ಸೀರೆಯುಟ್ಟು ವಿಂಟೇಜ್ ಲುಕ್' ನಲ್ಲಿ ಕಾಣಿಸಿಕೊಂಡ ಸಿಕ್ಸ್ ಪ್ಯಾಕ್ ಸುಂದ್ರಿ ಸಪ್ತಮಿ ಗೌಡ

First Published | Nov 15, 2024, 8:36 PM IST

ಕಾಂತಾರ ಚೆಲುವೆ ಸಪ್ತಮಿ ಗೌಡ ಸೀರೆಯುಟ್ಟು ವಿಂಟೇಜ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನ ನೋಡಿ ಸಿಕ್ಸ್ ಪ್ಯಾಕ್ ಸುಂದ್ರಿ ಇನ್ ಸೀರೆ ಅಂತಿದ್ದಾರೆ ಫ್ಯಾನ್ಸ್. 
 

ಕಾಂತಾರ ಸಿನಿಮಾ ಮೂಲಕ ಮೋಡಿ ಮಾಡಿದ ಆಕ್ವಾ ಬೇಬಿ ಸಪ್ತಮಿ ಗೌಡ (Sapthami Gowda), ಕಾಂತಾರ ಸಿನಿಮಾದಲ್ಲಿ ಅದ್ಭುತ ಅಭಿನಯ ಹಾಗೂ ಪರ್ಸನಾಲಿಟಿಯಿಂದಾನೆ ಜನ ಮನ ಗೆದ್ದರು. 
 

ಯುವ ಸಿನಿಮಾದಲ್ಲೂ ಸಹ ತಮ್ಮ ನಟನೆಯಿಂದ ಮೆಚ್ಚುಗೆಗೆ ಪಾತ್ರವಾದ ನಟಿ ಸಪ್ತಮಿ, ಸದ್ಯ ತಮಿಳು ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅದಕ್ಕಾಗಿ ಎಲ್ಲಾ ಸಿದ್ಧತೆ ನಡೆದಿದೆ. 
 

Tap to resize

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಈ ಸಿಕ್ಸ್ ಪ್ಯಾಕ್ ಸುಂದರಿ (Six pack beauty), ತಮ್ಮ ಹೊಸ ಹೊಸ ಫೋಟೊ ಶೂಟ್ ಮೂಲಕ ಯಾವಾಗ್ಲೂ ಸುದ್ದಿಯಲ್ಲಿರುತ್ತಾರೆ. 
 

ಕೆಲ ದಿನಗಳ ಹಿಂದೆ ಮುದ್ದಾದ ರೆಟ್ರೋ ವಿಡಿಯೋ ಮೂಲಕ ಸೀರೆಯ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ಸಪ್ತಮಿಯ ಈ ರೆಟ್ರೋ ಲುಕ್, ವಿಡೀಯೋವನ್ನು ಇಷ್ಟಪಟ್ಟಿದ್ದರು. 
 

ಇದೀಗ ನಟಿ ತಮ್ಮ ವಿಂಟೇಜ್ ಲುಕ್ (vintage look) ಫೋಟೊಗಳನ್ನು ಸೋಶಿಯಲ್ ಮಿಡೀಯಾದಲ್ಲಿ ಶೇರ್ ಮಾಡಿದ್ದಾರೆ. ನಟಿಯ ಈ ಹಳೇ ಕಾಲದ ಹೀರೋಯಿನ್ ಲುಕ್ ನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. 
 

ಗುಲಾಬಿ ಮತ್ತು ಹಸಿರು ಬಣ್ಣದ ಆ ಸೀರೆ, ಅದಕ್ಕೆ ಪಫ್ ಬ್ಲೌಸ್, ಜಡೆ ಹೆಣೆದು ಕಟ್ಟಿದ ಉದ್ದ ಕೂದಲು. ತಲೆಗೆ ಮುಡಿದ ಮಲ್ಲಿಗೆ ಹೂವು, ಆ ವಿಂಟೇಜ್ ಕಾರು, ಇನ್ ಲ್ಯಾಂಡ್ ಲೆಟರ್ ಇವೆಲ್ಲಾ ಸೇರಿ ವಿಂಟೇಜ್ ಹೀರೋಯಿನ್ ಲುಕ್ ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. 
 

ಸಿಕ್ಸ್ ಪ್ಯಾಕ್ ಸುಂದರಿಯ ಈ ವಿಭಿನ್ನ ಲುಕ್ ಇಷ್ಟಪಟ್ಟಿರೋ ಜನ ನಟಿಯ ಕಣ್ಣುಗಳಲ್ಲಿನ ಭಾವನೆಗಳಿಗೆ ಸೋತು ಹೋಗಿದ್ದಾರೆ. ಅಷ್ಟೇ ಅಲ್ಲ ನಿಮ್ಮನ್ನು ಹೊಗಳೋದಕ್ಕೆ ಕವನ ರೆಡಿಮಾಡಿದ್ದೆ, ಆದ್ರೆ ಅಂದವನ್ನು ನೋಡಿ ಪದಗಳೆಲ್ಲಾ ಮರೆತು ಹೋಯ್ತು ಎಂದಿದ್ದಾರೆ. 
 

ದೃಷ್ಟಿಯಾಗಬಹುದು, ಆದಷ್ಟು ಬೇಗನೆ ದೃಷ್ಟಿ ತೆಗೆಯಿರಿ ಎಂದು ಒಬ್ರು ಹೇಳಿದ್ರೆ, ಮತ್ತೊಬ್ರು ದೇವತೆಯನ್ನು ನಿಜವಾಗಿ ನೋಡುವ ಆಸೆ, ಆದ್ರೆ ಆ ಅದೃಷ್ಟ ನಮಗಿಲ್ಲ, ಫೋಟೊದಲ್ಲಿ ನೋಡಿ, ಮನಸಿನಲ್ಲಿಟ್ಟು ಪೂಜಿಸ್ತೇನೆ ಎಂದು ಬರೆದಿದ್ದಾರೆ. ಜೊತೆಗೆ ಸಿಕ್ಸ್ ಪ್ಯಾಕ್ ಸುಂದರಿ ಇನ್ ಸೀರೆ ಅಂತಾನೂ ಹೇಳಿದ್ದಾರೆ. 
 

Latest Videos

click me!