ಕನ್ನಡ ಭೀಷ್ಮ ಜಿ ವಿ ಅಯ್ಯರ್ ಜನ್ಮ ದಿನದ ಸವಿನೆನಪು

First Published Sep 3, 2020, 4:55 PM IST

ರಂಗಕರ್ಮಿಯಾಗಿ ವೃತ್ತಿ ಜೀವನ ಆರಂಭಿಸಿ ನಂತರ ಕನ್ನಡ ಹೆಸರಾಂತ ನಟ ,ನಿರ್ದೇಶಕ ಸಂಭಾಷಣೆಕಾರರಾಗಿ ಕನ್ನಡ ಭೀಷ್ಮನೆಂದೇ ಹೆಸರುವಾಸಿಯಾಗಿರುವ ಜಿ ವಿ ಅಯ್ಯರ್ ಅವರ ಜನ್ಮ ದಿನದ ಸವಿನೆನಪಿನಲ್ಲಿ ಒಂದಷ್ಟು ಅಪರೂಪದ ಮಾಹಿತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ಓದಿ ...

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಜನಿಸಿದ ಜಿ.ವಿ.ಅಯ್ಯರ್ ಅವರ ಪೂರ್ಣ ಹೆಸರು ಗಣಪತಿ ವೆಂಕಟರಮಣ ಅಯ್ಯರ್
undefined
ಸದಾರಮೆ ಹಾಗೂ ಗುಬ್ಬಿ ನಾಟಕ ಕಂಪನಿಯಲ್ಲಿ ಪರಿಚಾರಕರಾಗಿ, ಪೋಸ್ಟರ್ ಬರೆಯುವ ರಂಗಕರ್ಮಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು.
undefined
1943ರಲ್ಲಿ ರಾಧಾರಮಣ ಚಿತ್ರದ ಕೇಶಿದೈತ್ಯನ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
undefined
ಅಯ್ಯರ್ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು 1954ರಲ್ಲಿ ಬಿಡುಗಡೆಯಾದ ಬೇಡರಕಣ್ಣಪ್ಪ ಚಿತ್ರದ ಕೈಲಾಸನ ಪಾತ್ರ
undefined
1955ರಲ್ಲಿ ತೆರೆಕಂಡ ಸೋದರಿ ಚಿತ್ರದಲ್ಲಿನ ಹಾಡುಗಳು ಮತ್ತು ಸಂಭಾಷಣೆ ಬರೆಯುವುದರೊಂದಿಗೆ ಚಲನಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡರು.
undefined
ಡಾ ರಾಜ್ ಕುಮಾರ್ , ನರಸಿಂಹರಾಜು , ಬಾಲಕೃಷ್ಣ ಅವರ ಜೊತೆಗೂಡಿ ಕಲಾವಿದರ ಸಂಘ ಸ್ಥಾಪಿಸಿ ಆ ಸಂಘದ ಗೆಳೆಯರೊಟ್ಟಿಗೆ ಸೇರಿ ರಣಧೀರ ಕಂಠೀರವ ಸಿನಿಮಾವನ್ನು ನಿರ್ಮಿಸಿ , ನಿರ್ದೇಶಿಸಿದರು.
undefined
1962 ರಲ್ಲಿ ಭೂದಾನ ಸಿನಿಮಾವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನ ಪಟ್ಟ ಅಲಂಕರಿಸಿದರು ಅಲ್ಲದೆ ಸರಿಸುಮಾರು 65 ಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಇವರದು.
undefined
ಅಯ್ಯರ್ ಅವರು ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ, ಸಂಸ್ಕೃತ ಭಾಷೆಯಲ್ಲೂ ಕಲಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
undefined
1954 ರಲ್ಲಿ ಇವರ ನಿರ್ದೇಶನದ ಬೇಡರ ಕಣ್ಣಪ್ಪ ನಾಟಕ ಸಾಕಷ್ಟು ಜನಮನ್ನಣೆ ಗಳಿಸಿತ್ತು.
undefined
ಇವರು ನಿರ್ದೇಶಿಸಿದ ಪ್ರಥಮ ಸಂಸ್ಕೃತ ಚಿತ್ರ "ಆದಿ ಶಂಕರಾಚಾರ್ಯ"ಭಾರತದ ಅತ್ಯುತ್ತಮ ಚಿತ್ರ ವಿಭಾಗದಲ್ಲಿ "ಸ್ವರ್ಣ ಕಮಲ "ಪ್ರಶಸ್ತಿ ಗಳಿಸಿರುವುದು ವಿಶೇಷ.
undefined
click me!