ಸಾಕುನಾಯಿಗಳೊಂದಿಗೆ ಫೋಟೋ ಹಂಚಿಕೊಂಡ ಐಂದ್ರಿತಾ ರೇ ಹೇಳಿದ್ದೇನು ನೋಡಿ..

First Published | Apr 11, 2024, 5:59 PM IST

ಐಂದ್ರಿತಾ ರೇ ಮತ್ತು ದಿಗಂತ್ ಮಂಚಾಲೆ ಜೋಡಿ ಪ್ರಾಣಿಪ್ರೇಮಿಗಳು. ಅದರಲ್ಲೂ ನಾಯಿಗಳ ಮೇಲೆ ಅವರಿಗೆ ವಿಶೇಷ ಅಕ್ಕರೆ. ರಾಷ್ಟ್ರೀಯ ಸಾಕುಪ್ರಾಣಿಗಳ ದಿನದಂದು ನಟಿಯು ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ. 

ನಟಿ ಐಂದ್ರಿತಾ ರೇ ಹಾಗೂ ನಟ ದಿಂಗತ್ ಮಂಚಾಲೆ ಇಬ್ಬರೂ ಪ್ರಾಣಿಪ್ರೇಮಿಗಳು. ಅದರಲ್ಲೂ ನಾಯಿಗಳೆಂದರೆ ಇಬ್ಬರಿಗೂ ಎಷ್ಟು ಇಷ್ಟ ಎಂಬುದು ಅವರ ಸೋಷ್ಯಲ್ ಮೀಡಿಯಾ ಫೋಟೋಗಳನ್ನು ನೋಡಿದರೆ ತಿಳಿಯುತ್ತದೆ. 

ಮೊನ್ನೆಯಷ್ಟೇ ಸುತ್ತೂರು ಮಠಕ್ಕೆ ಈ ಜೋಡಿ ಯಾಂತ್ರಿಕ ಆನೆಯನ್ನು ದಾನ ನೀಡಿತ್ತು. ಮತ್ತು ನಿಜವಾದ ಆನೆಗಳನ್ನು ಕಾಡಿನಲ್ಲಿ ಸ್ವತಂತ್ರವಾಗಿರಲು ಬಿಡುವಂತೆ ಕೇಳಿಕೊಂಡಿತ್ತು. 

Tap to resize

ಇಂದು ರಾಷ್ಟ್ರೀಯ ಸಾಕುಪ್ರಾಣಿಗಳ ದಿನ. ಈ ದಿನ ಐಂದ್ರಿತಾ ನಾಯಿಗಳೊಂದಿಗೆ ಕೆಲ ಫೋಟೋಗಳನ್ನು ಹಂಚಿಕೊಂಡು ಜೊತೆಗೊಂದು ಸಂದೇಶವನ್ನೂ ನೀಡಿದ್ದಾರೆ. 

ನನ್ನ ಬಳಿ ವೆನಿಲ್ಲ, ಬಾಕ್ಸರ್ ಝೆಡ್ ಅಲ್ಲದೆ ಇನ್ನೆರಡು ರಕ್ಷಿಸಿದ ಬೀದಿನಾಯಿಗಳೂ ಕಳೆದೆರಡು ವರ್ಷಗಳಿಂದ ಇವೆ. ಇವು ನನಗೆ ಕೊಟ್ಟ ಸಂತೋಷ ಅಗಾಧ ಎಂದವರು ಹೇಳಿದ್ದಾರೆ. 

ಕರ್ನಾಟಕ ಹೈಕೋರ್ಟ್ ಕೆಲ ತಳಿಯ ನಾಯಿಗಳನ್ನು ಸಾಕುವುದರ ಮೇಲಿದ್ದ ನಿಷೇಧ ತೆರವುಗೊಳಿಸಿದೆ. ಈ ಕ್ರಮವು ದೇಸೀ ತಳಿಗಳ ದತ್ತು ತೆಗೆದುಕೊಳ್ಳುವುದನ್ನು ಕಡಿಮೆ ಮಾಡಲಿದೆ ಎಂದು ರೇ ಚಿಂತೆ ವ್ಯಕ್ತಪಡಿಸಿದ್ದಾರೆ. 

ನಮ್ಮ ಭಾರತೀಯ ತಳಿಯ ನಾಯಿಗಳು ಹೆಚ್ಚು ಪ್ರೀತಿಪಾತ್ರವಾಗಿದ್ದು, ಉತ್ತಮ ರಕ್ಷಣೆಯನ್ನೂ ಒದಗಿಸುತ್ತವೆ. ಬಹಳ ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನೂ ಹೊಂದಿರುತ್ತವೆ ಎಂದಿದ್ದಾರೆ ನಟಿ.

ಆದ್ದರಿಂದ ದೇಸೀ, ಸ್ಥಳೀಯ ತಳಿಗಳನ್ನು ಸಾಕಿ, ಅವುಗಳಿಗೆ ಪ್ರೀತಿ ನೀಡಿ. ನಾಯಿಗಳನ್ನು ದತ್ತು ಪಡೆಯಿರಿ, ಖರೀದಿಸಬೇಡಿ ಎಂದೂ ಮನವಿ ಮಾಡಿದ್ದಾರೆ. 

ಐಂದ್ರಿತಾ ನಾಯಿಪ್ರೀತಿ ಅವರ ಬಹುತೇಕ ಪೋಸ್ಟ್‌ಗಳಲ್ಲಿ ಕಾಣಬಹುದು. ಬೇಸಿಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಯಿ, ಬೆಕ್ಕುಗಳು ವಾಹನಗಳ ಕೆಳಗಿನ ನೆರಳಲ್ಲಿರುತ್ತವೆ, ಆದ್ದರಿಂದ ವಾಹನ ತೆಗೆವ ಮುನ್ನ ಪರಿಶೀಲಿಸಿ ಎಂದು ನಟಿ ಇತ್ತೀಚೆಗಷ್ಟೇ ಮನವಿ ಮಾಡಿದ್ದರು. 

ಸಾಕಷ್ಟು ಪ್ರವಾಸ ಮಾಡುವ ತಾರಾ ಜೋಡಿಯು, ತಮ್ಮೊಂದಿಗೆ ನಾಯಿಗಳನ್ನು ಕೂಡಾ ಕರೆದುಕೊಂಡು ಹೋಗಿ ಎಂಜಾಯ್ ಮಾಡುವುದನ್ನು ಅವರ ಫೋಟೋಗಳಲ್ಲಿ ಕಾಣಬಹುದು. 

Latest Videos

click me!