ಸ್ಯಾಂಡಲ್‌ವುಡ್ ನಿರ್ಮಾಪಕ ಯೋಗರಾಜ್ ಭಟ್ ಜೊತೆಗೆ ಇಂಗ್ಲೀಷ್‌ನಲ್ಲಿ ಮಾತಾಡಿ ಶಾಕ್ ಕೊಟ್ಟ ಮಕ್ಕಳು!
First Published | Sep 25, 2023, 8:10 PM ISTಬೆಂಗಳೂರು (ಸೆ.25): ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಚಲನಚಿತ್ರ ನಿರ್ದೇಶಕ, ಚಿತ್ರ ಕಥೆಗಾರ, ಗೀತ ರಚನೆಕಾರ ಹಾಗೂ ಸಿನಿಮಾ ಸಾಹಿತ್ಯ ಬರವಣಿಗೆಗೆ ಪ್ರಸಿದ್ಧಿಯಾಗಿದ್ದಾರೆ. ಆದರೆ, ಅವರ ಕನ್ನಡದ ಮೇಲಿನ ಪ್ರೀತಿ ಮಾತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಇನ್ನು ಕಳೆದೆರಡು ದಿನಗಳ ಹಿಂದೆ ತಮ್ಮ ಮಗಳ ಬರ್ತಡೇಗೆ ಮಕ್ಕಳೆಲ್ಲರೂ ಸೇರಿದಾಗ ಎಲ್ಲರಿಗೂ ಕನ್ನಡ ಮಾತಾಡ್ರಿ ಎಂದು ಹೇಳಿದರೆ ಮಕ್ಕಳು ಯಾ ಶೂರ್ ಅಂಕಲ್ ಎಂದಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮಕ್ಕಳ ಕನ್ನಡ ಕಲಿಕೆ ಬಗ್ಗೆ ತಿಳಿಸಿಕೊಟ್ಟಿದ್ದಾರೆ.