ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಬೆಂಗಾಲಿ ಬೆಡಗಿ ಪ್ರಿಯಾಂಕಾ ಉಪೇಂದ್ರ ಮೋಸ್ಟ್ ಯಂಗ್ ಆಗಿ ಕಾಣಿಸುವ ಸೂಪರ್ ಮಾಮ್ ಎನ್ನಬಹುದು.
26
ಕನ್ನಡ, ತಮಿಳು ಮತ್ತು ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿರುವ ಈ ಸುಂದರಿ ರಿಯಲ್ ಸ್ಟಾರ್ ಉಪೇಂದ್ರ ಕೈ ಹಿಡಿದ ಮೇಲೆ ಅಪ್ಪಟ ಕನ್ನಡತಿ ಆಗಿಬಿಟ್ಟರು.
36
ಪುತ್ರ ಆಯುಷ್ ಮತ್ತು ಪುತ್ರಿ ಐಶ್ವರ್ಯಾಳನ್ನು ಚಿತ್ರರಂಗಕ್ಕೆ ಕರೆ ತರಲು ಸಜ್ಜಾಗಿರುವ ಈ ನಟಿ ಕೈಯಲ್ಲಿ ಸದ್ಯ ಮೂರ್ನಾಲ್ಕು ಸಿನಿಮಾಗಳಿದೆ, ಚಿತ್ರೀಕರಣ ನಡೆಯುತ್ತಿದೆ.
46
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪ್ರಿಯಾಂಕಾ ಹೊಸ ಫೋಟೋ ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ 'ಪ್ಯಾರಡೈಸ್' ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
56
ನೀಲಿ ಬಣ್ಣದ ಹರಿದಿರುವ ಜೀನ್ಸ್ ( ಟೋರ್ನ್ ಜೀನ್ಸ್)ಗೆ ಕಪ್ಪು ಬಣ್ಣದ ಶರ್ಟ್ ಧರಿಸಿದ್ದಾರೆ. ತಮ್ಮ ಬಣ್ಣದ ಕೂದಲನ್ನು ಕರ್ಲಿಂಗ್ ಮಾಡಿಕೊಂಡಿದ್ದಾರೆ.
66
ಅತ್ತಿಗೆ ನೀವು ಸೀರೆ ಧರಿಸಿ ಅಥವಾ ಸೆಲ್ವಾರ್ ಧರಿಸಿ ಈ ಹರಿದಿರುವ ಜೀನ್ಸ್ ಬೇಡ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ನಮ್ಮ ಅತ್ತಿಗೆ ಸೂಪರ್ ಮಾಮ್ ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.