ಕನ್ನಡ ಚಿತ್ರರಂಗದ ʼಮೋಸ್ಟ್ ಎಲಿಜಿಬಲ್ ಬ್ಯಾಚುಲರ್ʼ ಧನಂಜಯ ಅವರು ಮದುವೆಯಾಗುತ್ತಿದ್ದಾರೆ, ಅಭಿಮಾನಿಗಳಿಗೆ ಅವರು ಹೋಳಿಗೆ ಊಟ ಹಾಕಿಸುತ್ತಿದ್ದಾರೆ. ಕನ್ನಡ, ತೆಲುಗು ಭಾಷೆಯ ಚಿತ್ರರಂಗದವರಿಗೂ ಮದುವೆಯ ಆಹ್ವಾನ ಹೋಗಿದೆ. ಇನ್ನು ಧನಂಜಯ, ಧನ್ಯತಾ ಅವರ ಅರಿಷಿಣ ಶಾಸ್ತ್ರ ನಡೆದಿದೆ. ಕೆರೆಯ ಬಳಿ ಒಂದು ಸೆಟ್ ಹಾಕಲಾಗಿತ್ತು. ಪ್ರಕೃತಿ ಮಧ್ಯದಲ್ಲಿ ಈ ಜೋಡಿ ಹಳದಿ ಶಾಸ್ತ್ರವನ್ನು ಮಾಡಿಕೊಂಡಿದೆ. ಈ ಕಾರ್ಯದಲ್ಲಿ ಧನಂಜಯ ಅವರ ಸ್ನೇಹಿತರು, ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಆಗಮಿಸಿದ್ದರು.