ಕನ್ನಡ ಚಿತ್ರರಂಗದ ಮುದ್ಧು ಮುಖದ ಚೆಲುವೆ ಅದಿತಿ ಪ್ರಭುದೇವ ಸೂಪರ್ ಹಿಟ್ ಕನ್ನಡ ಸಿನಿಮಾಗಳನ್ನು ನೀಡಿದ್ದಾರೆ. ಯೂಟ್ಯೂಬ್ ಚಾನೆಲ್ ಹೊಂದಿರುವ ನಟಿ ಮಗಳು ಹುಟ್ಟಿದ ಮೇಲೆ ರಿಯಾಲಿಟಿ ಶೋ ಜಡ್ಜ್ ಆಗಿ ಎಂಟ್ರಿ ಕೊಟ್ಟರು.
27
ಕಡಿಮೆ ಅವದಿ ರೆಸ್ಟ್ ತೆಗೆದುಕೊಂಡ ಅದಿತಿ ಬೇಗ ಕೆಲಸ ಶುರು ಮಾಡಿದ್ದರು. ಈ ಸಮಯದಲ್ಲಿ ಸಾಕಷ್ಟು ನೆಗೆಟಿವ್ ಕಾಮೆಂಟ್‌ಗಳು ಹರಿದು ಬಂತು. ಹೀಗಾಗಿ ಅದಿತಿ ಸ್ಪಷ್ಟನೆ ಕೊಟ್ಟಿದ್ದಾರೆ.
37
ನನ್ನ ಶೆಡ್ಯೂಲ್‌ಗೆ ತಕ್ಕಂತೆ ಕೆಲಸ ಮಾಡಿಕೊಳ್ಳುತ್ತೀನಿ. ಈಗ ನನ್ನ ಮಗಳಿಗೆ ಹಾಲು ಕುಡಿಸಿ ಮಲಗಿಸಿರುವೆ ಇನ್ನು ಒಂದು ಗಂಟೆಯಲ್ಲಿ ನಾನು ಹೊರಗಡೆ ಹೋಗಿ ಬರಬಹುದು ಅನ್ನೋ ಟೈಮ್ ಲೆಕ್ಕಾಚಾರ ಮಾಡಿ ನಾನು ದಿನ ಪ್ಲ್ಯಾನ್ ಮಾಡುತ್ತೀನಿ.
47
ನನ್ನ ಬ್ಯಾಗಿನಲ್ಲಿ ಒಂದು ಸಣ್ಣ ಬುಕ್ ಇದೆ ಅದರಲ್ಲಿ ನನ್ನ ದಿನ ಹೇಗೆ ಇರಬೇಕು ಎಂದು ಬರೆದುಕೊಳ್ಳುತ್ತೀನಿ, 90% ಟೈಂ ಫಾಲೋ ಮಾಡುತ್ತೀನಿ.
57
ರಾಜಾ ರಾಣಿ ರಿಯಾಲಿಟಿ ಶೋ ಜಡ್ಜ್ ಆಫರ್ ಬಂದಾಗ ನಾನು ಯೋಚನೆ ಮಾಡಲು ಶುರು ಮಾಡಿದೆ ಆದರೆ ಧೈರ್ಯ ಬರಲಿಲ್ಲ.ಮಗುವಿಗೆ ಫಾರ್ಮೂಲ ಹಾಲ ಅಭ್ಯಾಸ ಮಾಡಿಲ್ಲ ಅವಳ ಹಾರೈಕೆಗೆ ನಾನು ಅಡ್ಡ ಬರಲ್ಲ ಎಂದಿದ್ದಾರೆ ಅದಿತಿ.
67
ಮಗಳು ಹುಟ್ಟಿದ ನಾಲ್ಕು ತಿಂಗಳಿಗೆ ನನಗೆ ಆಫರ್ ಬಂತು. 4 ತಿಂಗಳು ಆಗುತ್ತಿದ್ದಂತೆ ನಾನು ಕೆಲಸ ಮಾಡಲು ಶುರು ಮಾಡಿದ್ದಕ್ಕೆ ಜನರು ನೆಗೆಟಿವ್ ಆಗಿ ಮಾತನಾಡಿದ್ದರು.
77
ನಮ್ಮ ಮನೆ ಕಟ್ಟುವಾಗ ಗಾರೆ ಕೆಲಸ ಮಾಡುತ್ತಿದ್ದ ಹೆಣ್ಣುಮಗಳು ತನ್ನ ಎರಡು ತಿಂಗಳ ಮಗುವನ್ನು ಮರಕ್ಕೆ ಜೋಳಿ ಮಾಡಿ ಕಟ್ಟಿ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಧೈರ್ಯ ಮತ್ತು ಗಟ್ಟಿನದ ಮುಂದೆ ನಾನು ಏನೂ ಇಲ್ಲ ಎಂದಿದ್ದಾರೆ ಅದಿತಿ.