ಜನಪ್ರಿಯ ನಟ Daali Dhananjay ಪತ್ನಿ ಧನ್ಯತಾ ತಮ್ಮ ಅಮ್ಮ ಹಾಗೂ ಅಕ್ಕನ ಫ್ಯಾಮಿಲಿ ಜೊತೆ ದೂರದ ಮಾರೀಶಿಯಸ್ ಗೆ ಟ್ರಾವೆಲ್ ಮಾಡಿದ್ದು, ಸುಂದರವಾದ ಫೋಟೊಗಳನ್ನು ಹಂಚಿಕೊಂಡಿದ್ದು, ಫೋಟೊಗಳಲ್ಲಿ ಧನ್ಯತಾ ಹೊಟ್ಟೆ ನೋಡಿ, ಕಂಗ್ರಾಜುಲೇಶನ್ ಹೇಳುತ್ತಿದ್ದಾರೆ ಅಭಿಮಾನಿಗಳು.
ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆಯಾಗಿ ಒಂದು ವರುಷಗಳು ಆಗುತ್ತಾ ಬಂದಿದೆ. ಈ ಜೋಡಿ ಸಾಕಷ್ಟು ಕಡೆ ಟ್ರಾವೆಲ್ ಮಾಡಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಧನಂಜಯ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ಧನ್ಯತಾ ತಮ್ಮ ಫ್ಯಾಮಿಲಿ ಜೊತೆ ಟ್ರಾವೆಲ್ ಮಾಡಿ ಬಂದಿದ್ದಾರೆ.
27
ಧನ್ಯತಾ ಗೌರಕ್ಲರ್
ಮೂಲತಃ ವೈದ್ಯೆಯಾಗಿರುವ ಡಾಲಿ ಪತ್ನಿ ಧನ್ಯತಾ, ಟ್ರಾವೆಲ್ ಪ್ರಿಯೆ ಕೂಡ ಹೌದು, ಇದೀಗ ತಮ್ಮ ತಾಯಿ, ಅಕ್ಕ, ಅಕ್ಕನ ಗಂಡ ಹಾಗೂ ಮಗನ ಜೊತೆ ಮಾರೀಶಿಯಸ್ ಗೆ ಟ್ರಾವೆಲ್ ಮಾಡಿದ್ದು, Mauritius diaries ಎಂದು ಕ್ಯಾಪ್ಶನ್ ಕೊಟ್ಟು ಸುಂದರವಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ.
37
ಸುಂದರ ತಾಣಗಳಿಗೆ ಪ್ರವಾಸ
ಧನ್ಯತಾ ತಮ್ಮ ಫ್ಯಾಮಿಲಿ ಜೊತೆ ಮಾರೀಶಿಯಸ್ ನ ಸುಂದರವಾದ ತಾಣಗಳು, ಪ್ರಕೃತಿ, ಜೂಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಸುಂದರವಾದ ವಿಡಿಯೋ ಹಾಗೂ ಫೋಟೊಗಳನ್ನು ತಮ್ಮ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅಭಿಮಾನಿಗಳು ಬೇರೇನನ್ನೋ ಪತ್ತೆ ಹಚ್ಚಿದ್ದಾರೆ.
ಧನ್ಯತಾ ಹಂಚಿಕೊಂಡಿರುವ ಫೋಟೊಗಳಲ್ಲಿ ಪುಟ್ಟದಾದ ಬೇಬಿ ಬಂಪ್ ಕಾಣಿಸಿಕೊಂಡಿದೆ. ಹಾಗಾಗಿ ಅಭಿಮಾನಿಗಳು ಅದನ್ನು ನೋಟೀಸ್ ಮಾಡಿ, ಧನ್ಯತಾ ಗರ್ಭಿಣಿ ಎಂದು ಹೇಳುತ್ತಿದ್ದಾರೆ. ಕೆಲವರು ಕಂಗ್ರಾಟ್ಸ್ ಎಂದು ಹೇಳಿದರೆ, ಮತ್ತೆ ಕೆಲವರು ಗುಡ್ ನ್ಯೂಸ್ ಎಂದು ಹೇಳುತ್ತಿದ್ದಾರೆ.
57
ಮದುವೆಯಾಗಿ ವರ್ಷ ಕಳೆಯೋದ್ರೊಳಗೆ ಗುಡ್ ನ್ಯೂಸ್
ಕನ್ನಡದ ಸ್ಟಾರ್ ನಟ ಧನಂಜಯ್ ಹಾಗೂ ವೈದ್ಯೆ, ಗೈನಕಾಲಜಿಸ್ಟ್ ಆಗಿರುವ ಡಾ. ಧನ್ಯತಾ ವಿವಾಹವು ಕಳೆದ ವರ್ಷ ಫೆಬ್ರುವರಿ 16 ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಲಕ್ಷಾಂತರ ಜನರು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೀಗ ಮದುವೆಯಾಗಿ ವರ್ಷ ಕಳೆಯೋದ್ರೊಳಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
67
ಅಧಿಕೃತ ಮಾಹಿತಿ ಇಲ್ಲ
ಧನ್ಯತಾ ಗರ್ಭಿಣಿಯಾಗಿರುವ ಬಗ್ಗೆ ಇಲ್ಲಿವರೆಗೆ, ಡಾಲಿ ಧನಂಜಯ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹಾಗಾಗಿ ಈ ಸುದ್ದಿ ನಿಜವೇ ಎಂದು ಹೇಳುವಂತಿಲ್ಲ. ಆದರೆ ಫೋಟೊ ನೋಡಿ ಅಭಿಮಾನಿಗಳು ಮಾತ್ರ ಸಖತ್ ಖುಷಿಯಾಗಿದ್ದಾರೆ. ನಮಗೆ ಮುದ್ದಾದ ಹೆಣ್ಣು ಡಾಲಿ ಬೇಕು ಅಂತನೂ ಬೇಡಿಕೆ ಇಟ್ಟಿದ್ದಾರೆ ಜನ.
77
ಧನಂಜಯ್ ಸಿನಿಮಾಗಳಲ್ಲಿ ಬ್ಯುಸಿ
ಸಿನಿಮಾ ವಿಚಾರಕ್ಕೆ ಬಂದರೆ ಧನಂಜಯ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರಕಾಂಡ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಹಲಗಲಿ, 666 ಆಪರೇಷನ್ ಡ್ರೀಮ್ ಥಿಯೇಟರ್, ಜಿಂಗೋ ಸಿನಿಮಾಗಳು ಸಹ ಒಂದರ ಹಿಂದೆ ಒಂದರಂತೆ ನಡೆಯುತ್ತಿದೆ. ಯಾವಾಗ ಯಾವ ಸಿನಿಮಾ ರಿಲೀಸ್ ಆಗಲಿದೆ ಅನ್ನೋದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.