ಸ್ಯಾಂಡಲ್‌ವುಡ್ ನಟಿ ಮಯೂರಿ ಅವರು ಮಗನ 6 ತಿಂಗಳ ಬರ್ತ್‌ಡೇ ಆಚರಿಸಿ ಸಂಭ್ರಮಿಸಿದ್ದಾರೆ. ಪತಿ ಹಾಗೂ ಕಂದನ ಜೊತೆ ಫೋಟೋ ಶೂಟ್ ಮಾಡಿಸಿಕೊಂಡು ಕೇಕ್ ಕತ್ತರಿಸಿ 6 ತಿಂಗಳ ಸಂಭ್ರಮವನ್ನು ಸೆಲೆಬ್ರೇಟ್ ಮಾಡಿದ್ದಾರೆ.
ನಟಿ ಒಂದಷ್ಟು ಫೋಟೋಗಳ ಜೊತೆ ಸೆಲೆಬ್ರೇಷನ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮಯೂರಿ ಮಗನನ್ನು ಎತ್ತಿ ಆಡಿಸುವುದನ್ನೂ ಕಾಣಬಹುದು.
ಆಕಾಶ ನೀಲಿ ಬಣ್ಣದ ಲಾಂಗ್ ಗೌನ್ ಧರಿಸಿದ್ದ ಮಯೂರಿ ಜೊತೆ ಅವ ಪತಿ ಹಾಗೂ ಮಗನೂ ಮ್ಯಾಚಿಂಗ್ ಉಡುಗೆ ತೊಟ್ಟಿದ್ದರು. ವೈಟ್ ಹಾಗೂ ಸ್ಕೈ ಬ್ಲೂ ಕಾಂಬಿನೇಷನ್‌ನಲ್ಲಿ ಫ್ಯಾಮಿಲಿ ಮಿಂಚಿದೆ.
ಮಗುವಿಗಿನ್ನೂ ಅರ್ಧ ವರ್ಷವಾಗಿರುವುದರಿಂದ ಅರ್ಧ ಕೇಕ್ ಅನ್ನೇ ತರಿಸಿದ್ದಾರೆ. ಆಕಾಶ ನೀಲಿ ಬಣ್ಣದ ಚಂದದ ಕೇಕ್ ಮೇಲ್ಭಾಗದಲ್ಲಿ ಬಿಳಿ ಪದರ ಹೊಂದಿದೆ. ಹ್ಯಾಪಿ 6th ಮಂತ್ ಎಂದೂ ಬರೆಯಲಾಗಿದೆ
ಬಿಳಿ ಹೂವಿನ ಬೊಕ್ಕೆ ಹಿಡಿದು ಪತಿಯ ಜೊತೆ ನಗುಮುಖದಲ್ಲಿ ಪೋಸ್ ಕೊಡುತ್ತಿರುವ ನಟಿ ಮಯೂರಿ ಚಂದದ ಫೊಟೋ. ಪತಿಯೂ ವೈಟ್ ಶರ್ಟ್ ಮೇಲೆ ಆಕಾಶನೀಲಿ ಬಣ್ಣದ ಕೋಟ್ ಧರಿಸಿದ್ದರು.
ಬರ್ತ್‌ಡೇ ಸಂಭ್ರಮದ ಮಧ್ಯೆ ಮಗನನ್ನು ಎತ್ತಿ ಆಡಿಸುತ್ತಿರುವ ಮಯೂರಿ. ನಟಿಯ ಮಗನೂ ಮುದ್ದಾಗಿ ನಗುವುದನ್ನು ಈ ಫೋಟೋದಲ್ಲಿ ಕಾಣಬಹುದು
ಈ ಸುಂದರ ಬದುಕಿಗೆ 6 ತಿಂಗಳು. ಎಷ್ಟು ಬ್ಲೆಸ್ಡ್ ಎಂದು ಹೇಳಲು ನನ್ನಲ್ಲಿ ಪದಗಳಿಲ್ಲ. ಹ್ಯಾಪಿ 6th ಮಂತ್ಸ್ ಬಂಗಾರ ಎಂದು ನಟಿ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ