ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ 25,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದವರು ಗಾಯಕಿ ಪಿ. ಸುಶೀಲಾ. 1953 ರಲ್ಲಿ ಎಂ.ಎಸ್. ವಿಶ್ವನಾಥನ್ ಮತ್ತು ಸುಬ್ಬುರಾಮನ್ ಸಂಗೀತದ "ಚಂದ್ರಾಣಿ" ಚಿತ್ರದ ಮೂಲಕ ತಮ್ಮ ಸಂಗೀತ ಯಾನ ಆರಂಭಿಸಿದರು. ಇತರ ಭಾಷೆಗಳಿಗೆ ಹೋಲಿಸಿದರೆ ತಮಿಳು ಮತ್ತು ಕನ್ನಡದಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆರು ತಲೆಮಾರಿನ ನಟ-ನಟಿಯರೊಂದಿಗೆ, ಸುಮಾರು 70 ವರ್ಷಗಳ ಕಾಲ ಈ ಕಲಾ ಕ್ಷೇತ್ರದಲ್ಲಿ ಅತ್ಯುತ್ತಮ ಗಾಯಕಿಯಾಗಿ ಇಂದಿಗೂ ಮುಂದುವರೆದಿರುವುದು ಗಮನಾರ್ಹ. ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ಹಲವು ದಾಖಲೆ ಪುಸ್ತಕಗಳಲ್ಲಿ ಸ್ಥಾನ ಪಡೆದಿರುವ ಪಿ. ಸುಶೀಲಾ ಅವರಿಗೆ ಈಗ 89 ವರ್ಷ.