'ಪ್ರೇಮದ ಊರಲಿ' ಈಗ ಸಿನಿಮಾ ಸೂಪರ್ ಹಿಟ್ ಆಗಿದ್ದು, 100 ಕೋಟಿ ಕ್ಲಬ್ ಸೇಋಇದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಆ ಒಬ್ಬ ವ್ಯಕ್ತಿಗೆ ಈ ಸಿನಿಮಾ ಸಖತ್ ಸಕ್ಸಸ್ ಆಗಿ ಇತಿಹಾಸ ಸೃಷ್ಟಿಸುತ್ತೆ ಅಂತ ಗೊತ್ತಿತ್ತಂತೆ! ಯಾರು ಅದು? ಅವರಿಗೆ ಸಿಕ್ತ್ ಸೆನ್ಸ್ ಆಗಿತ್ತಾ? ಆ ಶಾಕಿಂಗ್ ಮಾಹಿತಿ ಇಲ್ಲಿದೆ ನೋಡಿ!
ಪ್ರೇಮದ ಊರಲಿ ಸಿನಿಮಾ ಸೂಪರ್ ಹಿಟ್ ಆಗುತ್ತೆ ಅಂತ ಆ ಒಬ್ಬ ವ್ಯಕ್ತಿಗೆ ಪಕ್ಕಾ ಗೊತ್ತಿತ್ತಂತೆ. ಹಾಗಿದ್ರೆ, ಆ ವ್ಯಕ್ತಿ ಯಾರು? ಅವರಿಗೆ ಸಿಕ್ತ್ ಸೆನ್ಸ್ ಆಗಿತ್ತಾ? ಅಥವಾ, ಬೇರೆ ಯಾವುದೋ ರೀತಿಯಲ್ಲಿ ಅವರಿಗೆ ಈ ವಿಷಯ ಬಿಡುಗಡೆಗೂ ಮೊದಲೇ ಗೊತ್ತಾಯ್ತಾ? ಉತ್ತರಕ್ಕೆ ಈ ಸ್ಟೋರಿ ನೋಡಿ..
27
ಬಿಡುಗಡೆಗೂ ಮೊದಲೇ ಗೊತ್ತಿತ್ತು! ಅವರಿಗೆ ಗೊತ್ತಾದಂತೆ ‘ಪ್ರೇಮದ ಊರಲಿ’ ಸೃಷ್ಟಿಸಿತು ಇತಿಹಾಸ!
ಕನ್ನಡದ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದು, 100 ಕೋಟಿ ರೂ. ಕಲೆಕ್ಷನ್ ದಾಟಿ ಮುನ್ನುಗ್ಗುತ್ತಿದೆ. ಆದರೆ, ಇಂದು ಸಂಭ್ರಮದಲ್ಲಿರುವ ಈ ಚಿತ್ರತಂಡಕ್ಕೆ ಬಿಡುಗಡೆಗೂ ಮುನ್ನ ದೊಡ್ಡ ಆಘಾತ ಎದುರಾಗಿತ್ತು. ನಿರೀಕ್ಷಿಸಿದಷ್ಟು ಚಿತ್ರಮಂದಿರಗಳು ಮತ್ತು ಶೋಗಳು ಸಿಗದೆ ಇಡೀ ತಂಡ ನಿರಾಸೆಗೊಂಡಿತ್ತು. ಆ ಸಂದರ್ಭದಲ್ಲಿ ನಿರ್ದೇಶಕ ಮನೋಜ್ ಕುಮಾರ್ ನಿರ್ಮಾಪಕರಿಗೆ ಹೇಳಿದ ಒಂದೇ ಮಾತು ತಂಡದಲ್ಲಿ ಹೊಸ ಭರವಸೆ ಮೂಡಿಸಿತ್ತು. ಅದೇ ವಿಶ್ವಾಸ ಮುಂದೆ ಸಿನಿಮಾದ ಯಶಸ್ಸಿಗೆ ದೊಡ್ಡ ತಿರುವು ನೀಡಿತು.
37
ನಿರ್ದೇಶಕ ಮನೋಜ್ ಕುಮಾರ್ ಹೇಳಿದ ಮಾತೇನು?
ಏಷ್ಯಾನೆಟ್ ಸುವರ್ಣನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ ನಿರ್ದೇಶಕ ಮನೋಜ್ ಕುಮಾರ್, ಸಿನಿಮಾ ಬಿಡುಗಡೆಯ ಮುನ್ನ ಎದುರಾದ ಸವಾಲುಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಕಥೆ, ನಿರ್ಮಾಣ, ಕ್ಯಾಮೆರಾ ಕೆಲಸ ಮತ್ತು ಹಾಡುಗಳ ಬಗ್ಗೆ ತಂಡಕ್ಕೆ ಅಪಾರ ವಿಶ್ವಾಸವಿತ್ತು. ಹೀಗಾಗಿ ಹೆಚ್ಚು ಚಿತ್ರಮಂದಿರಗಳು ಹಾಗೂ ಶೋಗಳು ಸಿಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಬಿಡುಗಡೆಗೆ ನಾಲ್ಕೈದು ದಿನಗಳಿರುವಾಗಲೇ ಶೋಗಳ ಸಂಖ್ಯೆ ಕಡಿಮೆಯಾಗತೊಡಗಿತ್ತು. ಬಿಡುಗಡೆಯ ಹಿಂದಿನ ದಿನ ಪರಿಸ್ಥಿತಿ ಕಂಡು ತಂಡಕ್ಕೆ ಆಘಾತವಾಗಿತ್ತು.
ಆಗ ನಿರ್ಮಾಪಕರ ಜೊತೆ ತುರ್ತು ಮಾತುಕತೆ ನಡೆಸಿದ ಮನೋಜ್ ಕುಮಾರ್, “ನಮಗೆ ಎಷ್ಟು ಶೋ, ಎಷ್ಟು ಚಿತ್ರಮಂದಿರ ಸಿಕ್ಕಿವೆಯೋ ಅಷ್ಟೇ ಸಾಕು. ಜನರು ಸಿನಿಮಾ ನೋಡಲಿ, ಇಷ್ಟಪಟ್ಟರೆ ಅವರೇ ಬಾಯಿಂದ ಬಾಯಿಗೆ ಪ್ರಚಾರ ಮಾಡುತ್ತಾರೆ. ಮುಂದೇನಾಗುತ್ತದೆಯೋ ಎದುರಿಸೋಣ” ಎಂಬ ವಿಶ್ವಾಸದ ಮಾತುಗಳನ್ನಾಡಿದ್ದರು. ಈ ಮಾತು ನಿರ್ಮಾಪಕರಲ್ಲಿ ಧೈರ್ಯ ತುಂಬಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
57
ರಂಗಾಯಣ ರಘು ಹೊರತುಪಡಿಸಿ ಎಲ್ಲರೂ ಹೊಸಬರು!
‘ಪ್ರೇಮದ ಊರಲಿ’ ಚಿತ್ರದ ನಾಯಕ, ನಾಯಕಿ, ತಂತ್ರಜ್ಞರು ಸೇರಿದಂತೆ ಬಹುತೇಕ ಕಲಾವಿದರು ಹೊಸಬರು. ಹಿರಿಯ ನಟ ರಂಗಾಯಣ ರಘು ಅವರನ್ನು ಹೊರತುಪಡಿಸಿದರೆ ತಂಡದಲ್ಲಿ ಅನುಭವಿಗಳ ಸಂಖ್ಯೆ ಕಡಿಮೆ ಇತ್ತು. ನಿರ್ದೇಶಕ ಮನೋಜ್ ಕುಮಾರ್ ಅವರಿಗೂ ಇದು ಎರಡನೇ ಸಿನಿಮಾ. ಆದರೂ ಚಿತ್ರದ ಗುಣಮಟ್ಟದ ಬಗ್ಗೆ ತಂಡಕ್ಕೆ ಅಪಾರ ನಂಬಿಕೆಯಿತ್ತು.
67
ಚಿತ್ರದ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ‘ಪ್ರೇಮದ ಊರಲಿ’ ಹಾಡಿನ ರೀಲ್ಸ್ 1.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದರೆ, ‘ಏರುಪೇರು’ ಸೇರಿದಂತೆ ಮೂರು ಹಾಡುಗಳು ಜನಪ್ರಿಯವಾಗಿದ್ದವು.
77
ಪ್ರೇಕ್ಷಕರ ಪ್ರೀತಿಯೇ ದೊಡ್ಡ ಗೆಲುವು!
ಕಡಿಮೆ ಶೋಗಳಿಂದ ಆರಂಭವಾದ ಸಿನಿಮಾ ಪಯಣ ಪ್ರೇಕ್ಷಕರ ಬೆಂಬಲದಿಂದ ಯಶಸ್ಸಿನ ಹಾದಿ ಹಿಡಿದಿದೆ. ಜನರು ಚಿತ್ರವನ್ನು ಮೆಚ್ಚಿ ಬೆಂಬಲಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮನೋಜ್ ಕುಮಾರ್, ಈ ಪ್ರೀತಿಯನ್ನು ಹೇಗೆ ಸಂಭ್ರಮಿಸಬೇಕು ಎಂಬುದೇ ತಿಳಿಯುತ್ತಿಲ್ಲ ಎಂದಿದ್ದಾರೆ. ಆರಂಭದ ನಿರಾಸೆಯನ್ನು ಮೆಟ್ಟಿ ನಿಂತ ‘ಪ್ರೇಮದ ಊರಲಿ’ ತಂಡದ ಕಥೆ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.