ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟ ಜೈ ಜಗದೀಶ್ ಅವರ ಮುದ್ದಿನ ಪುತ್ರಿಯರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದೆ ಹಿರಿಯ ಪುತ್ರಿ ವೈಭವಿ ಫೋಟೋ ವೈರಲ್ ಆಗುತ್ತಿತ್ತು. ಈಗ ಕಿರಿಯ ಪುತ್ರಿ ವೈನಿಧಿ ಫೋಟೋ ಸಖತ್ ವೈರಲ್ ಆಗುತ್ತಿದೆ.
ಕಳೆದ ತಿಂಗಳು ವೈನಿಧಿ ಶ್ರೀಲಂಕಾ ಕಡೆ ಪ್ರಯಾಣ ಮಾಡಿದ್ದರು. ಆಗ ಸೆರೆ ಹಿಡಿದ ಫೋಟೋ ಇದಾಗಿದ್ದು ಸಖತ್ ಬಬ್ಲಿಯಾಗಿ ಕಾಣಿಸುತ್ತಿದ್ದಾರೆ.
'ಕೊಲಂಬೊದಲ್ಲಿ ಸಖತ್ ಗಾಳಿ ಇದ್ದ ದಿನ. ದೇವ್ನಾ ಸ್ಟಿಚಿಂಗ್ ಅವರು ಡಿಸೈನ್ ಮಾಡಿರುವ ಉಡುಪು ಇದು. ಒಂದೇ ದಿನದಲ್ಲಿ ರೆಡಿ ಮಾಡಿರುವುದು' ಎಂದು ವೈನಿಧಿ ಬರೆದುಕೊಂಡಿದ್ದಾರೆ.
'ನೀವು ಸಖತ್ ಬೋಲ್ಡ್ ಆಗಿದ್ದೀರಿ ಚೆನ್ನಾಗಿ ನಟಿಸುತ್ತೀರಿ ಖುಷಿಯಾಗುತ್ತದೆ. ನಿಮಗೆ ಇನ್ನು ಹೆಚ್ಚು ಅವಕಾಶಗಳು ಸಿಗಬೇಕು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಯಾನಾ, ಬೆಂಗಳೂರು ಬಾಯ್ಸ್, ರತ್ನನ್ ಪ್ರಪಂಚ ಮತ್ತು ಕ್ರಾಂತಿ ಸಿನಿಮಾದಲ್ಲಿ ವೈನಿಧಿ ನಟಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಒಂದು ಲಕ್ಷ 30 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
Vaishnavi Chandrashekar