ಒಡಿಶಾದಲ್ಲಿ ವಿಷ್ಣುವರ್ಧನ್‌ ಮರಳು ಶಿಲ್ಪ!

Suvarna News   | Asianet News
Published : Sep 17, 2021, 05:03 PM IST

ವಿಷ್ಣುವರ್ಧನ್ 71ನೇ ಜನ್ಮ ದಿನದ ಪ್ರಯುಕ್ತ ಒಡಿಶಾದಲ್ಲಿ ಮರಳುಶಿಲ್ಪ ರಚಿಸಿದ್ದಾರೆ. ಎಲ್ಲೆಡೆ ಸೋಷಿಯಲ್ ಮೀಡಿಯಾದಲ್ಲಿ ಈ ಶಿಲ್ಪಕಲೆ ವೈರಲ್ ಆಗುತ್ತಿದೆ.  

PREV
16
ಒಡಿಶಾದಲ್ಲಿ ವಿಷ್ಣುವರ್ಧನ್‌ ಮರಳು ಶಿಲ್ಪ!

ಸೆಪ್ಟೆಂಬರ್ 18 ಡಾ.ವಿಷ್ಣುವರ್ಧನ್ ಅವರ 71ನೇ ಹುಟ್ಟಿದ ಹಬ್ಬ. ದಾದಾ ಇನ್ನಿಲ್ಲವಾದರೂ ಅವರ ನೆನಪುಗಳು ಅಮರ. ಅವರ ಹುಟ್ಟುಹಬ್ಬಕ್ಕೆ ಕಲಾವಿದ ಮನೀಶ್ ಕೃತಜ್ಞತೆಗಳನ್ನು ಸಲ್ಲಿಸಿದ್ದು ಹೀಗೆ.

26

ವಿಷ್ಣುವರ್ಧನ್ ಹುಟ್ಟು ಹಬ್ಬದ ಪ್ರಯುಕ್ತ ಒಡಿಶಆದ ಪುರಿ ಸಮುದ್ರ ತೀರದಲ್ಲಿ ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಮರುಳು ಶಿಲ್ಪ ಮಾಡಿದ್ದಾರೆ.

36

ಒಡಿಶಾದಲ್ಲಿ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ವಿಷ್ಣುವರ್ಧನ್‌ ಮರಳು ಶಿಲ್ಪ ಅರಳಿದೆ.  ಹಸಿರು, ಕೆಂಪು ಹಾಗೂ ಹಳದಿ ಬಣ್ಣಗಳಿಂದ ಈ ಶಿಲ್ಪವನ್ನು ಚೆಂದಗೊಳಿಸಿದ್ದಾರೆ. 

46

ಒಡಿಶಾದ ಪುರಿ ಮರೀನ್‌ ಡ್ರೈವ್‌ ಬೀಚ್‌ನಲ್ಲಿ ಹೆಸರಾಂತ ಶಿಲ್ಪಿ ಮನೀಶ್‌ ಕುಮಾರ್‌ ಅವರು ಈ ಶಿಲ್ಪ ನಿರ್ಮಿಸಿದ್ದಾರೆ. ಈ ಸಮುದ್ರ ತೀರದಲ್ಲಿ ಕನ್ನಡ ಚಿತ್ರ ಕಲಾವಿದರೊಬ್ಬರ ಮರಳು ಶಿಲ್ಪ ನಿರ್ಮಾಣವಾಗಿರುವುದು ಇದೇ ಮೊದಲು. ಇದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವೀರಪುತ್ರ ಶ್ರೀನಿವಾಸ ಅವರು ಒದಗಿಸಿದ್ದಾರೆ.

56

ಕೆಲವು ದಿನಗಳ ಹಿಂದೆ ವಿಷ್ಣುವರ್ಧನ್ ಅವರ ಜೀವನದ ಬಗ್ಗೆ ಡಾ.ವಿಷ್ಣುಸೇನಾ ಸಮಿತಿಯು ಪುಸ್ತಕ ಬಿಡುಗಡೆ ಮಾಡಿದ್ದಾರೆ. ಸಚಿವ ಬಿಸಿ ನಾಗೇಶ್ ಬಿಡುಗಡೆ ಮಾಡಿದರು.

66

ಡಾ. ಶರಣು ಹುಲ್ಲೂರು ಡಾ.ವಿಷ್ಣುವರ್ಧನ್ ಮೇಲೆ ಬರೆದಿರುವ  ಕಿರು ಹೊತ್ತಿಗೆಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ದೃಷ್ಟಿಯಿಂದ ಪ್ರಕಟಿಸಲಾಗಿದೆ.

click me!

Recommended Stories