ರುದ್ರ ಗರುಡ ಪುರಾಣ ಸಿನಿಮಾ ಗೆದ್ದಿದ್ದು ತುಂಬಾ ಖುಷಿಯಾಗಿದೆ: ನಟ ರಿಷಿ

Published : Jan 30, 2025, 05:04 PM IST

‘ರುದ್ರ ಗರುಡ ಪುರಾಣ’ ಸಸ್ಪೆನ್ಸ್‌ ಥ್ರಿಲ್ಲರ್‌ ಆಗಿದ್ದು, ಪ್ರೇಕ್ಷಕರಿಗೆ ಮೆಚ್ಚುಗೆ ಪಡೆದುಕೊಂಡಿದೆ. ಈ ಕಾರಣಕ್ಕೆ ನಿರ್ಮಾಪಕ ಲೋಹಿತ್ ಪ್ರೇಕ್ಷಕರಿಗೆ ಮತ್ತು ಚಿತ್ರತಂಡದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. 

PREV
16
ರುದ್ರ ಗರುಡ ಪುರಾಣ ಸಿನಿಮಾ ಗೆದ್ದಿದ್ದು ತುಂಬಾ ಖುಷಿಯಾಗಿದೆ: ನಟ ರಿಷಿ

‘ನಮ್ಮ ಚಿತ್ರ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಮಾತನಾಡುವುದು ನೋಡಿ ಖುಷಿಯಾಗಿದೆ. ಚಿತ್ರಮಂದಿರಗಳ ಸಂಖ್ಯೆ ಕೂಡ ಜಾಸ್ತಿಯಾಗಿದೆ. ತೆಲುಗು ಡಬ್ಬಿಂಗ್ ರೈಟ್ಸ್‌ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ. ನೋಡದವರು ಕೂಡಲೇ ಈ ಸಿನಿಮಾ ನೋಡಿ’ ಎಂದು ರಿಷಿ ಹೇಳಿದ್ದಾರೆ.

26

ಕೆ.ಎಸ್. ನಂದೀಶ್ ನಿರ್ದೇಶನ, ಅಶ್ವಿನಿ ವಿಜಯ್‌ ಲೋಹಿತ್‌ ನಿರ್ಮಾಣದ ‘ರುದ್ರ ಗರುಡ ಪುರಾಣ’ ಸಿನಿಮಾದ ಸಕ್ಸಸ್‌ಮೀಟ್‌ನಲ್ಲಿ ಅವರು ಈ ಮಾತು ಹೇಳಿದರು.

36

‘ರುದ್ರ ಗರುಡ ಪುರಾಣ’ ಸಸ್ಪೆನ್ಸ್‌ ಥ್ರಿಲ್ಲರ್‌ ಆಗಿದ್ದು, ಪ್ರೇಕ್ಷಕರಿಗೆ ಮೆಚ್ಚುಗೆ ಪಡೆದುಕೊಂಡಿದೆ. ಈ ಕಾರಣಕ್ಕೆ ನಿರ್ಮಾಪಕ ಲೋಹಿತ್ ಪ್ರೇಕ್ಷಕರಿಗೆ ಮತ್ತು ಚಿತ್ರತಂಡದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಾಸ್ತಿ ಪ್ರೇಕ್ಷಕರು ಸಿನಿಮಾ ನೋಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 

46

ಸುದ್ದಿಗೋಷ್ಠಿಯಲ್ಲಿ ಶಿವರಾಜ ಕೆ ಆರ್ ಪೇಟೆ, ಗಿರೀಶ್ ಶಿವಣ್ಣ, ಛಾಯಾಗ್ರಾಹಕ ಸಂದೀಪ್ ಕುಮಾರ್, ಸಂಕಲನಕಾರ ಮನು ಶೇಡ್ಗಾರ್, ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ಇದ್ದರು.

56

ರಿವೇಂಜ್‌ನ ಥ್ರಿಲ್ ಒದಗಿಸುವ ತನಿಖೆಯ ಕತೆ: ಬದುಕಿದ್ದಾಗ ಭೂಮಿ ಮೇಲೆ ಮಾಡಿದ ಪಾಪಗಳಿಗೆ ಸತ್ತು ನರಕಕ್ಕೆ ಹೋಗಿ ಶಿಕ್ಷೆ ಅನುಭವಿಸೋದು ಸುಳ್ಳು, ಇಲ್ಲಿ ಮಾಡಿದ ಪಾಪಕ್ಕೆ ಇಲ್ಲೇ ಶಿಕ್ಷೆ ಅನುಭವಿಸಿ ಎನ್ನುತ್ತದೆ ‘ರುದ್ರ ಗರುಡ ಪುರಾಣ’ ಚಿತ್ರ. ‘ಇಲ್ಲೇ ಸ್ವರ್ಗ, ಇಲ್ಲೇ ನರಕ. ಮೇಲೇನಿಲ್ಲ’ ಎನ್ನುವ ಹಾಡಿನ ಸಾಲನ್ನು ಗಟ್ಟಿಯಾಗಿ ನಂಬಿಕೊಂಡಿದೆ.

66

ಹಾಗಾದರೆ ಇಲ್ಲಿನ ಪಾಪಗಳಿಗೆ ಇಲ್ಲೇ ಶಿಕ್ಷೆ ಕೊಡೋದು ಯಾರು ಎನ್ನುವ ಕುತೂಹಲ ಮತ್ತು ಆ ಸಸ್ಪೆನ್ಸ್‌ ಹಿಂದಿರುವ ತಣ್ಣನೆಯ ಕ್ರೌರ್ಯ, ಇದರಿಂದ ಬದುಕು ಕಳೆದುಕೊಂಡಿದ್ದು ಯಾರೆಂಬ ಹುಡುಕಾಟದ ಆಸಕ್ತಿದಾಯಕ ತನಿಖಾ ಕಥನವಿದು.

Read more Photos on
click me!

Recommended Stories