ಆನಿವರ್ಸರಿ ಸಂಭ್ರಮದಲ್ಲಿ ದಿಯಾ ನಟಿ ಖುಷಿ ರವಿ… ಗಂಡ, ಮಗಳ ಜೊತೆ ಮುದ್ದಾದ ಫೋಟೋ

First Published | Nov 6, 2023, 5:23 PM IST

ದಿಯಾ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟಿಯಾಗಿ ಕಾಣಿಸಿಕೊಂಡ ಖುಷಿ ರವಿ ಇದೀಗ ತಮ್ಮ ಆನಿವರ್ಸರಿ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪತಿ ಮತ್ತು ಮಗಳ ಜೊತೆ ಫೋಟೊ ಸಹ ಶೇರ್ ಮಾಡಿದ್ದಾರೆ. 
 

ದಿಯಾ ಸಿನಿಮಾದಲ್ಲಿತಮ್ಮ ಮುಗ್ಧ ಅಭಿನಯದ ಮೂಲಕ ರಾಜ್ಯಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ ನಟಿ ಅಂದ್ರೆ ಖುಷಿ ರವಿ (Kushee Ravi).  ಇವರು ಕನ್ನಡ ಚಿತ್ರರಂಗದ ಭರವಸೆಯ ನಟಿಯೂ ಹೌದು. 
 

ದಿಯಾ (Dia) ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಸುಷ್ಮಿತಾ ರವಿ, ಬಳಿಕ ಖುಷಿ ರವಿಯಾಗಿ, ದಿಯಾ ಸಿನಿಮಾವನ್ನು ಆವರಿಸಿಕೊಂಡು, ರಾಜ್ಯದ ಫೆವರಿಟ್ ನಟಿಯರಲ್ಲಿ ಒಬ್ಬರಾದರು. ಇದೀಗ ನಟಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಮುದ್ದಾದ ಫೋಟೋ ಶೇರ್ ಮಾಡಿದ್ದಾರೆ. 
 

Latest Videos


ಹೌದು ಖುಷಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು (wedding anniversary) ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಗಂಡ ರಾಕೇಶ್ ಮತ್ತು ಮಗಳ ಜೊತೆಗಿನ ಮುದ್ದಾದ ಫೋಟೋ ಶೇರ್ ಮಾಡಿ, ವೆಡ್ಡಿಂಗ್ ಆನಿವರ್ಸರಿಯ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. 
 

ಖುಷಿ ಪತಿ ರಾಕೇಶ್ ಸ್ವಂತ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಈ ಜೋಡಿಯದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇವರ ಮುದ್ದಾದ ಮಗಳ ಹೆಸರು ತನಿಶಾ. ಮೂವರು ಜೊತೆಯಾಗಿರುವ ಫೋಟೋ ಶೇರ್ ಮಾಡಿರುವ ಖುಷಿ, ಹ್ಯಾಪಿ ಆನಿವರ್ಸರಿ ಲವ್. ಥ್ಯಾಂಕ್ಸ್ ಫಾರ್ ಎವ್ರಿಥಿಂಗ್ ಎಂದು ಬರೆದುಕೊಂಡಿದ್ದಾರೆ. 
 

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ಕಾಲೇಜು ವಿದ್ಯಾಭ್ಯಾಸ ಪೂರ್ತಿ ಮಾಡಿರುವ ಖುಷಿ ಸೋಡಾ ಬುಡ್ಡಿ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ಆದರೆ ನಾಯಕಿಯಾಗಿದ್ದು, ದಿಯಾ ಸಿನಿಮಾದಲ್ಲಿ. ಇದಲ್ಲದೇ ಹಾರರ್ ಸಿನೇಮಾ ಸ್ಪೂಕಿ ಕಾಲೇಜ್ ನಲ್ಲೂ ನಟಿಸಿದ್ದರು. 
 

ಅಷ್ಟೇ ಅಲ್ಲ ಇವರು ಕನ್ನಡದಲ್ಲಿ ನಕ್ಷೆ ಎನ್ನುವ ಸಿನಿಮಾದಲ್ಲೂ ನಟಿಸಲಿದ್ದಾರೆ, ಜೊತೆ ಫುಲ್ ಮೀಲ್ಸ್ ನಲ್ಲೂ ನಟಿಸಿದ್ದಾರೆ. ಇದಲ್ಲದೇ ಸಂಗಮ ಸಮಾಗಮ ಎನ್ನುವ ಶಾರ್ಟ್ ಫಿಲಂ ನಲ್ಲಿ, ಅಡಿಪೊಳಿ ಎನ್ನುವ ಮಲಯಾಳಂ ಮತ್ತು ನೀನಿಲ್ಲದೇ ಎನ್ನುವ ಕನ್ನಡ ಆಲ್ಬಂ ಸಾಂಗ್ ಗಳಲ್ಲಿ ನಟಿಸಿದ್ದಾರೆ. 
 

ನಟನೆಗೂ ಬರುವ ಮುನ್ನ ಇವರು ಸುಮಾರು 10 ವರ್ಷಗಳ ಕಾಲ ರಂಗಭೂಮಿಯಲ್ಲಿ (thatre artist)  ಜೊತೆ ಗುರುತಿಸಿಕೊಂಡಿದ್ದರು. ಹಲವಾರು ನಾಟಕಗಳಲ್ಲೂ ಸಹ ಇವರು ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಲವಾರು ಸಿನಿಮಾಗಳಲ್ಲಿ ಸಹ ಮಿಂಚಲು ರೆಡಿಯಾಗಿದ್ದಾರೆ.
 

ಪ್ರಣಮ್ ದೇವರಾಜ್ ಜೊತೆ 'ಸನ್ ಆಫ್‌ ಮುತ್ತಣ್ಣ' ಚಿತ್ರದಲ್ಲಿ, ವಿಜಯ ರಾಘವೇಂದ್ರ ಹಾಗೂ ಭಾವನಾ ಮೆನನ್‌ ಅಭಿನಯದ 'ಕೇಸ್ ಆಫ್ ಕೊಂಡಾಣ' ಚಿತ್ರದಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅಲ್ಲದೇ 'ರುದ್ರ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಈಗಾಗಲೇ ಶೂಟಿಂಗ್​ ಮುಕ್ತಾಯಗೊಂಡಿದೆ.  

click me!