ಪುನೀತ್ ರಾಜ್‌ಕುಮಾರ್ ನಟನೆಯ ಈ 9 ಸಿನಿಮಾ ನೋಡಲೇ ಬೇಕು; ಮಿಸ್ ಮಾಡ್ಬೇಡಿ ಆಯ್ತಾ?

Published : Jan 20, 2025, 04:17 PM IST

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಪ್ರತಿಯೊಂದು ಸಿನಿಮಾ ಸೂಪರ್ ಹಿಟ್. ಅದರಲ್ಲೂ ಈ 9 ಸಿನಿಮಾಗಳು ಯಾವ ಜನರೇಷನ್‌ ಮಕ್ಕಳು ನೋಡಿದರೂ ಇಷ್ಟ ಪಡುತ್ತಾರೆ. 

PREV
19
ಪುನೀತ್ ರಾಜ್‌ಕುಮಾರ್ ನಟನೆಯ ಈ 9 ಸಿನಿಮಾ ನೋಡಲೇ ಬೇಕು; ಮಿಸ್ ಮಾಡ್ಬೇಡಿ ಆಯ್ತಾ?
ಅಪ್ಪು

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮೊದಲ ಸಿನಿಮಾನೇ ಅಪ್ಪು. 2002ರಲ್ಲಿ ರಿಲೀಸ್ ಆದ ಸಿನಿಮಾ ಇದಾಗಿದ್ದು ಜನರ ಮೆಚ್ಚುಗೆ ಗಿಟ್ಟಿಸಿಕೊಂಡರು. ಕಾಲೇಜ್‌ ಯುವಕ-ಯುವತಿಯರು ಪ್ರೀತಿಯಲ್ಲಿ ಬಿದ್ದಾಗ ಹೇಗೆ ಫ್ಯಾಮಿಲಿಯನ್ನು ಎದುರಿಸುತ್ತಾರೆ, ಸವಾಲುಗಳನ್ನು ಸ್ವೀಕರಿಸುತ್ತಾರೆ ಅನ್ನೋದು ಕಥೆ.

29
ಅಭಿ

ಪುನೀತ್ ರಾಜ್‌ಕುಮಾರ್ ಮತ್ತು ರಮ್ಯಾ ಜೋಡಿಯಾಗಿ ಅಭಿನಯಿಸಿರುವ ಸಿನಿಮಾ ಅಭಿ. 2003ರಲ್ಲಿ ರಿಲೀಸ್‌ ಆ ಚಿತ್ರ ಇದಾಗಿದ್ದು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ಇದು ಕೂಡ ಪಕ್ಕಾ ಲವ್ ಸ್ಟೋರಿ.

39
ಅರಸು

2007ಲ್ಲಿ ತೆರೆ ಕಂಡ ಅರಸು ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ರನ್ನು ಡಿಫರೆಂಟ್ ಶೇಡ್‌ನಲ್ಲಿ ನೋಡಬಹುದು. ಆರಂಭದಲ್ಲಿ ಸಿರಿವಂತ ವ್ಯಕ್ತಿಯಾಗಿದ್ದು ಮಿಡಲ್ ಕ್ಲಾಸ್ ಜೀವನ ಕೂಡ ತೋರಿಸಿದ್ದಾರೆ. ಅಪ್ಪು ಜೊತೆ ರಮ್ಯಾ ಮತ್ತು ಮೀರಾ ಜಾಸ್ಮಿನ್ ನಟಿಸಿದ್ದಾರೆ. 

49
ಮಿಲನಾ

2007ರಲ್ಲಿ ರಿಲೀಸ್ ಆದ ಸಿನಿಮಾ ಇದಾಗಿದ್ದು ಪಾರ್ವತಿ ಮೆನನ್ ಜೋಡಿಯಾಗಿ ನಟಿಸಿದ್ದಾರೆ. ಸಿನಿಮಾ ಆರಂಭದಲ್ಲಿ ಡಿವೋರ್ಸ್ ಪಡೆದ ಜೋಡಿ ಕೊನೆಯಲ್ಲಿ ಒಂದಾಗುವ ಕಥೆ ಸೂಪರ್. ಚಿತ್ರದ ಹಾಡುಗಳು ಈಗಲೂ ಸೂಪರ್ ಹಿಟ್. ಪೂಜಾ ಗಾಂಧಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

59
ಪರಮಾತ್ಮ

2011ರಲ್ಲಿ ರಿಲೀಸ್ ಆದ ಸಿನಿಮಾ ಇದಾಗಿದ್ದು ಪುನೀತ್ ಇಷ್ಟು ವರ್ಷ ಮಾಡಿಕೊಂಡು ಬಂದ ಚಿತ್ರಕ್ಕಿಂತ ವಿಭಿನ್ನ ಚಿತ್ರವಿದು. ದೀಪಾ ಸನ್ನಿಧಿ ಮತ್ತು ಐಂದ್ರಿತಾ ರೈ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಬಿಗ್ ಹೈಲೈಟ್.

69
ಜಾಕಿ

2010ರಲ್ಲಿ ರಿಲೀಸ್ ಆದ ಜಾಕಿ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಮಾಸ್‌ ಸೈಡ್‌ ಕೊಂಚ ನೋಡಬಹುದು. ಭಾವನಾ ಮೆನನ್ ಜೋಡಿಯಾಗಿ ಅಭಿನಯಿಸಿದ್ದು 7 ಕೋಟಿ ಬಜೆಟ್‌ ಎನ್ನಲಾಗಿದೆ.

79
ಹುಡುಗರು

2011ರಲ್ಲಿ ಅಪ್ಪು ಮತ್ತೊಂದು ಸೂಪರ್ ಹಿಟ್ ಸಿನಿಮಾ ನೀಡಿದ್ದರು ಅದುವೇ ಹುಡುಗರು. ಶ್ರೀನಗರ ಕಿಟ್ಟಿ ಮತ್ತು ಲೂಸ್ ಮಾದಾ ಯೋಗಿ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಪಂಡಿತ್ ನಾಯಕಿಯಾಗಿ ಮಿಂಚಿದ್ದಾರೆ. 

89
ಪೃಥ್ವಿ

ಮತ್ತೊಮ್ಮೆ ಪಾರ್ವತಿ ಜೊತೆ ಅಪ್ಪು ನಟಿಸಿದ್ದು ಪೃಥ್ವಿ ಸಿನಿಮಾದಲ್ಲಿ. IAS ಆಫೀಸರ್ ಪಾತ್ರದಲ್ಲಿ ಅಪ್ಪು ಕಾಣಿಸಿಕೊಂಡಿದ್ದರು. ಜನ ಸಾಮಾನ್ಯರು ಈ ಸಿನಿಮಾ ನೋಡಿ IAS ಆಗಬೇಕು ಎಂದು ಕನಸು ಕಂಡಿದ್ದಾರೆ.

99
ರಾಜಕುಮಾರ

2017ರಲ್ಲಿ ರಿಲೀಸ್ ಆದ ರಾಜಕುಮಾರ ಸಿನಿಮಾ ಈಗಲೂ ಜನರ ಮನಸ್ಸಿನಲ್ಲಿ ಇದೆ.ಅಪ್ಪು ಹಾಡು ಎಂದ ತಕ್ಷಣ ಎಲ್ಲರೂ ನೀನೇ ರಾಜಕುಮಾರ ಹಾಡು ಹಾಡುತ್ತಾರೆ. ಫ್ಯಾಮಿಲಿ ಪ್ರಾಮುಖ್ಯತೆ ಹಿರಿಯರಿಗೆ ಗೌರವಿಸುವ ರೀತಿ ಪ್ರತಿಯೊಂದನ್ನು ಈ ಚಿತ್ರದಿಂದ ಕಲಿಯಬೇಕು.

Read more Photos on
click me!

Recommended Stories