ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ ನಿನ್ನಿಂದಲೆ ಚಿತ್ರದ ಮೂಲಕ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಆರಂಭವಾಗಿತ್ತು.
ಈಗ ಹೊಂಬಾಳೆ ಫಿಲ್ಮ್ಸ್ (Hombale films) ಬ್ಯಾನರ್‌ನಲ್ಲಿ ಯುವ ರಾಜ್‌ಕುಮಾರ್ ಸಿನಿಮಾ ಮಾಡುತ್ತಿದ್ದಾರೆ. ಯುವ ಸ್ಟೈಲಿಷ್ ಲುಕ್ ರಿವೀಲ್ ಆಗಿದೆ.
ಸಂತೋಷನ್ ಅನಂದ್ ರಾಮ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಕಾಲೇಜ್ ಪ್ರೇಮ ಮತ್ತು ಆಕ್ಷನ್ ಕತೆ ಆಗಿರಲಿದೆ ಎಂದು ಹೇಳಲಾಗುತ್ತಿದೆ.
ಪುನೀತ್ ರಾಜ್‌ಕುಮಾರ್ ಸ್ಥಾನವನ್ನು ತುಸು ಮಟ್ಟಿಗೆ ತುಂಬಲು ಯುವರಾಜ್‌ಕುಮಾರ್ ಸೂಕ್ತ ವ್ಯಕ್ತಿ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
'ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ. ಇರಲಿ ನಿಮ್ಮ ಅಪ್ಪುಗೆ. ದಿ ಲೆಗೆಸಿ ಮುಂದುವರೆಯಲಿದೆ' ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.
ಪೋಸ್ಟರ್ ಲುಕ್‌ನಲ್ಲಿ ಯುವ ಕಪ್ಪು ಬಣ್ಣದ ಟೀ-ಶರ್ಟ್ ಮತ್ತು ಶರ್ಟ್ ಧರಿಸಿದ್ದಾರೆ, ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ನೀವು ನೋಡಲು ಯಶ್ ರೀತಿ ಇದ್ದೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಯುವ (Yuva Rajkumar) ಮೊದಲ ಸಿನಿಮಾ ರಣಧೀರ ಕಂಠೀರವ (Ranadheera Kanteerava) ಸಿನಿಮಾ ಸೆಟ್ಟೇರಿತ್ತು ಆದರೆ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಯಿತ್ತು.