ಕೇವಲ ಎರಡು ಗಂಟೆ ನಿದ್ರೆ;ಅವಳಿ ಮಕ್ಕಳಿಗೆ ಜನ್ಮ ನೀಡಿದ ಬೆನ್ನಲೆ ಆಪರೇಷನ್ ಮಾಡಿಸಿಕೊಂಡ ಅಮೂಲ್ಯ!

First Published | Jan 29, 2024, 3:15 PM IST

 ಐದು ವರ್ಷಕ್ಕೊಮ್ಮೆ ಸಿನಿಮಾ ಮಾಡಿದ್ರೂ ಪಾತ್ರ ಉಳಿಯಬೇಕು. ಮಕ್ಕಳಾದ ಮೇಲೆ ಜೀವನ ಹೇಗಿದೆ? 

2017ರಲ್ಲಿ ಮಾಸ್ತಿ ಗುಡಿ ಮತ್ತು ಮುಗುಳು ನಗೆ ಚಿತ್ರದಲ್ಲಿ ಕಾಣಿಸಿಕೊಂಡ ಮೇಲೆ ನಟಿ ಅಮೂಲ್ಯ ಅವಳಿ ಗಂಡು ಮಕ್ಕಳ ಜೊತೆ ತಮ್ಮ ಮದರ್‌ಹುಡ್ ಎಂಜಾಯ್ ಮಾಡುತ್ತಿದ್ದಾರೆ.

ಸುಮಾರು 7 ವರ್ಷಗಳ ನಂತರ ಕಮ್‌ ಬ್ಯಾಕ್ ಮಾಡಲು ಮುಂದಾಗಿರುವ ನಟಿ ಪಾತ್ರಗಳು ಹೇಗಿರಬೇಕು ಎಂದಿದ್ದಾರೆ. '6ನೇ ವಯಸ್ಸಿನಲ್ಲಿ ನಟನೆ ಶುರು ಮಾಡಿದೆ. ನಟನೆ ಬಗ್ಗೆ ಏನೂ ಗೊತ್ತಿರಲಿಲ್ಲ'

Tap to resize

'ಆಗ ಚಿತ್ರರಂಗ ಪರಿಚಯವಾಗಿತ್ತು. ಈಗ ನಾನು ಏನೇ ಆಗಿದ್ದರೂ ಅದು ಸಿನಿಮಾಗಳಿಂದ. ಸಿನಿಮಾ ಮತ್ತು ನಟನೆ ಹೊರತು ಪಡಿಸಿ ನನಗೆ ಏನೂ ಗೊತ್ತಿಲ್ಲ' ಎಂದು ಅಮೂಲ್ಯ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಮೊದಲ ಚಿತ್ರದಿಂದಲೂ ನಾನು ಎಂದೂ ನಟನೆಯಿಂದ ಬ್ರೇಕ್‌ ತೆಗೆದುಕೊಂಡಿಲ್ಲ. ಚಿಕ್ಕ ವಯಸ್ಸಿಗೆ ಜರ್ನಿ ಶುರು ಮಾಡಿ ಹಲವಾರು ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ನಟಿಸಿರುವೆ. ಆ ವಯಸ್ಸಿನಲ್ಲಿ ಇನ್ನಿತ್ತರ ಕೆಲಸಗಳನ್ನು ತುಂಬಾ ಮಿಸ್ ಮಾಡಿಕೊಂಡೆ'

'ಈ ಬ್ರೇಕ್‌ನಲ್ಲಿ ನಾನು ಪ್ರಯಾಣ ಮಾಡುತ್ತಿರುವೆ, ಪ್ರಪಂಚನ್ನು ಎಕ್ಸ್‌ಪ್ಲೋರ್ ಮಾಡುತ್ತಿರುವೆ. ಈ ಸಮಯದಲ್ಲಿ ಮಕ್ಕಳು ಚೆನ್ನಾಗಿ ಬೆಳೆಯುತ್ತಿರುವುದನ್ನು ನೋಡಿದೆ. ಈಗ ಕಮ್ ಬ್ಯಾಕ್ ಮಾಡಲು ನಾನು ರೆಡಿಯಾಗಿರುವೆ' 

'ಐದು ವರ್ಷಗಳಲ್ಲಿ ಒಂದು ಸಿನಿಮಾ ಮಾಡಲು ನಾನು ರೆಡಿಯಾಗಿರುವೆ. ಹೀಗಾಗಿ ಒಳ್ಳೆ ಕಥೆಯನ್ನು ಫೈನಲ್ ಮಾಡಲು ಸಮಯ ತೆಗೆದುಕೊಳ್ಳುತ್ತಿರುವೆ. ಈಗ ಫಿಟ್ನೆಸ್ ತುಂಬಾನೇ ಮುಖ್ಯವಾಗುತ್ತದೆ'

'ನಾವು ಫಿಟ್ ಆಗಿದ್ದರೆ ಯಾವ ಪಾತ್ರ ಬೇಕಿದ್ದರೂ ಕಾನ್‌ಫಿಡೆಂಟ್‌ ಆಗಿ ಮಾಡಬಹುದು. ಹೊಸ ವರ್ಷದಿಂದ ಜಿಮ್‌ಗೆ ಕಾಲಿಡಲು ಮನಸ್ಸು ಮಾಡುತ್ತಿರುವೆ. ಸಿನಿಮಾ ಸಹಿ ಮಾಡುತ್ತಿದ್ದಂತೆ ಆ ಸೀರಿಯಸ್‌ನೆಸ್‌ ಬಂದೇ ಬರುತ್ತದೆ'

'ತಾಯಿತನವನ್ನು ಎಂಜಾಯ್ ಮಾಡುತ್ತಿರುವೆ, ಪದಗಳಲ್ಲಿ ವರ್ಣಿಸಲು ಆಗದು. ಎಕ್ಸೈಟ್‌ ಮತ್ತು ಎಕ್ಸಾಸ್ಟ್‌ ಆಗಿರುವೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ ತಕ್ಷಣವೇ ಮತ್ತೊಂದು ಆಪರೇಷನ್ ಅಯ್ತು'

'ಆ ಸಮಯದಲ್ಲಿ ನನಗೆ ಎರಡು ಗಂಟೆ ಅಷ್ಟೇ ನಿದ್ರೆ ಬರುತ್ತಿತ್ತು. ತಾಯಿತನದಲ್ಲಿ ಒತ್ತಡ ಜಾಸ್ತಿ ಇರುತ್ತದೆ, ಮಕ್ಕಳ ನಗು ತೊದಲು ಮಾತು ಮತ್ತು ತುಂಟಾಟ ನೋಡಿದರೆ ಎಲ್ಲವೂ ಮರೆಯುತ್ತೀವಿ. ಇದೊಂದು ವಂಡರ್‌ಫುಲ್‌ ಫೀಲಿಂಗ್' ಎಂದಿದ್ದಾರೆ ಅಮೂಲ್ಯ. 

Latest Videos

click me!