ದೇಹ ಸೌಂದರ್ಯದಿಂದ ನೆಟ್ಟಿಗರ ಎದೆಯಲ್ಲಿ ಕಿಚ್ಚು ಹಚ್ಚಿದ ಧ್ರುವ ಸರ್ಜಾ ನಾಯಕಿ ಅನ್ವೇಶಿ ಜೈನ್ !

ನಟ  ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದ ನಾಯಕಿ ಅನ್ವೇಶಿ ಜೈನ್ ಅವರ ಹಾಟ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದು, ಎಲ್ಲೆಡೆ  ಅವರ ಫೋಟೋಗಳು ವೈರಲ್‌ ಆಗುತ್ತಿದೆ. ಆಕೆಯ ದೈಹಿಕ ಸೌಂದರ್ಯಕ್ಕೆ ಪಡ್ಡೆ ಹುಡುಗರು ಮಾರು ಹೋಗಿದ್ದಾರೆ.

ಮಧ್ಯಪ್ರದೇಶ ಮೂಲದ ನಟಿ ಅನ್ವೇಶಿ ಜೈನ್, ಮಾಡೆಲ್​, ಗಾಯಕಿ ಜೊತೆಗೆ ತನ್ನ ಹಾಟ್​ ಲುಕ್​ ಮೂಲಕವೇ ಫೇಮಸ್​ ಆದವರು. ಈಕೆಯ ಮೈಮಾಟ ಕಂಡು ನೆಟ್ಟಿಗರು ಕ್ಲೀನ್​ ಬೋಲ್ಡ್ ಆಗಿದ್ದಾರೆ. 

ಈಕೆ ನಟಿ, ಗಾಯಕಿ, ಮಾಡೆಲ್‌ ಮಾತ್ರವಲ್ಲ ಓರ್ವ ಪ್ರೇರಣಾತ್ಮಕ ಹಾಗೂ  ಸ್ಪೂರ್ತಿದಾಯಕ ಭಾಷಣಗಾರ್ತಿ ಕೂಡ ಹೌದು.  ಮೇಕಿಂಗ್ ಇಂಡಿಯಾ ಪ್ರಶಸ್ತಿ ಕೂಡ ಪಡೆದಿದ್ದಾರೆ.


ಇಂಜಿನಿಯರಿಂಗ್ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿದ್ದ ಅನ್ವೇಶಿ ಜೈನ್ ಅವರಿಗೆ ಉದ್ಯಮಿ ಆಗಬೇಕೆಂಬ ಆಸೆ ಇತ್ತು. ನಟಿಯಾಗುವ ಮೊದಲು ಅವರು ಮಧ್ಯಪ್ರದೇಶದ ಇಂದೋರ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 
 

ಗಾಂಧಿ ಬಾತ್ ವೆಬ್ ಸೀರೀಸ್‌ನ ಮೊದಲ ಭಾಗವು ಸೂಪರ್ ಹಿಟ್ ಆಗಿತ್ತು. ವಯಸ್ಕರ ವೆಬ್​ ಸೀರೀಸ್​ಗಳಲ್ಲಿ ಹೆಚ್ಚು ನಟಿಸಿದ್ದಾರೆ. 2019ರಲ್ಲಿ ಈಕೆ ಅತೀಹೆಚ್ಚು ಹುಡುಕಲ್ಪಟ್ಟ ಗೂಗಲ್ ನಟಿ ಎನಿಸಿಕೊಂಡಿದ್ದಾರೆ.
 

ಅನ್ವೇಶಿ ಫಿಟ್‌ನೆಸ್ ಫ್ರೀಕ್, ಒಂದು ದಿನವೂ ಆಕೆ ಜಿಮ್‌ ಮಿಸ್‌ ಮಾಡುವುದಿಲ್ಲವಂತೆ. ಆಕೆಯ ಹೆಚ್ಚಿನ ವಿಡಿಯೋಗಳು ಜಿಮ್‌ ವರ್ಕ್ಔಟ್‌ ನದ್ದೇ ಆಗಿದೆ.
 

ಧ್ರುವ ಸರ್ಜಾ ನಟನೆಯ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಮಾರ್ಟಿನ್. ಉದಯ್‌ ಮೆಹ್ತಾ ನಿರ್ಮಿಸುತ್ತಿರುವ ಈ ಚಿತ್ರವನ್ನು ಎ ಪಿ ಅರ್ಜುನ್‌ ನಿರ್ದೇಶಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದೆ.  

Anveshi Jain

ಕಳೆದ ವರ್ಷ ಫೆ.23ಕ್ಕೆ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್‌’ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಗಿತ್ತು. ಐದು ಭಾಷೆಗಳಲ್ಲಿ ಟೀಸರ್‌ ಬಿಡುಗಡೆ ಆಗಿದ್ದು, 2021 ಸೆಪ್ಟೆಂಬರ್‌ನಲ್ಲಿ ಸಿನಿಮಾ ಸೆಟ್ಟೇರಿತ್ತು

ಅರ್ಜುನ್‌ ಸರ್ಜಾ  ಅವರು ಈ ಚಿತ್ರಕ್ಕೆ ಕತೆ ಬರೆದಿದ್ದು ಬೆಂಗಳೂರು, ಹೈದರಾಬಾದ್‌, ಕಾಶ್ಮೀರ, ಮುಂಬಯಿ ಸೇರಿ ಹಲವು ಲೊಕೇಶನ್‌ಗಳಲ್ಲಿ ಶೂಟಿಂಗ್‌ ಮಾಡಲಾಗಿದೆ.  

Latest Videos

click me!