ದಿವ್ಯಾ ಉರುಡುಗ - ಅರವಿಂದ್ ಪ್ರೀತಿಗೆ 4 ವರ್ಷ; ಇದುರೆವಗೂ ಯಾರೂ ನೋಡಿರದ ಫೋಟೋಗಳು ಲೀಕ್

Published : Feb 27, 2025, 09:00 AM ISTUpdated : Feb 27, 2025, 09:18 AM IST

ಇಬ್ಬರೂ ಪ್ರೀತಿಯಲ್ಲಿ ಬಿದ್ದು ನಾಲ್ಕು ವರ್ಷ ಕಳೆದಿದೆ. ಇದುವರೆಗೂ ಯಾರೂ ನೋಡಿರದ ಫೋಟೋಗಳನ್ನು ಅಪ್ಲೋಡ್ ಮಾಡಿದ ದಿವ್ಯಾ.... 

PREV
18
ದಿವ್ಯಾ ಉರುಡುಗ - ಅರವಿಂದ್ ಪ್ರೀತಿಗೆ 4 ವರ್ಷ; ಇದುರೆವಗೂ ಯಾರೂ ನೋಡಿರದ ಫೋಟೋಗಳು ಲೀಕ್

ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿ ಬೈಕ್ ರೇಸರ್ ಅರವಿಂದ್ ಕೆಪಿ ಮತ್ತು ಕಿರುತೆರೆ ನಟಿ ದಿವ್ಯಾ ಉರುಡುಗ ಪ್ರೀತಿಯಲ್ಲಿ ಬಿದ್ದು ನಾಲ್ಕು ವರ್ಷಗಳನ್ನು ಪೂರೈಸಿದ್ದಾರೆ.

28

ಇಷ್ಟು ದಿನ ಪ್ರೀತಿಯನ್ನು ಸೈಲೆಂಟ್ ಆಗಿಟ್ಟಿದ್ದ ಈ ಜೋಡಿ ಈಗ ರಿವೀಲ್ ಮಾಡಿದ್ದಾರೆ. ಇದುವರೆಗೂ ಯಾರೂ ನೋಡಿರದ ಫೋಟೋಗಳನ್ನು ದಿವ್ಯಾ ಅಪ್ಲೋಡ್ ಮಾಡಿದ್ದಾರೆ.

38

'ನೀ ಯಾರು ನನಗೆ? ಉಡುಗೊರೆಯೊ? ಉತ್ಸವವೋ? ಮುಗಿಯದ ಆಸೆಯೋ? ಅದೃಷ್ಟವೋ?
ಉತ್ತರ ಬೇಕಾಗಿದೆ ಜನಗಳಿಗೆ ವರವಾಗಿ ಸ್ವೀಕರಿಸಿದೆ ಮನಸೊಳಗೆ' ಎಂದು ದಿವ್ಯಾ ಉರುಡುಗ ಬರೆದುಕೊಂಡಿದ್ದಾರೆ.

48

'ನಾಲ್ಕು ಕ್ರೇಜಿ ವರ್ಷಗಳು ಕಳೆದಿದೆ. ನಿಮ್ಮನ್ನು ನನ್ನ ಜೀವನದಲ್ಲಿ ಪಡೆದಿರುವುದಕ್ಕೆ ಪುಣ್ಯ ಮಾಡಿದ್ದೀನಿ ಕೆಪಿ ಸರ್' ಎಂದು ದಿವ್ಯಾ ಹೇಳಿದ್ದಾರೆ. 

58

ಬಿಗ್ ಬಾಸ್ ಸೀಸನ್ 9ರಲ್ಲಿ ಇಬ್ಬರ ಪರಿಚಯವಾಗಿದ್ದು. ಅಲ್ಲಿಂದ ಹುಟ್ಟಿಕೊಂಡ ಸ್ನೇಹ ಪ್ರೀತಿಗೆ ತಿರುಗಿತ್ತು. ಇವರಿಬ್ಬರ ಬಗ್ಗೆ ಜಗತ್ತೆ ಮಾತನಾಡುತ್ತಿದ್ದರು ಸುಮ್ಮನಿದ್ದರು. ಆದರೆ ಈಗ ರಿವೀಲ್ ಮಾಡಿದ್ದಾರೆ.

68

2024ರಲ್ಲಿ ಅರ್ಧಂಬರ್ಧ ಲವ್ ಸ್ಟೋರಿ ಸಿನಿಮಾದಲ್ಲಿ ಅರವಿಂದ್ ಮತ್ತು ದಿವ್ಯಾ ಜೋಡಿಯಾಗಿ ಅಭಿನಯಿಸಿದ್ದರು. ಇವರಿಬ್ಬರ ರಿಯಲ್ ಲವ್ ಸ್ಟೋರಿ ಸಣ್ಣ ಪುಟ್ಟ ಗ್ಲಿಮ್ಸ್‌ ಇಲ್ಲಿ ತೋರಿಸಲಾಗಿದೆ ಎನ್ನಲಾಗಿದೆ.  

78

ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾತನಾಡಿದಾಗ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಸ್ನೇಹದ ಬಗ್ಗೆ ಮಚ್ಚುಗೆ ವ್ಯಕ್ತ ಪಡಿಸಿದ್ದರು. 

88

ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಮದುವೆ ಯಾವಾಗ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಈ ವರ್ಷವೇ ಮದುವೆ ಅಂತೆ. 

Read more Photos on
click me!

Recommended Stories