿಗಳು ತುಂಡು ಬಟ್ಟೆಯಲ್ಲಿ ಮೇಘಾ ಶೆಟ್ಟಿ ಅವತಾರ ಕಂಡು ಹುಬ್ಬೇರಿಸಿದ್ದಾರೆ. ಆಕೆ ವಿವಿಧ ಭಂಗಿಗಳಲ್ಲಿ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಬ್ಲ್ಯಾಕ್ ಲವ್ ಸಿಂಬಲ್ ಹಾಕಿ ಫೋಟೊಗಳನ್ನು ಶೇರ್ ಮಾಡಿದ್ದಾರೆ.

ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಮೇಘಾ ಶೆಟ್ಟಿ ಸದ್ಯ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟಿಯಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು. ಅಂದಿನಿಂದಲೂ ಯಶಸ್ವಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಇತ್ತೀಚಿಗಷ್ಟೇ ನಟ ಧನ್ವೀರ್‌ ಅಭಿನಯದ ಕೈವಾ ಸಿನಿಮಾದಲ್ಲಿ ನಟಿಸಿದ್ದ ಮೇಘಾ ಶೆಟ್ಟಿ ಸದ್ಯ ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಂದನವನದ ಚಂದದ ಬೆಡಗಿ ಮೇಘಾ ಸದ್ಯ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.

click me!