ಹಸಿರು ಸೀರೆ ಮಲ್ಲಿಗೆ ಮುಡಿದ Megha Shetty: ದಸರಾ ಗೊಂಬೆ ನಿನ್ನನು ನೋಡಲು ನಮ್ಮೂರಿಂದ ಬಂದೆ ಅನ್ನೋದಾ!

First Published Oct 26, 2023, 2:00 AM IST

ನವರಾತ್ರಿ ಹಬ್ಬವನ್ನು ಎಲ್ಲ ಕಡೆಗಳಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಟಿ ಮೇಘಾ ಶೆಟ್ಟಿ ಮನೆಯಲ್ಲಿ ಕೂಡಾ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಟ್ರೆಡಿಷನಲ್​ ಲುಕ್​ನಲ್ಲಿ ಮಿಂಚಿದ್ದಾರೆ. 

ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಫೇಮಸ್ ಆಗಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯ ಟ್ರೆಡಿಷನಲ್ ಫೋಟೋಗಳು ವೈರಲ್​ ಆಗಿದೆ.

ಮೇಘಾ ಶೆಟ್ಟಿ ದಸರಾ ಹಬ್ಬವನ್ನು ಸಡಗರದಿಂದ ಆಚರಿಸಿದ್ದು, ವಿಜಯದಶಮಿ ದಿನ ನಾಡಿನ ಜನತೆಗೆ ನಟಿ ಮೇಘಾ ಶೆಟ್ಟಿ ದಸರಾ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಾಮ ಗ್ರೀನ್​ ಹಾಗೂ ಗ್ರೀನ್ ಬಾರ್ಡರ್​ ಸೀರೆಯುಟ್ಟ ಮೇಘಾ ಶೆಟ್ಟಿ ಮಲ್ಲಿಗೆ ಹೂವನ್ನು ಮುಡಿದಿದ್ದಾರೆ. ಜೊತೆಗೆ ಹಣೆಗೆ ಕುಂಕುಮ ಇಟ್ಟುಕೊಂಡು ಮನೆಯ ಬಾಗಿಲಿನಲ್ಲಿ ನಿಂತು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. 

ಮೇಘಾ ಶೆಟ್ಟಿ ಅವರ ಫೋಟೋಗಳನ್ನು ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸೂಪರ್, ನೈಸ್, ದಸರಾ ಗೊಂಬೆ ನಿನ್ನನು ನೋಡಲು ನಮ್ಮೂರಿಂದ ಬಂದೆ ಕಣೆ ಎಂದು ಕಾಮೆಂಟ್ ಹಾಕಿದ್ದಾರೆ. ಸದ್ಯ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. 

ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ನಟಿ ಮೇಘಾ ಶೆಟ್ಟಿ ಬ್ಯುಸಿ ಇದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಸಖತ್​ ಆ್ಯಕ್ಟಿವ್​ ಆಗಿದ್ದಾರೆ.

ಮೇಘಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ನೆಟ್ಟಿಗರು ಕೂಡ ಅವುಗಳನ್ನು ಮೆಚ್ಚಿ ಕಾಮೆಂಟ್ ಹಾಕ್ತಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೇಘಾ, ಗಣೇಶ್ ಜೊತೆಗಿನ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಧಾರಾವಾಹಿ ಯಶಸ್ವಿಯಾದ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ.

click me!