ಯಾರೂ ನಂಬಲ್ಲ ಈಕೆ ಸಿಹಿ ಕಹಿ ಚಂದ್ರು ಮುದ್ದಿನ ಮಗಳೆಂದು; ರೀ ಮದುವೆ ಕೂಡ ಆಗಿದೆ!

First Published | Sep 27, 2023, 9:46 AM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಹಿತಾ ಚಂದ್ರಶೇಖರ್ ಬೋಲ್ಡ್ ಫೋಟೋಸ್. ಮದುವೆ ಆಗಿದೆ ಎಂದು ಕೇಳಿ ನೆಟ್ಟಿಗರು ಶಾಕ್....
 

ಕನ್ನಡ ಚಿತ್ರರಂಗದ ಅದ್ಭುತ ನಟ ಸಿಹಿ ಕಹಿ ಚಂದ್ರು ಮತ್ತು ಗೀತಾ ಮುದ್ದಿನ ಜೇಷ್ಠ ಪುತ್ರಿ ಹಿತಾ ಚಂದ್ರಶೇಖರ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ.

 ಕಾಲ್ ಕೆಜಿ ಪ್ರೀತಿ ಚಿತ್ರದ ಮೂಲಕ ಬಣ್ಣದ ಜರ್ನಿ ಆರಂಭಿಸಿರುವ ಈ ಚೆಲುವೆ 7-8 ಸಿನಿಮಾಗಳಲ್ಲಿ ನಟಿಸಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Tap to resize

ನಟ ಹಾಗೂ ಕ್ರೀಡಾ ನಿರೂಪಕ ಕಿರಣ್ ಶ್ರೀನಿವಾಸ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಹಿತಾ ಮುಂಬೈ ಕಡೆ ಪಯಣ ಮಾಡಿದ್ದರು. 

 ಮುಂಬೈನಲ್ಲಿ ಸಾಕಷ್ಟು ಆಡಿಷನ್‌ಗಳನ್ನು ಕೊಟ್ಟು ಸುಮಾರು ಜನಪ್ರಿಯ ಬ್ರ್ಯಾಂಡ್‌ಗಳ ಜೊತೆ ಕೆಲಸ ಮಾಡಿದ್ದಾರೆ. ಈ ನಡುವೆ ಹಿತಾ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದರು.

ಅಲ್ಲಿಗೆ ಸುಮ್ಮನಾಗದ ನಟಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ಡಯಟ್ ಮಾಡಿ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗಷ್ಟು ಸಣ್ಣಗಾಗಿದ್ದಾರೆ.

ಹಿತಾ ಹಾಕುವ ಪಾಸಿಟಿವ್ ಪೋಸ್ಟ್ ಹಾಗೂ ಮೋಟಿವೇಷನ್‌ ಪೋಸ್ಟ್‌ಗಳನ್ನು ನೆಟ್ಟಿಗರು ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ. 100 ದಿನಗಳ affiramation ಮಾಡುತ್ತಾರೆ.

ಹಿತಾ ಶೇರ್ ಮಾಡಿಕೊಂಡಿರುವ ಬೋಲ್ಡ್ ಫೋಟೋಗಳನ್ನು ನೋಡಿ ಖಂಡಿತಾ ಸಿಹಿ ಕಹಿ ಚಂದ್ರು ಮಗಳು ಎಂದು ನಂಬಲು ಸಾಧ್ಯವಿಲ್ಲ ಬಾಲಿವುಡ್ ನಟಿ ರೀತಿ ಇದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!