Rajkumar ಮೊಮ್ಮಗಳ ಭುಜದ ಮೇಲೆ ಸ್ಪೆಷಲ್ ಟ್ಯಾಟೂ: ಧನ್ಯಾ ಈ 'ಕ್ವಶ್ಚನ್ ಮಾರ್ಕ್' ಹಚ್ಚೆ ಯಾಕೆ ಎಂದ ಫ್ಯಾನ್ಸ್!

Published : Nov 24, 2023, 03:00 AM IST

ಸ್ಯಾಂಡಲ್‌ವುಡ್‌ಗೆ ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಕಾಲಿಟ್ಟ ನಟಿ ಧನ್ಯಾ ರಾಮ್‌ಕುಮಾರ್‌ ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ನಟನೆಯ ‘ದ ಜಡ್ಜ್‌ಮೆಂಟ್‌’ ಸಿನಿಮಾ ಒಪ್ಪಿಕೊಂಡಿರುವ ನಟಿ ಇದೀಗ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

PREV
17
Rajkumar ಮೊಮ್ಮಗಳ ಭುಜದ ಮೇಲೆ ಸ್ಪೆಷಲ್ ಟ್ಯಾಟೂ: ಧನ್ಯಾ ಈ 'ಕ್ವಶ್ಚನ್ ಮಾರ್ಕ್' ಹಚ್ಚೆ ಯಾಕೆ ಎಂದ ಫ್ಯಾನ್ಸ್!

ಡಾ.ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನ ಗಮನಿಸಿದ್ರೆ ಸೂಪರ್ ಅನ್ನುವ ಫೀಲ್ ಬರುತ್ತದೆ. ವಿಶೇಷವಾಗಿಯೇ ತೆಗೆದಿರೊ ಈ ಫೋಟೋಗಳಲ್ಲಿ ಧನ್ಯಾ ಸಖತ್ತಾಗಿ ಮಿಂಚಿದ್ದಾರೆ.

27

ಧನ್ಯಾ ಫೋಟೋಗಳಲ್ಲಿ ಇನ್ನೂ ಒಂದು ಸ್ಪೆಷಲ್ ವಿಷಯ ಕೂಡ ಇದೆ. ಅದನ್ನ ಎಡ ಭುಜದ ಮೇಲೆ ನೋಡಬಹುದು. ಹೌದು, ಫೋಟೋವನ್ನ ಸೂಕ್ಷ್ಮವಾಗಿಯೇ ಗಮನಿಸಿದಾಗ ಅವರು ಚಿಕ್ಕದಾದ ಟ್ಯಾಟೂವನ್ನು ಹಾಕಿಸಿದ್ದಾರೆ.

37

ಧನ್ಯಾ ಎಡ ಭುಜದ ಮೇಲೆ ಕ್ವಶ್ಚನ್ ಮಾರ್ಕ್ ಟ್ಯಾಟೂ ಇದೆ. ಇದು ತಾತ್ಕಾಲಿಕ ಟ್ಯಾಟೂನಾ ಅನ್ನುವ ಪ್ರಶ್ನೆ ಕೂಡ ಬರುತ್ತದೆ. ಸಹಜವಾಗಿ ಆಯಾ ಫೋಟೋಶೂಟ್‌ಗೆ ಬೇಕಿರೋ ಹಾಗೆ ಟ್ಯಾಟೂ ಹಾಕಿಸೋದು ಇದೆ. ಆದರೆ ಇದನ್ನ ನೋಡಿದ್ರೆ ರಿಯಲ್ ಟ್ಯಾಟೂ ಅನ್ನುವ ಫೀಲ್ ಕೂಡ ಬರುತ್ತದೆ.

47

ಧನ್ಯಾ ತಾವು ಹಾಕಿಸಿರುವ ಟ್ಯಾಟೂ ಮೂಲಕ ಇನ್ನಷ್ಟು ಇಂಟ್ರಸ್ಟಿಂಗ್ ಅನಿಸುತ್ತಿದ್ದಾರೆ. ಕ್ವಶ್ಚನ್ ಮಾರ್ಕ್‌ ಅನ್ನೋದು ತುಂಬಾನೆ ವಿಶೇಷವೂ ಆಗಿದೆ. ಆದರೆ ಧನ್ಯಾ ಯಾಕೆ ಈ ಟ್ಯಾಟೂವನ್ನೇ ಹಾಕಿಸಿದ್ದಾರೆ ಅನ್ನುವ ಕುತೂಹಲ ಹಾಗೆ ಇದೆ.

57

ಇತ್ತೀಚಿಗೆ ಧನ್ಯಾ ತಮ್ಮೂರು ಗಾಜನೂರಿಗೂ ಹೋಗಿ ಬಂದಿದ್ದಾರೆ. ಅಜ್ಜನ ಮನೆ ಅಜ್ಜಿಯ ಮನೆಯ ಹೀಗೆ ಎಲ್ಲವನ್ನೂ ಅಮ್ಮನೊಟ್ಟಿಗೆ ಸುತ್ತಿಕೊಂಡು ವಾಪಾಸ್ ಆಗಿದ್ದಾರೆ. ಊರಿನ ದೊಡ್ಡ ಆಲದಮರದ ಬಳಿ ಕುಳಿತು ಖುಷಿಪಟ್ಟಿದ್ದಾರೆ.

67

ಧನ್ಯಾ ರಾಮ್‌ಕುಮಾರ್ ಅಭಿನಯದ ಕಾಲಾಪತ್ತರ್ ಸಿನಿಮಾ ರಿಲೀಸ್‌ಗೆ ರೆಡಿ ಆಗುತ್ತಿದೆ. ವಿಕ್ಕಿ ನಟಿಸಿ ನಿರ್ದೇಶನ ಮಾಡಿರೋ ಈ ಚಿತ್ರ ಶೀಘ್ರದಲ್ಲಿಯೇ ರಿಲೀಸ್ ಕೂಡ ಆಗುತ್ತಿದೆ.

77

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಜಡ್ಜಮೆಂಟ್ ಸಿನಿಮಾದಲ್ಲೂ ಧನ್ಯಾ ರಾಮ್‌ಕುಮಾರ್ ಅಭಿನಯಿಸಿದ್ದಾರೆ. ಇದರ ಚಿತ್ರೀಕರಣ ಕೂಡ ಇತ್ತೀಚಿಗೆ ಪೂರ್ಣಗೊಂಡಿದೆ. ಇದರೊಟ್ಟಿಗೆ ಈ ಚಿತ್ರದ ಇತರ ಕೆಲಸವು ನಡೆಯುತ್ತಿವೆ.

Read more Photos on
click me!

Recommended Stories