ದುಬೈ ಹುಲಿ-ಹೆಬ್ಬಾವು ಜೊತೆ ನಟ ದರ್ಶನ್; ಪೋಟೋ ವೈರಲ್

First Published | Jan 11, 2024, 11:00 AM IST

ದುಬೈನಲ್ಲಿ ಧೋಳ್ ಎಬ್ಬಿಸುತ್ತಿರುವ ಕಾಟೇರ ಸಿನಿಮಾ. ಚಿತ್ರತಂಡದ ಜೊತೆ ದುಬೈ ಪ್ರವಾಸ ಎಂಜಾಯ್ ಮಾಡುತ್ತಿರುವ ತಂಡ..... 

 ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣ, ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾ ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

 ಹೀಗಾಗಿ ಕಾಟೇರ ಸಿನಿಮಾ ದುಬೈನಲ್ಲಿ ರಿಲೀಸ್ ಆಗಿದ್ದು. ನಟ ದರ್ಶನ್ ಮತ್ತು ಚಿತ್ರತಂಡ ಅಲ್ಲಿಯೂ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. 

Tap to resize

ಕಾಟೇರ ಚಿತ್ರಕಥೆ ಸೂಪರ್ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಟನೆ ಅದ್ಭುತವಂತೆ. 

ದುಬೈನಲ್ಲಿ ಸಿನಿಮಾ ಪ್ರಚಾರದ ಜೊತೆ ಸ್ನೇಹಿತರ ಜೊತೆ ದರ್ಶನ್ ಸುತ್ತಾಡುತ್ತಿದ್ದಾರೆ. ದುಬೈನಲ್ಲಿರುವ ಹುಲಿ ಮತ್ತು ಹಾವುಗಳನ್ನು ನೋಡಲು ಹೋಗಿದ್ದಾರೆ.

 ದುಬೈನಲ್ಲಿರುವ ಟ್ರೈನಿಂಗ್ ಹುಲಿಯನ್ನು ದರ್ಶನ್ ಮುದ್ದಾಡಿದ್ದಾರೆ. ಯಾವುದೇ ಭಯವಿಲ್ಲ ಅಲ್ಲಿನ ಹಾವುಗಳನ್ನು ಕುತ್ತಿಗೆ ಸುತ್ತಾ ಧರಿಸಿ ಫೋಟೋಗೆ ಸ್ಮೈಲ್ ಮಾಡಿದ್ದಾರೆ.

ಕರ್ನಾಟಕದ ಹುಲಿ ಜೊತೆ ದುಬೈ ಗಜ ಎಂದು ನೆಟ್ಟಿಗರು ವಿಡಿಯೋ ವೈರಲ್ ಮಾಡುತ್ತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ದರ್ಶನ್ 'ಹೇ ಪ್ರಭು' ಹೇಳುತ್ತಿದ್ದಾರೆ.

ಅಲ್ಲದೆ ದುಬೈನಲ್ಲಿರುವ ಚಿಂಪಾಂಜಿ ಜೊತೆ ದರ್ಶನ್ ಆಟವಾಡಿದ್ದಾರೆ. ಅದ ಕೈ ಹಿಡಿದುಕೊಂಡು ವಾಕಿಂಗ್ ಮಾಡಿದ್ದಾರೆ. ಮೈಸೂರಿನಲ್ಲಿ ಅರ್ಜುನ ಅಗಲಿದಾಗಲೂ ದರ್ಶನ್ ಬೇಸರ ಮಾಡಿಕೊಂಡಿದ್ದರು.

ಪ್ರಾಣಿ ಪಕ್ಷಿಗಳ ಮೇಲೆ ದರ್ಶನ್‌ಗೆ ಪ್ರೀತಿ. ಹೀಗಾಗಿ ಯಾವ ಪ್ರಾಣಿ ಪಕ್ಷಿಗಳನ್ನು ಸಾಕಲು ಅನುಮತಿ ಇದೆ ಎಂದು ತಿಳಿದುಕೊಂಡು ತಮ್ಮ ತೋಟದ ಮನೆಯಲ್ಲಿ ಸಾಕುತ್ತಾರೆ.  

Latest Videos

click me!