ನದಿ ತೀರದಲ್ಲಿ ಮೈಮರೆತ ನೆನಪಿರಲಿ ಪ್ರೇಮ್‌ ಮಗಳು: ಯಾವ ನ್ಯಾಷ್‌ನಲ್ ಕ್ರಶ್‌ಗೂ ಕಮ್ಮಿ ಇಲ್ಲ ಎಂದ ಫ್ಯಾನ್ಸ್‌!

Published : Feb 25, 2024, 03:35 PM IST

ಟಗರು ಪಲ್ಯ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ಪ್ರೇಮ್‌, ಸದ್ಯ ಪ್ರವಾಸದ ಮೋಜಿನಲ್ಲಿದ್ದು, ಇದೀಗ ಪ್ರಕೃತಿ ಮಡಿಲಲ್ಲಿ ಕಾಣಿಸಿಕೊಂಡಿರುವ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

PREV
17
ನದಿ ತೀರದಲ್ಲಿ ಮೈಮರೆತ ನೆನಪಿರಲಿ ಪ್ರೇಮ್‌ ಮಗಳು: ಯಾವ ನ್ಯಾಷ್‌ನಲ್ ಕ್ರಶ್‌ಗೂ ಕಮ್ಮಿ ಇಲ್ಲ ಎಂದ ಫ್ಯಾನ್ಸ್‌!

ಟಗರು ಪಲ್ಯ. ಡಾಲಿ ಧನಂಜಯ್‌ ನಿರ್ಮಾಣ ಮಾಡಿದ್ದ ಸಿನಿಮಾ. ನಾಗಭೂಷಣ್‌ ನಾಯಕನಾಗಿ ನಟಿಸಿದರೆ, ಅಮೃತಾ ಪ್ರೇಮ್‌ ನಾಯಕಿಯಾಗಿದ್ದರು. ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾಗೆ ಟಗರು ಪಲ್ಯ ಮೊದಲ ಸಿನಿಮಾ. ಚೊಚ್ಚಲ ಸಿನಿಮಾ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದಾರೆ. 

27

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಾಗಿರುವ ಅಮೃತಾ, ಆಗೊಂದು ಈಗೊಂದು ಫೋಟೋಗಳನ್ನೂ ಶೇರ್‌ ಮಾಡುತ್ತಿರುತ್ತಾರೆ. ಇದೀಗ ಕಾಡ ದಾರಿಯಲ್ಲಿ ಏನೋ ಹುಡುಕ ಹೊರಟಿದ್ದಾರೆ. ನದಿಯ ನೀರಲ್ಲಿ ನಿಂತು ಫೋಟೋಕ್ಕೆ ಪೋಸ್‌ ನೀಡಿದ್ದಾರೆ. ಆನೆಗಳನ್ನೂ ಕಣ್ತುಂಬಿಕೊಂಡಿದ್ದಾರೆ. 

37

ನಟಿಯ ಈ ಫೋಟೋಗಳಿಗೆ ನೆಟ್ಟಿಗ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾರ್ಟ್‌ ಎಮೋಜಿ ಹಾಕಿ ಚೆಂದ ಎಂದು ಕಾಂಪ್ಲಿಮೆಂಟ್‌ ಕೊಡುತ್ತಿದ್ದಾರೆ. ಅಂದಹಾಗೆ, ಟಗರು ಪಲ್ಯ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿದ್ದ ಈ ಚೆಲುವೆ, ಸದ್ಯ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ? ಈ ಪ್ರಶ್ನೆಗೆ ಅಮೃತಾ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

47

ಅಮೃತಾ ಪ್ರೇಮ್ ಇತ್ತೀಚಿಗೆ ತಮ್ಮ ಜನ್ಮ ದಿನವನ್ನ ಕೂಡ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅಪ್ಪ ನೆನಪಿರಲಿ ಪ್ರೇಮ್ ತಮ್ಮ ಮಗಳ ಜನ್ಮ ದಿನವನ್ನ ವಿಶೇಷವಾಗಿಯೇ ಸೆಲೆಬ್ರೇಟ್ ಮಾಡಿದ್ದರು. ಮಗಳಿಗೆ ಸರ್ಪ್ರೈಸ್ ಕೂಡ ಕೊಟ್ಟಿದ್ದರು.

57

ಅಮತಾ ಪ್ರೇಮ್ ತಮ್ಮ ಮೊದಲ ಚಿತ್ರದ ಬಳಿಕ ಯಾವ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲ ಇದೆ. ಈ ಕುತೂಹಲದ ಬೆನ್ನಲ್ಲಿಯೇ ಅಮೃತಾ ಪ್ರೇಮ್ ತಮ್ಮ ಹೊಸ ರೀತಿಯ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಳ್ಳುತ್ತಿದ್ದಾರೆ.

67

ಇತ್ತೀಚೆಗೆ ಅಮೃತಾ ಪ್ರೇಮ್‌ ಇದೀಗ ಕ್ಯಾನ್ಸರ್‌ ರೋಗಿಗಳಿಗಾಗಿ ಒಂದೊಳ್ಳೆ ಕೆಲಸ ಮಾಡಿದ್ದರು. ಒಮ್ಮೆಯೂ ಕತ್ತರಿಸದ ತಮ್ಮ ತಲೆಗೂದಲನ್ನು ಅಮೃತಾ ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿ ಗಮನ ಸೆಳೆದಿದ್ದರು.

77

ಅಮೃತಾ ಪ್ರೇಮ್​ ಇನ್​​ಸ್ಟಾದಲ್ಲಿ ಬರೀ 112 ಪೋಸ್ಟ್​ ಮಾತ್ರ ಹಂಚಿಕೊಂಡಿದ್ದಾರೆ. ಆದರೆ ನಟಿಯ ಸೌಂದರ್ಯ ಮನಸೋತು 111 ಸಾವಿರಕ್ಕೂ ಅಧಿಕ ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ. 

Read more Photos on
click me!

Recommended Stories