Vijay Raghavendra New Movie: ಚಿನ್ನಾರಿ ಮುತ್ತನ ಹೊಸ ಚಿತ್ರ 'ಜೋಗ್ 101'

Suvarna News   | Asianet News
Published : Mar 02, 2022, 01:44 PM ISTUpdated : Mar 02, 2022, 02:03 PM IST

ಸ್ಯಾಂಡಲ್​ವುಡ್​ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಅಭಿನಯದ 'ಸಾವಿತ್ರಿ' ಎಂಬ ಹಾರರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇದೀಗ 'ಜೋಗ್ 101' ಎಂಬ ಹೊಸ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

PREV
16
Vijay Raghavendra New Movie: ಚಿನ್ನಾರಿ ಮುತ್ತನ ಹೊಸ ಚಿತ್ರ 'ಜೋಗ್ 101'

ನಟ ವಿಜಯ್ ರಾಘವೇಂದ್ರ  (Vijay Raghavendra) 'ಜೋಗ 101' (Jog 101) ಸಸ್ಪೆನ್ಸ್-ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, 'ಸೆವೆನ್ ಸ್ಟಾರ್ ಪಿಕ್ಚರ್ಸ್' (Seven Star Pictures) ಬ್ಯಾನರ್​ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರವನ್ನು ವಿಜಯ್ ಕನ್ನಡಿಗ (Vijay Kannadiga) ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

26

ಈ ಬಗ್ಗೆ ವಿಜಯ್ ರಾಘವೇಂದ್ರ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ಜೋಗ್ 101' ಹೊಸ ಪ್ರಯಾಣದ ಅರಂಭ. ಹರಸಿ. ಆಶೀರ್ವದಿಸಿ. ಮೊದಲ ಬಾರಿಗೆ 'ಸೆವೆನ್ ಸ್ಟಾರ್ ಪಿಕ್ಚರ್ಸ್' ಬ್ಯಾನರ್ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಅಪಾರ ಸಂತೋಷವಾಗಿದೆ ಹಾಗೂ ಸತ್ಯವನ್ನು ಹುಡುಕುವ ಪಯಣ ಎಂದು ವಿಜಯ್ ರಾಘವೇಂದ್ರ ಬರೆದುಕೊಂಡು ಚಿತ್ರದ ಪೋಸ್ಟರನ್ನು ಹಂಚಿಕೊಂಡಿದ್ದಾರೆ.

36

ಈಗಾಗಲೇ 'ಜೋಗ್ 101' ಮೊದಲ ಹಂತದ ಶೂಟಿಂಗ್ ಶೆಡ್ಯೂಲ್‌ನ್ನು ಪೂರ್ಣಗೊಳಿಸಿದ್ದೇವೆ. ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ (Software Engineer) ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರು ಪ್ರಕೃತಿಯನ್ನು ಅನ್ವೇಷಿಸಲು ಇಷ್ಟಪಡುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

46

ವಿಜಯ್ ರಾಘವೇಂದ್ರ ಅವರು ಆರು ತಿಂಗಳು ಕೆಲಸ ಮಾಡಿ, ಉಳಿದ ಆರು ತಿಂಗಳು ರಜೆಯಲ್ಲಿರುತ್ತಾರೆ. ಈ ರಜೆ ಸಮಯದಲ್ಲಿ ವಿಜಯ್ ಪ್ರಯಾಣಕ್ಕೆ ಹೊರಡುತ್ತಾರೆ. ಈ ಪ್ರಯಾಣದ ಸಮಯದಲ್ಲಿ ಏನಾಗುತ್ತದೆ ಎಂಬುದೇ 'ಜೋಗ್ 101' ರ ಮುಖ್ಯ ಕಥಾಹಂದರ ಎಂದು ಚಿತ್ರದ ನಿರ್ದೇಶಕ ವಿಜಯ್ ಕನ್ನಡಿಗ ಹೇಳಿದ್ದಾರೆ. ಜೋಗ್ ಜಲಪಾತ ಮತ್ತು ಪಶ್ಚಿಮ ಘಟ್ಟಗಳ ಸುತ್ತ ಚಿತ್ರದ ಚಿತ್ರೀಕರಣ ನಡೆದಿದೆಯಂತೆ.
 

56

ಕಿರುತೆರೆ ನಟಿ ತೇಜಸ್ವಿನಿ ಶೇಖರ್ (Tejaswini Shekar) 'ಲಾಂಗ್ ಡ್ರೈವ್' (Long Drive) ಚಿತ್ರದ ಬಳಿಕ 'ಜೋಗ್ 101' ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, 'ಇದು ನನ್ನ 2ನೇ ಚಿತ್ರ. ಒಂದೊಳ್ಳೆ ತಂಡದ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ' ಎಂದು ತಿಳಿಸಿದ್ದಾರೆ. 

66

ಇನ್ನು ವಿಜಯ್ ರಾಘವೇಂದ್ರ ಜೊತೆಗೆ ರಾಜೇಶ್ ನಟರಂಗ (Rajesh Nataranga) ಮತ್ತು ಗೋವಿಂದೇ ಗೌಡ (Govinde Gowda) ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಶ್ ಬಸುತ್ಕರ್ ಸಂಗೀತ ಸಂಯೋಜಿಸಿದ್ದು, ರಂಗಕಹಳೆ ಮೋಹನ್ ಸಂಕಲನ ಹಾಗೂ ಸುನೀತ್ ಹಲಗೇರಿ ಕ್ಯಾಮೆರಾ ಕೈ ಚಳಕ 'ಜೋಗ್ 101' ಚಿತ್ರಕ್ಕಿದೆ.

Read more Photos on
click me!

Recommended Stories