ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ ಮೀನಾ (Meena) ಇನ್‌ಸ್ಟಾಗ್ರಾಂನಲ್ಲಿ ಬೇಬಿ ಬಂಪ್ (Baby Bump) ವಿಡಿಯೋ ಹಂಚಿಕೊಂಡಿದ್ದಾರೆ.
'ತುಂಬಾ ಬದಲಾವಣೆ ಆಗಿದೆ. ಇದನ್ನು ಧರಿಸಿ ಎದ್ದೇಳುವುದು ಸುಲಭವಾಯ್ತು. ದಪ್ಪ ಸೀರೆಗಳಲ್ಲಿ ಕವರ್ ಮಾಡಿಕೊಳ್ಳುತ್ತಿದ್ದೆ' ಎಂದು ಮೀನಾ ಬರೆದುಕೊಂಡಿದ್ದಾರೆ.
'ಈಗ ಸಿನಿಮಾದಲ್ಲಿ ಈ ಲುಕ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈಗ ಹೆಚ್ಚಿಗೆ ನ್ಯಾಚುರ್ ಆಗಿ ಕಾಣಿಸಬೇಕು. ಶಿಫಾನ್ ಸೀರೆ ಕೂಡ ಧರಿಸಬಹುದು' ಎಂದಿದ್ದಾರೆ.
ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೀರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗಕ್ಕೆ ಗುಡ್ ಬೈ ಕೇಳಿದ್ದರು. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಕಮ್ ಬ್ಯಾಕ್ ಮಾಡಿದ್ದಾರೆ.
ಮೀನಾ ಪುತ್ರಿ ನಿಹಾರಿಕಾ 5ನೇ ವಯಸ್ಸಿಗೆ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ನಿಹಾರಿಕಾ ಅಕ್ಕ ಆಗುತ್ತಿದ್ದಾಳೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ಮೀನಾ ನಿಜಕ್ಕೂ ಪ್ರಗ್ನೆಂಟ್ ಅಂದುಕೊಂಡು ಅನೇಕರು ಶುಭ ಹಾರೈಸುತ್ತಿದ್ದಾರೆ ಆದರೆ ಅಸಲಿ ಕಥೆನೇ ಬೇರೆ. ಮೀನಾ ಇದು ಸಿನಿಮಾಗೆ ಹಾಕಿರುವ ಲುಕ್.
ಹೌದು! ಹೆಸರು ರಿವೀಲ್ ಮಾಡಿರದ ಚಿತ್ರದಲ್ಲಿ ಮೀನಾ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದಲ್ಲಿ ಮೀನಾ ಗರ್ಭಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.