ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳು ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಟಫ್ ಫೈಟ್ ಕೊಡುತ್ತಿರುವ ಸಂಗೀತಾ ಶೃಂಗೇರಿ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಕಿರಿಕ್ ಮಾಡುವ ಸಂಗೀತಾಗೆ ಕನ್ನಡ ಓದೋಕೆ ಬರಲ್ಲ ಅನ್ನೋದು ಬೇಸರದ ವಿಚಾರ.
ಹೌದು! ಬಿಗ್ ಬಾಸ್ ಟಾಸ್ಕ್ ಪತ್ರಗಳನ್ನು ಕಳುಹಿಸಿದಾಗ ಸಂಗೀತಾ ಶೃಂಗೇರಿ ಆದಷ್ಟು ಓದುವುದನ್ನು ತಪ್ಪಿಸಿ ಮತ್ತೊಬ್ಬರಿಗೆ ಕೊಡುತ್ತಾರೆ.
ಇದನ್ನು ಗಮನಿಸಿದ ನೆಟ್ಟುಗರು ಕಾರಣ ಏನೆಂದು ಹುಡುಕಲು ಶುರು ಮಾಡಿದಾಗ. ಈ ಹಿಂದೆ ನೀಡಿದ ಸಂದರ್ಶನದಲ್ಲಿ ಸಂಗೀತಾ ಕನ್ನಡನೇ ಇರಲಿಲ್ಲ ಎಂದಿದ್ದಾರೆ.
'ನಾನು ಓದಿರೋದು ಕೇಂದ್ರೀಯ ವಿದ್ಯಾಲಯದಲ್ಲಿ. ಅಲ್ಲಿ ಕನ್ನಡ ಸಬ್ಜಕ್ಟ್ ಇರಲಿಲ್ಲ' ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಸಂಗೀತಾ ಹೇಳಿದ್ದರು.
ಸಂಗೀತಾ ತಂದೆ ಶಿವಕುಮಾರ್ ಏರ್‌ಫೋರ್ಸ್‌ನಲ್ಲಿದ್ದವರು ಹೀಗಾಗಿ ಮಿಲಿಟರಿ ಬ್ಯಾಗೌಂಡ್‌ನಲ್ಲಿ ಸಂಗೀತಾ ಬೆಳೆದು ವಿದ್ಯಾಭ್ಯಾಸ ಮುಗಿಸಿದ್ದಾರೆ.
ನಟಿಯಾಗುವ ಮುನ್ನ ಸಂಗೀತಾ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಮದುವೆ ಮನೆಯಲ್ಲಿ ವೆಲ್ಕಂ ಮಾಡುವ ಹುಡುಗಿ, ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿಕೊಂಡು ಜೀವನ ಆರಂಭಿಸಿದ್ದಾರೆ.
Vaishnavi Chandrashekar