ತಾಯ್ತನದ ಸಂಭ್ರಮಕ್ಕೆ 2 ತಿಂಗಳು; ಅವಳಿ ಮಕ್ಕಳೆಂದು ಗೊತ್ತಾದಾಗ ನಟಿ ಅಮೂಲ್ಯ ರಿಯಾಕ್ಷನ್ ಇದು!

First Published | Apr 30, 2022, 10:19 AM IST

ಮದರ್‌ವುಡ್‌ ಎಂಜಾಯ್ ಮಾಡುತ್ತಿರುವ ನಟಿ ಅಮೂಲ್ಯ. ಸ್ಪೆಷಲ್ ಫೋಟೋಶೂಟ್‌ ಮೂಲಕ ಸ್ಪೆಷಲ್ ಜರ್ನಿ ಬಗ್ಗೆ ಬರೆದುಕೊಂಡ ನಟಿ. 

ಸ್ಯಾಂಡಲ್‌ವುಡ್‌ ಗೋಲ್ಡನ್ ಕ್ವೀನ್ ಅಮೂಲ್ಯ (Amulya) ಮತ್ತು ಜಗದೀಶ್ (Jagadish RC) ಮಾರ್ಚ್‌ 1ರಂದು ಕುಟುಂಬಕ್ಕೆ ಅವಳಿ ಗಂಡು ಮಕ್ಕಳನ್ನು ಬರ ಮಾಡಿಕೊಂಡರು. 

ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಕೊಂಡಿರುವ ನಟಿ ಅಮೂಲ್ಯ ಎರಡು ತಿಂಗಳ ನಂತರ ಸ್ಪೆಷಲ್ ಫೋಟೋಶೂಟ್ (Photoshoot) ಹಂಚಿಕೊಂಡು ತಾಯ್ತನದ ಬಗ್ಗೆ ಬರೆದುಕೊಂಡಿದ್ದಾರೆ. 

Tap to resize

'ತಾಯ್ತನದ ಸಂಭ್ರಮಕ್ಕೆ 2 ತಿಂಗಳು. ಇದು ನನಗೆ ಜೀವನದ ಬಹು ನಿರೀಕ್ಷತ ಜರ್ನಿ ಆಗಿರಲಿದೆ. ಅವಳಿ ಮಕ್ಕಳಿಗೆ ತಾಯಿ ಆಗುತ್ತಿದ್ದೇನೆ ಎಂದು ಗೊತ್ತಾದಾಗ ಸಂತೋಷ ತಡೆದುಕೊಳ್ಳಲು ಆಗಲಿಲ್ಲ' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.

'ಈ ಕ್ಷಣದ ಸಂತಸಕ್ಕಿಂತ ನನಗೆ ಬೇರೊಂದಿಲ್ಲ. ಗರ್ಭದಲ್ಲಿ ಪುಟ್ಟ ಕಂದಮ್ಮಗಳ ಕಾಲುಗಳು ಒದೆತೆಗಳು ಈಗ ನನ್ನ ಗರ್ಭಾವಸ್ಥೆಯ ಎಲ್ಲಾ ಸವಾಲುಗಳನ್ನು ಮರೆತುಬಿಡುವಂತೆ ಮಾಡಿದೆ' ಎಂದು ಅಮೂಲ್ಯ ಹೇಳಿದ್ದಾರೆ. 

'ನನ್ನ ಬೇಬಿ ಬಂಪ್‌ನ (Baby Bump) ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಆದರೆ ನಿಜ ಹೇಳಬೇಕು ಅಂದ್ರೆ ಒಂದೇ ಸಮಯಕ್ಕೆ ಪ್ರೀತಿ ಮತ್ತು ಭಯ ಹೆಚ್ಚಾಗುತ್ತಿದೆ' ಎಂದಿದ್ದಾರೆ.

'ಇಡೀ ಪ್ರಪಂಚದ ಎದುರು ತಾಯಿ ಧೈರ್ಯವಾಗಿರುತ್ತಾರೆ ಆದರೆ ಗುಲಾಬಿ ಮತ್ತು ಅದರ ಮುಳ್ಳುಗಳ ಜರ್ನಿ ಬಗ್ಗೆ ಆಕೆಗೆ ಮಾತ್ರ ಗೊತ್ತು' ಎಂದು ಅಮೂಲ್ಯ ಹೇಳಿದ್ದಾರೆ.

 'ಕಂದಮ್ಮಗಳ ಪುಟ್ಟ ಕಾಲುಗಳನ್ನು ಮುಟ್ಟಿದಾಗ ಕೈ ಹಿಡಿದುಕೊಂಡಾಗ ನಾನು ಜೀವನದಲ್ಲಿ ನಾನು ಬೆಸ್ಟ್‌ ಮಾಡಿದ್ದೀನಿ ಮತ್ತು ಹೀಗೆ ಮುಂದೆ ಬೆಸ್ಟ್‌ ಮಾಡುತ್ತೀನಿ ನನಗೆ ಗೊತ್ತಾಗುತ್ತದೆ' ಎಂದು ಹೇಳಿದ್ದಾರೆ. 

Latest Videos

click me!