ಮದುವೆ ಎಂದರೆ ವರ್ಕ್​ ಶಾಪ್, ಕೀಪ್ ಶಾಪಿಂಗ್ ವೈಫಿ: ವಿವಾಹ ವಾರ್ಷಿಕೋತ್ಸವಕ್ಕೆ ಗೋಲ್ಡನ್​ ಸ್ಟಾರ್ ಗಣೇಶ್‌ ಫನ್ನಿ ವಿಶ್!

First Published | Feb 12, 2024, 9:31 AM IST

ಸ್ಯಾಂಡಲ್​ವುಡ್‌ನ​ ಗೋಲ್ಡನ್​ ದಂಪತಿ ಗಣೇಶ್ ಹಾಗೂ ಶಿಲ್ಪಾ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಗಣೇಶ್‌ ಪತ್ನಿಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. 

ನಿನ್ನೆ (ಫೆ.11) ಗಣೇಶ್ ಹಾಗೂ ಶಿಲ್ಪಾ ಅವರ ವಿವಾಹ ವಾರ್ಷಿಕೋತ್ಸವ. ತಮ್ಮ ಮದುವೆ ದಿನದಂದು ಗೋಲ್ಡನ್ ಸ್ಟಾರ್ ಗಣೇಶ್ ಅವರು ಪತ್ನಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. 

ಮದುವೆ ಎಂದರೆ ವರ್ಕ್​ ಶಾಪ್. ಗಂಡ ವರ್ಕ್​ ಮಾಡುತ್ತಾನೆ. ವೈಫ್ ಶಾಪಿಂಗ್ ಮಾಡುತ್ತಾಳೆ. ಹ್ಯಾಪಿ ಆ್ಯನಿವರ್ಸರಿ ವೈಫಿ. ಕೀಪ್ ಶಾಪಿಂಗ್ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ತಿಳಿಸಿದ್ದಾರೆ.

Tap to resize

ಪತ್ನಿ ಶಿಲ್ಪಾ ಅವರ ಫೋಟೋವನ್ನು ಗಣೇಶ್ ಪೋಸ್ಟ್ ಮಾಡಿದ್ದಾರೆ. ಅವರ ಈ ಪೋಸ್ಟ್​ಗೆ ಕಮೆಂಟ್ ಮಾಡಿದ ಪ್ರಿಯಾಂಕಾ ಉಪೇಂದ್ರ ಅವರು ಕೂಡಾ ಸ್ಯಾಂಡಲ್​ವುಡ್ ಜೋಡಿಗೆ ವಿಶ್ ಮಾಡಿದ್ದಾರೆ.

ಶಿಲ್ಪಾ ಗಣೇಶ್ ಅವರು ಸ್ಯಾಂಡಲ್​ವುಡ್​ನಲ್ಲಿ ಪ್ರಮುಖ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಭಾರತೀಯ ಜನತಾ ಪಕ್ಷದ ಯುವ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಶಿಲ್ಪಾ ಗಣೇಶ್ ಮಳೆಯಲಿ ಜೊತೆಯಲಿ, ಕೂಲ್, ಮುಗುಳು ನಗೆ, ಗೀತಾ ಸಿನಿಮಾ ನಿರ್ಮಿಸಿದ್ದಾರೆ. ಅಂತೂ ಈ ಜೋಡಿ ನಿನ್ನೆಯಷ್ಟೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಸದ್ಯ ಗಣೇಶ್ ಹಾಗೂ ಶಿಲ್ಪಾ ಅವರು 2008ರಲ್ಲಿ ಫೆಬ್ರವರಿ 11ರಂದು ಮದುವೆಯಾದರು. ಇವರಿಗೆ ಚಾರಿತ್ರ್ಯ ಎಂಬ ಮಗಳು ಹಾಗೂ ವಿಹಾನ್ ಎಂಬ ಮಗನಿದ್ದಾನೆ. 

Latest Videos

click me!