ದರ್ಶನ್ ಜೊತೆ ಪ್ರೀತೀನಾ ಹೆಂಗಪ್ಪ ತಡ್ಕೊಳ್ಳೋದು ಅಂತಾ ಭರ್ಜರಿಯಾಗಿ ಸ್ಟೆಪ್ ಹಾಕಿದ್ದ ಮಾಲಿವುಡ್‌ನ ಪ್ರಖ್ಯಾತ ನಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಕುರಿತಾದ ಸುದ್ದಿಯನ್ನು ನಟಿ ತಮ್ಮ ಇನ್ಸ್‌ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯತಮನನ್ನು ತಬ್ಬಿಕೊಂಡು ಆತ ಹಾಕಿರುವ ಉಂಗುರವನ್ನು ಫೋಕಸ್ ಮಾಡಿ ತೆಗೆದಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾಋಏ.
ಹೌದು ನಟ ದರ್ಶನ್ ಅವರ ಬೃಂದಾವನ ಚಿತ್ರ ನೋಡಿದವರಿಗೆ ಈಕೆಯ ನೆನಪಿರುತ್ತದೆ. ಕನ್ನಡದಲ್ಲಿಯೂ ನಟಿಸಿದ್ದ ಹಿರಿಯ ನಟಿ ರಾಧಾ ಅವರ ಹಿರಿಯ ಪುತ್ರಿ ಕಾರ್ತಿಕಾ ನಾಯರ್ ಅವರಿಗೆ ಕಂಕಣಭಾಗ್ಯ ಒಲಿದುಬಂದಿದೆ.
ಬೃಂದಾವನ ಚಿತ್ರದಲ್ಲಿ ಮಿಲನಾ ನಾಗರಾಜ್ ಅವರೊಂದಿಗೆ ಇವರು ಕೂಡ ನಟಿಸಿದ್ದರು. ಕನ್ನಡಕ್ಕೂ ಮುನ್ನ ಮಲಯಾಳಂ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಕಾರ್ತಿಕಾ ನಾಯರ್ ನಟಿಸಿದ್ದ ಕೋ ಸಾಕಷ್ಟು ಹೆಸರು ಮಾಡಿತ್ತು. ಅದಾದ ಬಳಿಕ ಕನ್ನಡದಲ್ಲಿಯೂ ಈಕೆ ನಟಿಸಿದ್ದರು.
ಈಗ ಚಿತ್ರರಂಗದಿಂದ ಹೆಚ್ಚೂಕಡಿಮೆ ದೂರವಾಗಿರುವ ಅವರು ತಮ್ಮದೇ ಸ್ವಂತ ಹೋಟೆಲ್ ಉದ್ಯಮದಲ್ಲಿ ಬ್ಯೂಸಿಯಾಗಿದ್ದಾರೆ. ಅದರ ಚಿತ್ರಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಈಗ ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ನಿಶ್ಚಿತಾರ್ಥವನ್ನು ಅವರು ಖಚಿತಪಡಿಸಿದ್ದು, ಮದುವೆಯ ದಿನಾಂಕ ಶೀಘ್ರದಲ್ಲಿಯೇ ಪ್ರಕಟವಾಗಲಿದೆ. 31 ವರ್ಷದ ಕಾರ್ತಿಕಾ ನಾಯರ್‌ಗೆ ತುಳಸಿ ನಾಯರ್ ಹೆಸರಿಯ ಸಹೋದರಿಯೂ ಇದ್ದಾರೆ.
ಕಾರ್ತಿಕಾ ನಾಯರ್ ಪತಿಯ ವಿವರವನ್ನು ಎಲ್ಲಿಯೂ ಬಹಿರಂಗ ಮಾಡಿಲ್ಲ. ಅದಲ್ಲದೆ, ತಮ್ಮ ನಿಶ್ಚಿತಾರ್ಥದ ಬಗ್ಗೆ ಫೋಟೋ ಹಂಚಿಕೊಂಡಿದ್ದು ಬಿಟ್ಟರೆ ಅಧಿಕೃತವಾಗಿ ಬರೆದುಕೊಂಡಿಲ್ಲ.
ಅವರ ಅಭಿಮಾನಿಗಳು ಕಾರ್ತಿಕಾ ನಾಯರ್ ಅವರು ಮದುವೆಯಾಗಲಿರುವ ವರ ಯಾರು ಎನ್ನುವ ಕುತೂಹಲದಲ್ಲಿದ್ದಾರೆ. ಇದರ ನಡುವೆ ಸ್ವತಃ ಕಾರ್ತಿಕಾ ನಾಯರ್ ಅವರೇ ಮುಂದಿನ ದಿನಗಳಲ್ಲಿ ಇದನ್ನು ಅಧಿಕೃತವಾಗಿ ತಿಳಿಸುವ ಸಾಧ್ಯತೆ ಇದೆ.
ಮುಂಬೈನ ಪೋದಾರ್ ಇಂಟರ್‌ನ್ಯಾಷನ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿರುವ ಕಾರ್ತಿಕಾ ನಾಯರ್, ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಸಂಸ್ಥೆಯಿಂದ ಬ್ಯುಸಿನೆಸ್ ವಿಭಾಗದ ಪದವಿ ಪಡೆದಿದ್ದಾರೆ.
ಕಾರ್ತಿಕಾ ನಾಯರ್ ಅವರ ತಾಯಿ ರಾಧಾ 1980 ರ ದಶಕದಲ್ಲಿ ತಮಿಳು ಚಿತ್ರರಂಗದ ಟಾಪ್ ನಾಯಕಿ. ರಜನಿ, ಕಮಲ್, ವಿಜಯಕಾಂತ್, ಸತ್ಯರಾಜ್, ಪ್ರಭು ಆ ಕಾಲದ ಎಲ್ಲ ಹೀರೋಗಳಿಗೂ ಜೋಡಿಯಾಗಿ ನಟಿಸಿದ್ದರು.
ಕಾರ್ತಿಕಾ ಸಹೋದರಿ ತುಳಸಿ ನಾಯರ್ ಕೂಡ ನಾಯಕಿಯಾಗಿ ನಟಿಸಿದ್ದಾರೆ. ತುಳಸಿ ಮಣಿರತ್ನಂ ಅವರ ಕಡಲ್ ಮೂಲಕ ಪಾದಾರ್ಪಣೆ ಮಾಡಿದರು ಮತ್ತು ನಂತರ ಜೀವಾ ಎದುರು ತಮಿಳು ಚಿತ್ರ ಯಾನ್‌ನಲ್ಲಿ ನಟಿಸಿದ್ದರು.
2015ರಲ್ಲಿಯೇ ಸಿನಿಮಾ ರಂಗಕ್ಕೆ ವಿದಾಯ ಹೇಳಿದ್ದ ಕಾರ್ತಿಕಾ ನಾಯರ್ ಕೊನೆಯ ಬಾರಿಗೆ 2017ರಲ್ಲಿ ಟಿವಿ ಸೀರಿಯಲ್ ಆರಂಭ್‌ದಲ್ಲಿ ನಟಿಸಿದ್ದರು.
2013ರಲ್ಲಿ ಬಿಡುಗಡೆಯಾಗಿದ್ದ ಬೃಂದಾವನ ಚಿತ್ರದಲ್ಲಿ ಕಾರ್ತಿಕಾ ನಾಯರ್, ಭೂಮಿ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಪಾತ್ರಕ್ಕೆ ಅವರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.