ರೇಷ್ಮೆ ಸೀರೆ ಧರಿಸಿ ಕಣ್ಮನ ಸೆಳೆದ Megha Shetty: ಎಲ್ಲಿದೆ ನಿಮ್ಮನೆ, ಕೊಲ್ಲಬೇಡಿ ಸುಮ್ಮನೆ ಅನ್ನೋದಾ ಫ್ಯಾನ್ಸ್‌!

Published : Oct 24, 2023, 03:00 AM IST

ಜೊತೆ ಜೊತೆಯಲ್ಲಿ ಧಾರಾವಾಹಿಯ ಮೂಲಕ ಹಿರಿತೆರೆಗೆ ಕಾಲಿಟ್ಟ ಮೇಘಾ ಶೆಟ್ಟಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ರೇಷ್ಮೆ ಸೀರೆಯುಟ್ಟ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

PREV
16
ರೇಷ್ಮೆ ಸೀರೆ ಧರಿಸಿ ಕಣ್ಮನ ಸೆಳೆದ Megha Shetty: ಎಲ್ಲಿದೆ ನಿಮ್ಮನೆ, ಕೊಲ್ಲಬೇಡಿ ಸುಮ್ಮನೆ ಅನ್ನೋದಾ ಫ್ಯಾನ್ಸ್‌!

‘ಜೊತೆ ಜೊತೆಯಲಿ’ ನಟಿ ಮೇಘಾ ಶೆಟ್ಟಿ ಅವರು ಸದಾ ಒಂದಲ್ಲಾ ಒಂದು ಹೊಸ ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮೋಡಿ ಮಾಡುತ್ತಲೇ ಇರುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ರೇಷ್ಮೆ ಸೀರೆಯುಟ್ಟು ಮಸ್ತ್ ಆಗಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ. 

26

ಸಿಲ್ಕ್ ಸೀರೆಯನ್ನ ಡಿಫರೆಂಟ್ ಆಗಿ ಉಟ್ಟು ನಟಿ ಫೋಟೋಶೂಟ್ ಮಾಡಿಸಿದ್ದಾರೆ. ಮೇಘಾ ಲುಕ್ ನೋಡಿ, ನವರಾತ್ರಿಯ ನವತಾರೆಯು ಕೂಡ ನಿನ್ನ ನೋಡಿ ನಾಚುವುದು, ಎಲ್ಲಿದೆ ನಿಮ್ಮನೆ, ಕೊಲ್ಲಬೇಡಿ ಸುಮ್ಮನೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಸೀರೆಯಲ್ಲೂ ಟ್ರೆಂಡಿ ಆಗಿ ಕಾಣಿಸಿಕೊಂಡಿದ್ದಾರೆ. 

36

ಮೇಘಾ ಶೆಟ್ಟಿ ಸೀರೆಯುಟ್ಟು ಸಖತ್ತಾಗಿ ಮಿಂಚಿದ್ದು, ನವರಾತ್ರಿಯ 8ನೇ ದಿನ ಎಂದು ಟೈಟಲ್ ನೀಡಿ ರೇಷ್ಮೇ ಸೀರೆಯುಟ್ಟ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಫಿದಾ ಆಗಿದ್ದಾರೆ.

46

ಜೊತೆ ಜೊತೆಯಲಿ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಧಾರಾವಾಹಿ ಯಶಸ್ವಿಯಾದ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ.

56

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೇಘಾ, ಗಣೇಶ್ ಜೊತೆಗಿನ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ.

66

ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಚಿತ್ರಕ್ಕೆ ಮೇಘಾ ಹೀರೋಯಿನ್ ಆಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಧನ್ವೀರ್ ಗೌಡ ಜೊತೆಗಿನ ‘ಕೈವ’ ಚಿತ್ರ, ಆಪರೇಷನ್ ಲಂಡನ್ ಕೆಫೆ ಸಿನಿಮಾಗಳು ರಿಲೀಸ್‌ಗೆ ರೆಡಿಯಿದೆ.

Read more Photos on
click me!

Recommended Stories