16 ಜನ ಹುಡುಗಿಯರ ಜೊತೆ ಡ್ಯಾನ್ಸ್‌ ಮಾಡುವಾಗ ನರ್ವಸ್‌ ಆಯ್ತು: ನಟ ಮಿಲಿಂದ್‌ ಗೌತಮ್‌

First Published | Jan 10, 2025, 5:25 PM IST

ಡ್ಯಾನ್ಸ್‌ ಮಾಡಿ ಅಂತ ಮುರಳಿ ಮಾಸ್ಟರ್‌ ಹೇಳಿದಾಗ ನರ್ವಸ್‌, ಖುಷಿ ಎರಡೂ ಆಯ್ತು. ಹೈಟ್‌ ಹೆಚ್ಚಿರುವ ಕಾರಣ ಮಂಡಿಯಲ್ಲಿ ಕುಣಿದಿದ್ದು ಚಾಲೆಂಜಿಂಗ್‌ ಆಗಿತ್ತು’ ಎಂದು ‘ಅನ್‌ಲಾಕ್‌ ರಾಘವ’ ಸಿನಿಮಾದ ನಾಯಕ ಮಿಲಿಂದ್‌ ಗೌತಮ್‌ ಹೇಳಿದ್ದಾರೆ.

‘ನಾನೊಬ್ಬ ಹುಡುಗ, 16 ಜನ ಹುಡುಗೀರು. ಡ್ಯಾನ್ಸ್‌ ಮಾಡಿ ಅಂತ ಮುರಳಿ ಮಾಸ್ಟರ್‌ ಹೇಳಿದಾಗ ನರ್ವಸ್‌, ಖುಷಿ ಎರಡೂ ಆಯ್ತು. ಹೈಟ್‌ ಹೆಚ್ಚಿರುವ ಕಾರಣ ಮಂಡಿಯಲ್ಲಿ ಕುಣಿದಿದ್ದು ಚಾಲೆಂಜಿಂಗ್‌ ಆಗಿತ್ತು’ ಎಂದು ‘ಅನ್‌ಲಾಕ್‌ ರಾಘವ’ ಸಿನಿಮಾದ ನಾಯಕ ಮಿಲಿಂದ್‌ ಗೌತಮ್‌ ಹೇಳಿದ್ದಾರೆ.

‘ಅನ್‌ಲಾಕ್‌ ರಾಘವ’ ಸಿನಿಮಾದ ‘ಲಾಕ್’ ಸಾಂಗ್‌ ಏ2 ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಲಿಂದ್‌, ‘ಈ ಹಾಡಿಗೆ ಡ್ಯಾನ್ಸ್‌ ಮಾಡಿದ್ದಕ್ಕಿಂತ ಹೆಚ್ಚಿನ ವೋವ್‌ ಫೀಲ್‌ ಹಾಡನ್ನು ಸ್ಕ್ರೀನ್‌ನಲ್ಲಿ ನೋಡಿದಾಗ ಸಿಕ್ಕಿತು. ನನ್ನ ಮೊದಲ ಸಿನಿಮಾದ ಈ ಬೀಟ್‌ ಸಾಂಗ್‌ ಯುವ ಜನರಿಗೆ ಇಷ್ಟವಾಗುವ ವಿಶ್ವಾಸವಿದೆ’ ಎಂದರು.

Tap to resize

ನಿರ್ದೇಶಕ ದೀಪಕ್‌ ಮಧುವನಹಳ್ಳಿ, ‘ಈ ಹಾಡಿನಷ್ಟೇ ಎನರ್ಜಿ ಸಿನಿಮಾದಲ್ಲಿದೆ. 2 ಸಮೋಸ ಮುಗಿಸೋದ್ರೊಳಗೆ ಗಾಯಕ ವಿಜಯ ಪ್ರಕಾಶ್‌ ಈ ಹಾಡಿನ ರೆಕಾರ್ಡಿಂಗ್‌ ಮುಗಿಸಿದ್ದರು’ ಎಂದರು.

ನಿರ್ಮಾಪಕ ಮಂಜುನಾಥ್‌, ‘ಪ್ರತೀ ಮನೆಯಲ್ಲೂ ಒಬ್ಬೊಬ್ಬ ಹೀರೋ ಹುಟ್ಟಿಕೊಂಡಿರುವಾಗ ಸಕ್ಸಸ್‌ ಸಿಗೋದು ಸುಲಭ ಅಲ್ಲ. ಫೆ.7ಕ್ಕೆ ನಮ್ಮ ಸಿನಿಮಾ ರಿಲೀಸ್‌ ಪ್ರಕಟಿಸಿದಾಗ ನಮ್ಮದೊಂದೇ ಸಿನಿಮಾ ಲಿಸ್ಟ್‌ನಲ್ಲಿತ್ತು. ಈಗ ಅನೇಕ ಸಿನಿಮಾಗಳು ಬಂದು ಸೇರಿಕೊಂಡಿವೆ. ನಮ್ಮ ಕಂಟೆಂಟ್‌ ಚೆನ್ನಾಗಿರುವ ಕಾರಣ ಜನ ಸಿನಿಮಾ ಗೆಲ್ಲಿಸುವ ವಿಶ್ವಾಸ ಇದೆ’ ಎಂದರು.

ಫೆ.7ಕ್ಕೆ ಅನ್‌ಲಾಕ್ ರಾಘವ ರಿಲೀಸ್‌: ದೀಪಕ್‌ ಮಧುವನಹಳ್ಳಿ ನಿರ್ದೇಶನದ ‘ಅನ್‌ಲಾಕ್‌ ರಾಘವ’ ಸಿನಿಮಾ ಫೆಬ್ರವರಿ 7ಕ್ಕೆ ಬಿಡುಗಡೆಯಾಗಲಿದೆ. ಮಿಲಿಂದ್‌ ಹಾಗೂ ‘ಲವ್‌ ಮಾಕ್‌ಟೇಲ್‌’ ಖ್ಯಾತಿಯ ರಾಚೆಲ್‌ ಡೇವಿಡ್‌ ಈ ಸಿನಿಮಾದ ನಾಯಕ, ನಾಯಕಿ. ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಾಪಕರು.

ಈ ಸಿನಿಮಾ ಕುರಿತು ನಿರ್ದೇಶಕ ದೀಪಕ್‌ ಮಧುವನಹಳ್ಳಿ, ‘ಎಲ್ಲಾ ರೀತಿಯ ಲಾಕ್‌ಗಳನ್ನು ಅನ್‌ಲಾಕ್‌ ಮಾಡುವ ಯುವಕನೊಬ್ಬ ಜೀವನದ ಲಾಕ್‌ ಅನ್ನು ತೆಗೆಯಲಾಗದೆ ಸಿಕ್ಕಿಬೀಳುವ ಕತೆಯನ್ನು ಹೊಂದಿರುವ ಸಿನಿಮಾ ಇದು. ಈ ಚಿತ್ರದ ನಾಯಕ ಮಿಲಿಂದ್ ಸ್ಫುರದ್ರೂಪಿ ಮಾತ್ರವಲ್ಲ, ಭರವಸೆಯ ನಟ’ ಎನ್ನುತ್ತಾರೆ.
 

Latest Videos

click me!