ಬೇರೆ ಭಾಷೆ ಕಲಿಯೋದು ಕಷ್ಟ, ಫ್ಯಾನ್ಸ್‌ ಅರ್ಥ ಮಾಡಿಕೊಳ್ಳಬೇಕು; ರಶ್ಮಿಕಾ ಮಂದಣ್ಣ ಪರ ನಿಂತ ಆಶಿಕಾ

Published : Dec 27, 2022, 03:55 PM ISTUpdated : Dec 27, 2022, 04:19 PM IST

ತೆಲುಗು ತಮಿಳು ಸಿನಿಮಾಗಳಲ್ಲಿ ಮಿಂಚುತ್ತಿರುವ ಕನ್ನಡ ನಟಿ ಆಶಿಕಾ ರಂಗನಾಥ್. ಭಾಷೆ ಕಲಿಯುವುದು ದೊಡ್ಡ ಕೆಲಸ ಆನಂತರ ಕನೆಕ್ಟ್‌ ಆಗುವುದು ಇನ್ನೂ ಕಷ್ಟ...

PREV
18
ಬೇರೆ ಭಾಷೆ ಕಲಿಯೋದು ಕಷ್ಟ, ಫ್ಯಾನ್ಸ್‌ ಅರ್ಥ ಮಾಡಿಕೊಳ್ಳಬೇಕು; ರಶ್ಮಿಕಾ ಮಂದಣ್ಣ ಪರ ನಿಂತ ಆಶಿಕಾ

ಕನ್ನಡ ಚಿತ್ರರಂಗದ ಕ್ಯೂಟ್ ನಟಿ ಆಶಿಕಾ ರಂಗನಾಥ್‌ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡುತ್ತಿದ್ದಾರೆ.  ಅಥರ್ವಾ ಸಿನಿಮಾ ನಂತರ ನಂದಮುರಿ ಜೊತೆ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ.

28

ಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿರುವ ಆಶಿಕಾ ಹೇಗೆ ಪರಭಾಷೆಯಿಂದ ಆಫರ್‌ಗಳು ಬಂತು? ತಮ್ಮ ವೃತ್ತಿ ಜೀವನಕ್ಕೆ ಕನ್ನಡ ಚಿತ್ರರಂಗ ಹೇಗೆ ಸಾಥ್ ಕೊಟ್ಟಿದೆ ಎಂದು ಹೇಳಿದ್ದಾರೆ. 

38

'ನಾನು ಒಳ್ಳೆ ಕಲಾವಿದೆ ಎಂದು ಸಾಬೀತು ಮಾಡಲು ಕನ್ನಡ ಚಿತ್ರರಂಗ ಒಳ್ಳೆಯ ವೇದಿಕೆ ಕಲ್ಪಿಸಿದೆ. ಖುಷಿ ವಿಚಾರ ಏನೆಂದರೆ ನನ್ನ ಕೆಲಸವನ್ನು ಅಕ್ಕ ಪಕ್ಕದ ಚಿತ್ರರಂಗವೂ ಗುರುತಿಸುತ್ತಿದೆ,' ಎಂದು ಮಾತನಾಡಿದ್ದಾರೆ ಚುಟು ಚುಟು ಬೆಡಗಿ.

48

 'ಕಳೆದ ಒಂದು ವರ್ಷದಿಂದ ತೆಲುಗು ಚಿತ್ರರಂಗದಿಂದ ನನಗೆ ಆಫರ್‌ ಹರಿದು ಬರುತ್ತಿದೆ. ಒಂದು ತೆಲುಗು ಚಿತ್ರಕ್ಕೆ ಆಡಿಶನ್ ಕೊಟ್ಟ ಆದರೆ ಅವಕಾಶ ಮತ್ತೊಬ್ಬರ ಕೈ ಸೇರಿತ್ತು' ಹೇಳಿದ್ದಾರೆ.

58

'ನಂದಮುರಿ ಕಲ್ಯಾಣ ರಾಮ್ ಚಿತ್ರಕ್ಕೆ ಅಭಿನಯಿಸುತ್ತಿರುವೆ. ಭಾಷೆಯಿಂದ ಸಾಲುಗಳನ್ನು ಹೇಳಲು ಕಷ್ಟ ಆಗಬಹುದು ಆದರೆ ನನಗೆ ವಾಯ್ಸ್‌ ನೋಟ್‌ ಕಳುಹಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ' ಎಂದಿದ್ದಾರೆ.

68

'ಅಭಿಮಾನಿಗಳು ತುಂಬಾನೇ possessive, ಅವರು ನನಗೆ ಕೊಟ್ಟಿರುವ ಪ್ರೀತಿ ನಾನು ಆಭಾರಿ.ಬೇರೆ ರಾಜ್ಯಗಳಲ್ಲಿ ಸಂದರ್ಶನ ನೀಡುತ್ತಿರುವೆ, ಅಲ್ಲಿನ ಭಾಷೆ ಕಲಿತು ಮಾತನಾಡುವುದು ಎಷ್ಟು ಕಷ್ಟ ಎಂದು ಗೊತ್ತಾಗಿದೆ' ಎಂದು ಹೇಳಿದ್ದಾರೆ.

78

 'ಹೇಗೆ ಬೇರೆ ಭಾಷೆಗಳಲ್ಲಿ ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಗುರುತಿಸಿಕೊಳ್ಳುತ್ತಿದ್ದಾರೆ ಅದು ನನಗೆ ಇಷ್ಟವಾಗುತ್ತಿದೆ. ಇದರ ಹಿಂದೆ ಶ್ರಮವಿದೆ, ಅಭಿಮಾನಿಗಳು ಅರ್ಥ ಮಾಡಿಕೊಳ್ಳುತ್ತಾರೆ ಅಂದುಕೊಂಡಿದರುವೆ' ಎಂದು ಅಶಿಕಾ ಮಾತನಾಡಿದ್ದಾರೆ.

88

'ಪ್ಯಾನ್‌ ಇಂಡಿಯಾ ನಾಯಕಿಯಾಗಿ ಗುರುತಿಸಿಕೊಳ್ಳಲು ಇಷ್ಟ ಪಡುವೆ, ಕಾಂತಾರ ಸಿನಿಮಾ ನೋಡಿ. ನ್ಯಾಷನಲ್‌ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡ ಸಿನಿಮಾವಿದು' ಎಂದು ಕಾಂತಾರ ಬಗ್ಗೆ ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories