ಕೊನೆಗೂ ರಿವೀಲ್ ಆಯ್ತು 'ಲ್ಯಾಂಡ್‌ಲಾರ್ಡ್‌' ಸಿನಿಮಾದಲ್ಲಿ ದುನಿಯಾ ವಿಜಯ್‌ ಪಾತ್ರ!

Published : Jan 22, 2025, 11:17 AM IST

ನೆಲಮಂಗಲದ ಬರದಿಬೆಟ್ಟದ ತಪ್ಪಲಲ್ಲಿ ‘ಲ್ಯಾಂಡ್‌ ಲಾರ್ಡ್‌’ ಸಿನಿಮಾಗಾಗಿ ಹಳ್ಳಿ ಸೆಟ್‌ ಹಾಕಿ ಶೂಟಿಂಗ್‌ ಮಾಡಲಾಗುತ್ತಿದೆ. ಈ ಸೆಟ್‌ನಲ್ಲೇ ದುನಿಯಾ ವಿಜಯ್‌ ಬರ್ತ್‌ ಡೇ ಆಚರಣೆ ನಡೆಯಿತು.

PREV
17
ಕೊನೆಗೂ ರಿವೀಲ್ ಆಯ್ತು 'ಲ್ಯಾಂಡ್‌ಲಾರ್ಡ್‌' ಸಿನಿಮಾದಲ್ಲಿ ದುನಿಯಾ ವಿಜಯ್‌ ಪಾತ್ರ!

‘ನಾವೆಲ್ಲ ಚಿಕ್ಕೋರಿದ್ದಾಗ ಸ್ವಲ್ಪ ದುರಹಂಕಾರ ತೋರಿಸಿದ್ರೆ ನೀನೇನು ದೊಡ್ಡ ಲ್ಯಾಂಡ್‌ ಲಾರ್ಡಾ ಅನ್ನೋ ಮಾತನ್ನ ಹೇಳೋರು. ಆ ನುಡಿಗಟ್ಟನ್ನೇ ನಮ್ಮ ಈ ದೇಸಿಕಥೆಗೆ ಶೀರ್ಷಿಕೆಯಾಗಿ ಇಟ್ಟಿದ್ದೇವೆ. ಬಡಜನರ ಪ್ರತಿನಿಧಿಯಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ದುನಿಯಾ ವಿಜಯ್‌ ಹೇಳಿದ್ದಾರೆ.

27

ನೆಲಮಂಗಲದ ಬರದಿಬೆಟ್ಟದ ತಪ್ಪಲಲ್ಲಿ ‘ಲ್ಯಾಂಡ್‌ ಲಾರ್ಡ್‌’ ಸಿನಿಮಾಗಾಗಿ ಹಳ್ಳಿ ಸೆಟ್‌ ಹಾಕಿ ಶೂಟಿಂಗ್‌ ಮಾಡಲಾಗುತ್ತಿದೆ. ಈ ಸೆಟ್‌ನಲ್ಲೇ ದುನಿಯಾ ವಿಜಯ್‌ ಬರ್ತ್‌ ಡೇ ಆಚರಣೆ ನಡೆಯಿತು.

37

ಈ ವೇಳೆ ವಿಜಯ್‌, ‘ಬರ್ತ್‌ ಡೇ ದಿನವೂ ಶೂಟಿಂಗ್‌ ಮಾಡಿದ್ದಕ್ಕೆ ಖುಷಿ ಆಯ್ತು. ಮುಂದಿನ ವರ್ಷ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸುತ್ತೇನೆ. ಈ ಸಿನಿಮಾದಲ್ಲಿ ನಾನು 51 ವರ್ಷದ ಹಳ್ಳಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ಮಗಳು ರಿತನ್ಯಾ ಸಿನಿಮಾದಲ್ಲೂ ಮಗಳ ಪಾತ್ರ ಮಾಡುತ್ತಿದ್ದಾಳೆ’ ಎಂದರು.
 

47

ನಿರ್ದೇಶಕ ಜಡೇಶ್‌ ಹಂಪಿ, ಇದು ಕೋಲಾರದ ಕಥೆ. ಕೂಲಿಗಾಗಿ ಕಾಸು ಎಂಬ ವಿಚಾರ ಸಿನಿಮಾದಲ್ಲಿ ಪ್ರಮುಖವಾಗಿ ಬರುತ್ತದೆ. ಈ ಸಿನಿಮಾ ನಾಯಕನ ಹೆಸರು ರಾಚಯ್ಯ. 

57

1980ರ ಕಾಲಘಟ್ಟದಲ್ಲಿ ನಡೆಯುವ‌ ಕಥೆ ಎಂದರು. ನಿರ್ಮಾಪಕರಾದ ಸೂರಜ್‌ ಗೌಡ, ಸತ್ಯಪ್ರಕಾಶ್‌, ರಿತನ್ಯಾ ವಿಜಯ್‌ ಇದ್ದರು. ಸಿನಿಮಾ ನಾಯಕಿ ರಚಿತಾರಾಮ್‌ ಗೈರು ಹಾಜರಾಗಿದ್ದರು.

67

ಮಧ್ಯವಯಸ್ಸಿನ ಹೆಣ್ಮಗಳಾಗಿ ರಚಿತಾ ರಾಮ್‌: ಈ ಸಿನಿಮಾದಲ್ಲಿ ದುನಿಯಾ ವಿಜಯ್‌ ವಯಸ್ಸು 51 ವರ್ಷ. ಅವರ ಪತ್ನಿ ಪಾತ್ರಧಾರಿ ರಚಿತಾ ರಾಮ್‌ ಅವರದ್ದೂ ಮಧ್ಯ ವಯಸ್ಸಿನ ಪ್ರೌಢ ಮಹಿಳೆಯ ಪಾತ್ರ. 

77

ಆರಂಭದಿಂದ ಕೊನೆಯವರೆಗೂ ತಾನು ಹಾಗೂ ರಚಿತಾ ರಾಮ್‌ ಇದೇ ವಯಸ್ಸಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ದುನಿಯಾ ವಿಜಯ್‌ ಹೇಳಿದ್ದಾರೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories