ಯಾರಿಗೂ ಗುರುತು ಸಿಗದಂತೆ ಮಾರುವೇಷದಲ್ಲಿ ಮೆಟ್ರೋದಲ್ಲಿ ಓಡಾಡಿದ ನಟ ಡಾಲಿ ಧನಂಜಯ್!

First Published | Jun 22, 2024, 8:19 PM IST

ನಟ ಡಾಲಿ ಧನಂಜಯ್‌ ನಮ್ಮ ಮೆಟ್ರೋದಲ್ಲಿ ಒಡಾಡಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದೆ. ಸಾಮಾನ್ಯ ಜನರಂತೆ ಮಾರುವೇಷದಲ್ಲಿ ಮೆಟ್ರೋ ಹತ್ತಿ ಎಂಜಾಯ್ ಮಾಡಿದ್ದಾರೆ.

ನಟ ಡಾಲಿ ಧನಂಜಯ್‌ ನಮ್ಮ ಮೆಟ್ರೋದಲ್ಲಿ ಒಡಾಡಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿದೆ. ತಲೆಗೊಂದು ಹ್ಯಾಟ್‌ , ಕನ್ನಡಕ, ಮತ್ತು ಮಾಸ್ಕ್‌ ಧರಿಸಿರುವ ಡಾಲಿಯನ್ನು ಮೆಟ್ರೋದಲ್ಲಿ ಯಾರೂ ಗುರುತಿಸಿಲ್ಲ.

ನೇರಳೆ ಮಾರ್ಗದ ಮೆಟ್ರೋ ಹತ್ತಿರುವ ಡಾಲಿ ಕುಂದಲಹಳ್ಳಿ ಸ್ಟೇಷನ್‌ನಲ್ಲಿ ಹತ್ತಿ ಎಲ್ಲಿ ತನಕ ಪ್ರಯಾಣ ಬೆಳೆಸಿದ್ದಾರೆ ಎಂಬುದನ್ನು ತಿಳಿಸಿಲ್ಲ. ಆದರೆ ಕುಂದಲಹಳ್ಳಿಯಿಂದ ಕೆಂಗೇರಿ ತನಕ ಪ್ರಯಾಣ ಬೆಳೆಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Tap to resize

ಐಷಾರಾಮಿ ಕಾರು ಬಿಟ್ಟು ಮೆಟ್ರೋ ಹತ್ತಿದ ಡಾಲಿ ಮಾಸ್ಕ್ ಗ್ಲಾಸ್ ಧರಿಸಿ ಮಾರುವೇಷದಲ್ಲಿ ಜಾಲಿ ರೈಡ್ ಮಾಡಿದ್ದು, ಕೈಯಲ್ಲಿ ಒಂದು ಬಾಕ್ಸ್ ಹಿಡಿದು ಕುಳಿತುಕೊಂಡಿರುವ ಫೋಟೋ ವೈರಲ್ ಆಗಿದೆ.

ಇತ್ತೀಚೆಗೆ ಅಂದರೆ ಜೂ.14ರಂದು ಡಾಲಿ ಧನಂಜಯ್‌ ಅವರ ನಟನೆಯ ಕೋಟಿ ಸಿನೆಮಾ ಬಿಡುಗಡೆಯಾಗಿತ್ತು.  ಪರಮ್‌ ನಿರ್ದೇಶನದ ಈ ಸಿನೆಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಯಕ ನಟಿ ಮೋಕ್ಷ, ಖಳ ಪಾತ್ರಧಾರಿ ರಮೇಶ್ ಇಂದಿರಾ, ತಾರಾ ಈ ಚಿತ್ರದಲ್ಲಿದ್ದು, ಧನಂಜಯ್‌ ಹಾಗೂ ರಮೇಶ್‌ ಇಂದಿರಾ ನಟನೆಗೆ, ಛಾಯಾಗ್ರಹಣಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.

‘ಅಲ್ಲಮ’ ಬಳಿಕ ನಾಗಾಭರಣ- ಧನಂಜಯ ಜೋಡಿಯ ಮತ್ತೊಂದು ಐತಿಹಾಸಿಕ ಸಿನಿಮಾ ಬರುತ್ತಿದೆ. ‘ನಾಡಪ್ರಭು ಕೆಂಪೇಗೌಡ’ ಹೆಸರಿನ ಅದ್ಧೂರಿ ಬಜೆಟ್‌ ಚಿತ್ರ ತಯಾರಾಗುತ್ತಿದೆ. ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಕೆಂಪೇಗೌಡ ಪಾತ್ರದಲ್ಲಿ ನಟ ಡಾಲಿ ಧನಂಜಯ್‌ ನಟಿಸುತ್ತಿದ್ದಾರೆ.
 

Latest Videos

click me!