ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಅಮೂಲ್ಯ ಗೌಡ ಮತ್ತು ಪತಿ ಜಗದೀಶ್ ಆರ್‌ಸಿ ಶಿವರಾತ್ರಿ ಹಬ್ಬದ ಪ್ರಯುಕ್ತ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
26
'ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. ನಾವು ಶಿವರಾತ್ರಿಯ ಮಕ್ಕಳು' ಎಂದು ಅಮೂಲ್ಯ ಅವರ ಪತಿ ಜಗದೀಶ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
36
ಹಳದಿ ಮತ್ತು ರಾಮ್ ಗ್ರೀನ್ ಬಣ್ಣದ ರೇಶ್ಮೆ ಸೀರೆಯಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಶರ್ಟ್‌ನಲ್ಲಿ ಜಗದೀಶ್, ಮತ್ತು ನೇರಳೆ ಬಣ್ಣದ ಔಟ್‌ಫಿಟ್‌ನಲ್ಲಿ ಮಕ್ಕಳು ಮಿಂಚಿದ್ದಾರೆ.
46
ಶಿವರಾತ್ರಿ ಹಬ್ಬದ ದಿನವೂ ಫೋಟೋಶೂಟ್ ಮಾಡಿಸಿ ಶುಭ ಕೋರುವ ಕಾಲ ಬಂತಾ? ಯಾಕೆ ಇಷ್ಟೋಂದು ಆಡಂಭರ ಅಂತ ನೆಟ್ಟಿಗರು ಕಾಲೆಳೆಯಲು ಶುರು ಮಾಡಿದ್ದಾರೆ.
56
ರಾಜಕೀಯ ಕ್ಷೇತ್ರದಲ್ಲಿ ಆಕ್ಟಿವ್ ಆಗಿರುವ ಜಗದೀಶ್ ಆರ್‌ಸಿ ಪ್ರತಿಯೊಂದು ಹಬ್ಬಕ್ಕೂ ಜನರಿಗೆ ವಿಶ್ ಮಾಡುತ್ತಾರೆ. ನಟಿ ಅಮೂಲ್ಯಗಿಂತ ಜನರೊಟ್ಟಿಗೆ ಹೆಚ್ಚಿಗೆ ಸಂಪರ್ಕದಲ್ಲಿದ್ದಾರೆ.
66
ಮದುವೆ ಆದ ನಂತರ ಸಿನಿಮಾ ಪ್ರಾಜೆಕ್ಟ್ ಒಪ್ಪಿಕೊಳ್ಳದ ನಟಿ ಅಮೂಲ್ಯ ಫ್ಯಾಮಿಲಿ ಕಡೆ ಹೆಚ್ಚಿಗೆ ಗಮನ ಕೊಡುತ್ತಿದ್ದರು. ಮಕ್ಕಳಾದ ಮೇಲೆ ಸಿನಿಮಾದಿಂದ ಸಂಪೂರ್ಣ ದೂರ ಉಳಿದುಬಿಟ್ಟಿದ್ದಾರೆ.