Aditi Prabhudeva ನವೆಂಬರ್ 27 ಹಸೆಮಣೆ ಏರಲು ಸಜ್ಜಾದ ಅದಿತಿ; ಆಮಂತ್ರಣ ಪತ್ರಿಕೆ ವೈರಲ್!

Published : Nov 04, 2022, 10:11 AM IST

 ಕನ್ನಡತಿ ಅದಿತಿ ಪ್ರಭುವೇವ ಮದುವೆ ಫಿಕ್ಸ್‌. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಆಮಂತ್ರಣ ಪತ್ರಿಕೆ....

PREV
17
Aditi Prabhudeva  ನವೆಂಬರ್ 27 ಹಸೆಮಣೆ ಏರಲು ಸಜ್ಜಾದ ಅದಿತಿ; ಆಮಂತ್ರಣ ಪತ್ರಿಕೆ ವೈರಲ್!

ಕನ್ನಡ ಚಿತ್ರರಂಗದ ಮುದ್ದು ಗೊಂಬೆ ಅದಿತಿ ಪ್ರಭುದೇವ ಮತ್ತು ಯಶಸ್‌ ನವೆಂಬರ್ 27ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 

27

 ಪೇಸ್ಟಲ್ ಗ್ರೀನ್ ಬಣ್ಣ ಫ್ಲೋರಲ್ ಮದ್ವೆ ಕಾರ್ಡ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದ್ವೆಗೆ ಪೋಷಕರಾದ ಸುಚರಿತ ಮತ್ತು ಚಂದ್ರಕಾಂತ್ ಆಹ್ವಾನಿಸುತ್ತಿದ್ದಾರೆ.

37

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನಮ್ಮ ಮನೆ, ಮನಸ್ಸುಗಳ ಸೇರಲು ಬಯಸಿರುವಳು ಅದಿತಿ. ಹೃದಯ ತೆರೆದು ಮೌನ ಮುರಿದು ಪ್ರೀತಿಯ ಸಿಂಪಡಿಸಿ ಕಾದಿರುವನು ಯಶಸ್ವಿ' ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆದಿದ್ದಾರೆ.

47

ಬಾಳ ಸಂಗಾತಿಗಳ, ಮಧುರ ಮಿಲನದ ಶುಭ ಘಳಿಗೆಗೆ, ಸಾಕ್ಷಿಯಾಗಿ ಹಾರೈಸಿ ಬನ್ನಿ' ಎಂದು ಸುಚರಿತ ಚಂದ್ರಕಾಂತ್ ಆಹ್ವಾನಿಸುತ್ತಿದ್ದಾರೆ.

57

 ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಮದುವೆ ಅದ್ಧೂರಿಯಾಗಿ ನಡೆಯಲಿದ್ದು. ಸಿದ್ಧತೆಗಳು ಹೇಗಿದೆ, ಏನೆಲ್ಲಾ ಸ್ಪೆಷಲ್ ಇದೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. 

67

 ಈ ಹಿಂದೆ ಖಾಸಗಿ ಸಂದರ್ಶನದಲ್ಲಿ ಬಾಳಸಂಗಾತಿ ಬಗ್ಗೆ ಅದಿತಿ ಮಾತನಾಡಿದ್ದರು. ''ಹಬ್ಬದ ಸಮಯದಲ್ಲಿ ನಾನು ಮನೆಯಲ್ಲಿ ಇರುವೆ. ಸಾಮಾನ್ಯವಾಗಿ ನನಗೆ ಸಹಾಯ ಮಾಡಲು ಅಮ್ಮ ಇರುತ್ತಾರೆ ಅದರೆ ಈ ದಸರ ಸಮಯದಲ್ಲಿ ಅವರು ಊರಿಗೆ ಹೋಗಿದ್ದಾರೆ. ಚಿಕ್ಕ ಹುಡುಗಿ ಇದ್ದಾಗಿನಿಂದ ನೀನೇ ಕೆಲಸ ಮಾಡು ಅಂತ ಬಿಟ್ಟಿದ್ದಾರೆ ಯಾಕಂದ್ರೆ ನನಗೆ ನಾನೇ ಮಾಡಿದ್ದರೆ ಸಮಾಧಾನ.'

77

'ನನಗೆ ಒಂದು ಸಮಸ್ಯೆ ಇದೆ. ಯಾವ ವಸ್ತು ಎಲ್ಲಿ ಇರಬೇಕು ಅಲ್ಲೇ ಇರಬೇಕು. ಎಲ್ಲೆಲ್ಲೋ ಇದ್ರೆ ಇಷ್ಟ ಆಗೋಲ್ಲ ಈ ರೀತಿ ಕ್ಯಾರೆಕ್ಟ್‌ ನನಗೆ ಮಾತ್ರವಲ್ಲ ನನ್ನ ಸುತ್ತಮುತ್ತಲು ಇರುವವರಿಗೂ ಕಷ್ಟ ಆಗುತ್ತೆ' ಎಂದು ನೀಟ್‌ನೆಟ್‌ ಬಗ್ಗೆ ಅದಿತಿ ಮಾತನಾಡಿದ್ದಾರೆ.'

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories