ರಗಡ್‌ ಲುಕ್‌ಗೆ ಹೆದರಿಕೊಳ್ತಾರೆ ಆದ್ರೆ ನೀವು ಎಮೋಷನಲ್‌ ವ್ಯಕ್ತಿ; ದುನಿಯಾ ವಿಜಯ್‌ 50ನೇ ಹುಟ್ಟುಹಬ್ಬಕ್ಕೆ ಮಗಳ ಪೋಸ್ಟ್‌

Published : Jan 20, 2024, 01:04 PM IST

ತಂದೆ 50ನೇ ಹುಟ್ಟುಹಬ್ಬಕ್ಕೆ ಸ್ಪೆಷಲ್ ಪೋಸ್ಟ್ ಹಾಕಿದ ಮೋನಿಕಾ ವಿಜಯ್. ಅಪ್ಪ ಮೃಧು ಸ್ವಭಾವದವರು.....

PREV
17
ರಗಡ್‌ ಲುಕ್‌ಗೆ ಹೆದರಿಕೊಳ್ತಾರೆ ಆದ್ರೆ ನೀವು ಎಮೋಷನಲ್‌ ವ್ಯಕ್ತಿ; ದುನಿಯಾ ವಿಜಯ್‌ 50ನೇ ಹುಟ್ಟುಹಬ್ಬಕ್ಕೆ ಮಗಳ ಪೋಸ್ಟ್‌

ಕನ್ನಡ ಚಿತ್ರರಂಗ ಒಂಟಿ ಸಲಗ ದುನಿಯಾ ವಿಜಯ್ ಇಂದು 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬಸ್ಥರು ಮತ್ತು ಅಭಿಮಾನಿಗಳು ಅದ್ಧೂರಿ ಆಚರಣೆ ಮಾಡಲಿದ್ದಾರೆ.

27

ದುನಿಯಾ ವಿಜಯ್  ಹಿರಿಯ ಪುತ್ರಿ ಮೋನಿಕಾ ವಿಜಯ್ ಇನ್‌ಸ್ಟಾಗ್ರಾಂನಲ್ಲಿ ತಂದೆ ಜೊತೆಗಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

37

'ನನ್ನ ಜೀವನದಲ್ಲಿ ನಾನು ನೋಡಿರುವ ಬೆಸ್ಟ್‌ ಮತ್ತು ಮೋಸ್ಟ್‌ ಹಂಬಲ್ ವ್ಯಕ್ತಿ ಅಂದ್ರೆ ಅದು ನೀವೇ. ಜನರು ನಿಮ್ಮನ್ನು ನೋಡಿ ಹೆದರಿಕೊಳ್ಳುತ್ತಾರೆ'

47

'ನಿಮ್ಮ ಫಿಸಿಕ್ ಮತ್ತು ರಗಡ್‌ ಲುಕ್‌ ನೋಡಿ ಜನರು ಹೆದರಿಕೊಳ್ಳಬಹುದು ಆದರೆ ನೀವು ತುಂಬಾ ಸೆನ್ಸಿಟಿವ್ ಮತ್ತು ಮೃಧು ಹೃದಯದವರು'

57

'ಸಿನಿಮಾ ಕ್ಷೇತ್ರದಲ್ಲಿ ನಿಮ್ಮ ಸಮರ್ಪಣೆ, ಕಠಿಣ ಪರಿಶ್ರಮ, ಕೊಡುಗೆ ಮತ್ತು ಬದ್ಧತೆ ನಮಗೆ ಸ್ಫೂರ್ತಿ ತುಂಬುತ್ತದೆ. ನಿಮ್ಮ ಹೆಜ್ಜೆಗಳನ್ನು ಅನುಸರಿಸುತ್ತೀನಿ'

67

'ಅಪ್ಪ ನಿಮ್ಮ ಮೂವರು ಮಕ್ಕಳಿಗೆ ನೀವು ಬೆಳಕೆ, ಮನೆ ಮತ್ತು warmth. ನಿಮ್ಮ ದೊಡ್ಡ ಅಭಿಮಾನಿ ನಾನು ಹಾಗೂ ಮುದ್ದಿನ ಮಗಳು' ಎಂದು ಮೊನಿಕಾ ಬರೆದುಕೊಂಡಿದ್ದಾರೆ. 

77

ಶೀಘ್ರದಲ್ಲಿ ಮೋನಿಕಾ ದುನಿಯಾ ವಿಜಯ್ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ತಂದೆ ಭೀಮಾ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೆ ಸಿನಿಮಾ ತಯಾರಿ ಮಾಡಿಕೊಳ್ಳುತ್ತಿದ್ದು, ಫೋಟೋಶೂಟ್ ಆರಂಭಿಸಿದ್ದಾರೆ. 

Read more Photos on
click me!

Recommended Stories