ನಟ ವಿಶಾಲ್ ಹೆಗ್ಡೆ, ಪ್ರಿಯಾ ದಂಪತಿಗೆ ಗಂಡು ಮಗು!

First Published | Apr 30, 2022, 11:23 AM IST

ಗಂಡು ಮಗುವನ್ನು ಬರ ಮಾಡಿಕೊಂಡ ಕನ್ನಡದ ನಟ ವಿಶಾಲ್ ಹೆಗ್ಡೆ ಮತ್ತು ಪ್ರಿಯಾ ದಂಪತಿ. 

ಕನ್ನಡ ಚಿತ್ರರಂಗದ ಸರಳ ನಟ ವಿಶಾಲ್ ಹೆಗ್ಡೆ (Vishal Hegde) ಮತ್ತು ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್‌  ಪ್ರಿಯಾ (Priya Vishal) ದಂಪತಿ ಏಪ್ರಿಲ್ 28ರಂದು ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. 

'ನಾವಿಬ್ಬರು ತುಂಬಾ ಸಂತೋಷದಿಂದ ಘೋಷಣೆ ಮಾಡುತ್ತಿದ್ದೀವಿ ನಾವು ಇಂದು ಗಂಡು ಮಗುವನ್ನು ಬರಮಾಡಿಕೊಂಡಿದ್ದೀವಿ' ಎಂದು ವಿಶಾಲ್ ಬರೆದುಕೊಂಡಿದ್ದಾರೆ.

Tap to resize

'ನಾವಿಬ್ಬರು ತುಂಬಾ ಸಂತೋಷದಿಂದ ಘೋಷಣೆ ಮಾಡುತ್ತಿದ್ದೀವಿ ನಾವು ಇಂದು ಗಂಡು ಮಗುವನ್ನು ಬರಮಾಡಿಕೊಂಡಿದ್ದೀವಿ' ಎಂದು ವಿಶಾಲ್ ಬರೆದುಕೊಂಡಿದ್ದಾರೆ.

ಮನೆ ಮಗಳು, ಗ್ರೀನ್ ಸಿಗ್ನಲ್, ಗಣೇಶ ಮತ್ತೆ ಬಂದ, ಅಣ್ಣ ತಂಗಿ, ಹುಡುಗರು, ಯುವರತ್ನ ಸೇರಿಂದ ಹಲವು ಸಿನಿಮಾಗಳಲ್ಲಿ ವಿಶಾಲ್ ನಟಿಸಿದ್ದಾರೆ.

ಕಳೆದು ಒಂದು ವರ್ಷದಿಂದ ವಿಶಾಲ್ ಯೂಟ್ಯೂಬ್‌ ಲೋಕವನ್ನು ಸಖತ್ ಎಂಜಾಯ್ ಮಾಡುತ್ತಿದ್ದರು, vlogಸ್ ಮಾಡುವ ಮೂಲಕ ಫಾಲೋವರ್ಸ್‌ನ ಮನೋರಂಜಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ವಿಶಾಲ್ ವಾಸವಿದ್ದು, ಪತ್ನಿ ಪ್ರಿಯಾ ಮುಂಬೈನಲ್ಲಿ ತಾಯಿ ಮನೆಯಲ್ಲಿದ್ದಾರೆ. ಸೀಮಂತ ಕಾರ್ಯಕ್ರಮ ಮತ್ತು ಮಗು ಹುಟ್ಟಿರುವುದು ಮುಂಬೈನಲ್ಲಿ.

ಕೆಲವು ದಿನಗಳ ಹಿಂದೆ ಯೂಟ್ಯೂಬ್‌ ಚಾನೆಲ್‌ ನಿಲ್ಲಿಸುವುದಾಗಿ ವಿಡಿಯೋ ಮಾಡಿ ವಿಶಾಲ್ ಮಾತನಾಡಿದ್ದಾರೆ. ವಿಶಾಲ್ ಭಾವುಕ ಮಾತುಗಳನ್ನು ಕೇಳಿ ಫಾಲೋವರ್ಸ್‌ ಬೇಸರಗೊಂಡಿದ್ದಾರೆ.

Latest Videos

click me!