ನಂಗೆ ಲವ್‌ ಮಾಡೋಕೆ ತುಂಬಾ ಇಷ್ಟ, ಆದರೆ ಯಾರೂ ಅವಕಾಶ ಕೊಡ್ತಿಲ್ಲ: ದರ್ಶನ್

Published : Apr 11, 2025, 12:09 PM ISTUpdated : Apr 11, 2025, 12:11 PM IST

ಸಿನಿಮಾದಲ್ಲಿ ಮಾಸ್‌ ಅಂಶಗಳ ಜೊತೆಗೆ ತಾಯಿ ಸೆಂಟಿಮೆಂಟ್‌ ಇದೆ. ಫೈಟ್‌ ಮತ್ತು ಮುದ್ದು ರಾಕ್ಷಸಿ ಹಾಡು ನಂಗೆ ಭಾಳ ಇಷ್ಟ ಆಯ್ತು. ಮೊದಲ ಸಿನಿಮಾದಿಂದ ನಾಲ್ಕನೇ ಸಿನಿಮಾಕ್ಕೆ ಧನ್ವೀರ್‌ ನಟನೆಯಲ್ಲಿ ಪಳಗಿದ್ದಾರೆ. 

PREV
15
ನಂಗೆ ಲವ್‌ ಮಾಡೋಕೆ ತುಂಬಾ ಇಷ್ಟ, ಆದರೆ ಯಾರೂ ಅವಕಾಶ ಕೊಡ್ತಿಲ್ಲ: ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ನಂತರ ಇದೇ ಮೊದಲ ಬಾರಿ ನಟ ದರ್ಶನ್‌ ಥೇಟರಿಗೆ ಬಂದು ಸಿನಿಮಾ ವೀಕ್ಷಿಸಿದ್ದಾರೆ. ತನ್ನ ಸ್ನೇಹಿತ ಧನ್ವೀರ್‌ ನಟನೆಯ ‘ವಾಮನ’ ಸಿನಿಮಾವನ್ನು ಅಭಿಮಾನಿಗಳೊಂದಿಗೆ ವೀಕ್ಷಿಸಿದ ದರ್ಶನ್‌ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.

25

ಜೊತೆಗೆ ಮೊದಲ ಬಾರಿಗೆ ಮಾಧ್ಯಮದ ಮುಂದೆ ಮಾತನಾಡಿ, ‘ಧನ್ವೀರ್‌ ಸ್ಕ್ರೀನ್‌ ಮೇಲೆ ಲವ್‌ ಮಾಡಿದ ರೀತಿ ನನಗೆ ಭಾಳ ಇಷ್ಟ ಆಯ್ತು. ನಂಗೂ ಅದೇ ಥರ ಲವ್‌ ಮಾಡೋಕೆ ಇಷ್ಟ. ಆದರೆ ಯಾರೂ ಅವಕಾಶ ಕೊಡ್ತಿಲ್ಲ’ ಎಂದು ಹೇಳಿದರು. ದರ್ಶನ್‌ ಹೀಗೆ ಹೇಳಿದ್ದು ಸೋಷಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿದೆ.

35

ದರ್ಶನ್‌, ಸಿನಿಮಾದಲ್ಲಿ ಮಾಸ್‌ ಅಂಶಗಳ ಜೊತೆಗೆ ತಾಯಿ ಸೆಂಟಿಮೆಂಟ್‌ ಇದೆ. ಫೈಟ್‌ ಮತ್ತು ಮುದ್ದು ರಾಕ್ಷಸಿ ಹಾಡು ನಂಗೆ ಭಾಳ ಇಷ್ಟ ಆಯ್ತು. ಮೊದಲ ಸಿನಿಮಾದಿಂದ ನಾಲ್ಕನೇ ಸಿನಿಮಾಕ್ಕೆ ಧನ್ವೀರ್‌ ನಟನೆಯಲ್ಲಿ ಪಳಗಿದ್ದಾರೆ. 

45

ಅವರು ಪುರಾಣದಲ್ಲಿ ಬರುವ ವಾಮನನ ಹಾಗೆ ಮೂರು ಹೆಜ್ಜೆ ಜಾಗ ಏನು ಕೇಳಲ್ಲ. ಒಂದು ಹೆಜ್ಜೆಯನ್ನು ಗಟ್ಟಿಯಾಗಿ ಊರಲು ಅವಕಾಶ ಕೊಡಿ ಅಂತಷ್ಟೇ ಕೇಳ್ತಾರೆ, ಅವಕಾಶ ಕೊಟ್ಟರೆ ಬಲು ಎತ್ತರಕ್ಕೆ ಬೆಳೆಯುತ್ತಾರೆ ಎಂದರು.

55

‘ಒಂದೊಳ್ಳೆ ಕಥೆ, ಅದನ್ನ ಸೊಗಸಾಗಿ ತೆರೆ ಮೇಲೆ ತರಬಲ್ಲ ಒಬ್ಬ ಒಳ್ಳೆಯ ಡೈರೆಕ್ಟರ್‌ ಸಿಕ್ಕರೆ ಧನ್ವೀರ್‌ ಅಥವಾ ಚಿಕ್ಕಣ್ಣ ಜೊತೆಗೆ ನಾನು ಸಿನಿಮಾ ಮಾಡ್ತೀನಿ. ಆದರೆ ನಾವ್ಯಾರೂ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಲ್ಲ. ನಮ್ಮ ಕನ್ನಡಿಗರಿಗೆ ಕನ್ನಡದ ಸಿನಿಮಾವನ್ನೇ ಮಾಡ್ತೀವಿ’ ಎಂದೂ ದರ್ಶನ್‌ ಈ ವೇಳೆ ಹೇಳಿದರು.

Read more Photos on
click me!

Recommended Stories