ನಟ ರಿಷಬ್ ಶೆಟ್ಟಿ ಮತ್ತು ಪ್ರಗತಿ ದಂಪತಿಗೆ ಹೆಣ್ಣು ಮಗ ಜನನ!

First Published | Mar 4, 2022, 12:59 PM IST

ಮನೆಗೆ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ. ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ನಟ ಪೋಸ್ಟ್‌.....

ಕನ್ನಡ ಚಿತ್ರರಂಗದಲ್ಲಿರುವ ಡಿಫರೆಂಟ್ ಡೈರೆಕ್ಟರ್ ಕಮ್ ನಟ ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಕುಟುಂಬಕ್ಕೆ ಮುದ್ದಾದ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡಿದ್ದಾರೆ. 

ಪತ್ನಿ ಸೀಮಂತದ ಫೋಟೋ ಹಂಚಿಕೊಂಡು 'ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ,' ಎಂದು ರಿಷಬ್ ಬರೆದುಕೊಂಡಿದ್ದಾರೆ. 

Tap to resize

ರಿಷಬ್ ಎರಡನೇ ಬಾರಿ ತಂದೆಯಾಗುತ್ತಿರುವ ವಿಚಾರವನ್ನು ಫೋಟೋ ಶೂಟ್‌ ಮೂಲಕ 2022ರ ಹೊಸ ವರ್ಷದಂದು ರಿವೀಲ್ ಮಾಡಿದ್ದರು. ಫೋಟೋ ವಿಭಿನ್ನವಾಗಿದ್ದು ಎಲ್ಲರ ಗಮನ ಸೆಳೆದಿತ್ತು. 

'ಸಂತಸವೊಂದು ನಮ್ಮ ಕುಟುಂಬದ ಜೊತೆಯಾಗಲಿದೆ. ರಣ್‌ವಿತ್‌ ಶೆಟ್ಟಿ ಸದ್ಯದಲ್ಲೇ ಅಣ್ಣನಾಗಲಿದ್ದಾನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ, ಎಂದು ಬರೆದುಕೊಂಡಿದ್ದರು.

ಮೊದಲ ಸಲ ಗರ್ಭಿಣಿ ಆದಾಗ ಎಷ್ಟು ಅದ್ಧೂರಿ ಸೀಮಂತ ಮಾಡಿದ್ದರೋ ಅಷ್ಟೇ ಅದ್ಧೂರಿಯಾಗಿ ಎರಡನೇ ಸಲ ಗರ್ಭಿಣಿಯಾದಲೂ ಸೀಮಂತ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದ್ದವು.

ನನ್ನ ಪತ್ನಿ ನನಗೆ ಲಕ್ಕಿ ಚಾರ್ಮ್. ಆಕೆ ನನ್ನ ಜೀವನಕ್ಕೆ ಎಂಟ್ರಿ ಕೊಟ್ಟ ಮೇಲೆ ನಾನು ವೃತ್ತಿ ಜೀವನದ ಗ್ರಾಫ್ ಏರಿತ್ತು. ನಾನು ಸಿನಿಮಾ ಅಂತ ಬ್ಯುಸಿಯಾದರೆ ಮನೆ ಮಕ್ಕಳು ಅಂತ ನೋಡಿಕೊಳ್ಳುವುದು ಆಕೆಯೇ ಎಂದು ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಹೇಳಿದ್ದರು ರಿಷಭ್.

Latest Videos

click me!