ಸ್ಯಾಂಡಲ್ವುಡ್ ನಟಿ ಸೋನಾಲ್ ಮೊಂತೆರೋ ಅವರು ಪ್ರೇಮಿಗಳ ದಿನದಂದು ವಿಶೇಷವಾಗಿ ಪೋಸ್ಟ್ ಶೇರ್ ಮಾಡಿದ್ದಾರೆ. ಆ ಪೋಸ್ಟ್ನಲ್ಲಿ ತರುಣ್ ಸುಧೀರ್ ಜೊತೆಗಿನ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.
27
ವಿಡಿಯೋದಲ್ಲಿ ತರುಣ್ ಸುಧೀರ್, ಸೋನಾಲ್ ಮೊಂತೆರೋ ಕೈ ಕೈ ಹಿಡಿದು ಡ್ಯಾನ್ಸ್ ಮಾಡಿ ಅಪ್ಪಿಕೊಂಡಿದ್ದಾರೆ. ಜೊತೆಗೆ ಸೋನಾಲ್ ಹಣೆಗೆ ಚುಂಬಿಸಿದ್ದಾರೆ. ವಿಶೇಷವಾಗಿ ರೋಸ್ ಬೊಕ್ಕೆಯನ್ನು ಕೊಟ್ಟಿರುವುದನ್ನು ಕಾಣಬಹುದು.
37
ಪತಿ-ಪತ್ನಿಯಾಗಿ ನಮ್ಮ ಮೊದಲ ಪ್ರೇಮಿಗಳ ದಿನ. ನೀವು ನನ್ನ ಇಂದು ಮತ್ತು ನನ್ನ ಎಲ್ಲಾ ನಾಳೆಗಳು. ಪ್ರೀತಿ, ನಗು ಮತ್ತು ಸುಂದರವಾದ ನೆನಪುಗಳ ಜೀವಮಾನವಿಡೀ ಇಲ್ಲಿದೆ. ಲವ್ ಯೂ ತರುಣ್ ನಿಮಗೆ ಪ್ರೇಮಿಗಳ ದಿನದ ಶುಭಾಶಯಗಳು ಎಂದು ಕ್ಯಾಪ್ಶನ್ ಬರೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
47
ಇನ್ನು ನಟಿ ಸೋನಲ್, ತರುಣ್ ಸುಧೀರ್ ಇಬ್ಬರು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಬಳಿಕ ಮೊದಲ ದೀಪಾವಳಿ ಹಬ್ಬವನ್ನು ದೀಪಗಳ ಜೊತೆಗೆ ಸೆಲೆಬ್ರೇಟ್ ಮಾಡಿದ್ದರು.
57
ತರುಣ್ ಸುಧೀರ್ ಮತ್ತು ಸೋನಲ್ ಮೊದಲಿಗೆ ಹಿಂದು ಸಂಪ್ರದಾಯದಂತೆ ವಿವಾಹವಾಗಿದ್ದ ಜೋಡಿ, ನಂತ್ರ ಕ್ರಿಶ್ಚಿಯನ್ ವೆಡ್ಡಿಂಗ್ ಆಗಿದ್ದರು. ಈ ಜೋಡಿ ಇತ್ತೀಚೆಗೆ ಹನಿಮೂನ್‌ಗಾಗಿ ಮಾಲ್ಡೀವ್ಸ್‌ಗೂ ಹೋಗಿ ಬಂದಿದ್ದರು.
67
ಸೋನಲ್ ಅವರು, ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
77
ಅಂದಹಾಗೆ ತರುಣ್ ಮತ್ತು ಸೋನಲ್ ನಡುವಿನ ವಯಸ್ಸಿನ ಅಂತರ 11 ವರ್ಷ. ತರುಣ್ ಸುಧೀರ್‌ಗೆ 41 ವರ್ಷ ವಯಸ್ಸಾಗಿದೆ. ಇನ್ನು ನಟಿ ಸೋನಲ್ ಮೊಂಥೆರೋಗೆ 29 ವರ್ಷ ವಯಸ್ಸಾಗಿದೆ.